ಮಹಿಳಾ ರಾಷ್ಟ್ರಪತಿ ನಿಂತಿರುವಾಗ, ಪ್ರಧಾನಮಂತ್ರಿ ತಮ್ಮ ಕುರ್ಚಿಯಲ್ಲಿ ಕುಳಿತಿದ್ದಾರೆ – ಮೋದಿ ವಿರುದ್ಧ ದೀದಿ ವಾಗ್ದಾಳಿ

ಮಹಿಳಾ ರಾಷ್ಟ್ರಪತಿ ನಿಂತಿರುವಾಗ, ಪ್ರಧಾನಮಂತ್ರಿ ತಮ್ಮ ಕುರ್ಚಿಯಲ್ಲಿ ಕುಳಿತಿದ್ದಾರೆ – ಮೋದಿ ವಿರುದ್ಧ ದೀದಿ ವಾಗ್ದಾಳಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಇತ್ತೀಚಿನ ರಾಜ್ಯ ಭೇಟಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ  ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ನಡುವಿನ ವಾಗ್ವಾದ ತೀವ್ರಗೊಂಡಿದೆ. ಎರಡು ವರ್ಷದ ಹಿಂದಿನ ಪ್ರಧಾನಿ ಕುಳಿತಿರುವ ಮತ್ತು ರಾಷ್ಟ್ರಪತಿ ನಿಂತಿರುವ ಫೋಟೋವನ್ನು ಬಳಸಿಕೊಂಡು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರಪತಿ ಕಚೇರಿಯನ್ನು ಗೌರವಿಸುವ ಬಗ್ಗೆ ಪ್ರಧಾನಿಯವರು ದೊಡ್ಡ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಈ ಫೋಟೋವನ್ನು ಚೆನ್ನಾಗಿ ನೋಡೋಣ. ದೇಶದ ಮೊದಲ ಆದಿವಾಸಿ ಮಹಿಳಾ ರಾಷ್ಟ್ರಪತಿ ನಿಂತಿರುವಾಗ, ಪ್ರಧಾನಮಂತ್ರಿ ತಮ್ಮ ಕುರ್ಚಿಯಲ್ಲಿ ಆರಾಮವಾಗಿ ಕುಳಿತಿದ್ದಾರೆ. ರಾಷ್ಟ್ರಪತಿಗೆ ಗೌರವ ನೀಡುತ್ತೇವೆ ಎಂಬ ಎಲ್ಲಾ ಹೇಳಿಕೆಗಳು ಖಾಲಿ ಮಾತುಗಳಂತೆ ಕಾಣುತ್ತವೆ. ಏಕೆಂದರೆ ಈ ದೃಶ್ಯವೇ ತೋರಿಸುತ್ತದೆ ಅವರ ಮಾತುಗಳು ಕೇವಲ ಟೊಳ್ಳು ಎಂಬುದಾಗಿ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ. ಸಾರ್ವಜನಿಕ ಸಭೆಯಲ್ಲಿ ಮಮತಾ ಬ್ಯಾನರ್ಜಿ ನೀಡಿದ ಭಾಷಣದ ಕಿರು ವಿಡಿಯೊವನ್ನು ಹಂಚಿಕೊಂಡು ಈ ಹೇಳಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುತ್ತೇನೆ, 2028ಕ್ಕೆ ನಾನೇ ಸಿಎಂ ಆಗುತ್ತೇನೆ : ಯತ್ನಾಳ್

ಈ ವಿಡಿಯೊದಲ್ಲಿ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಮತ್ತು 2024ರ ಬಿಜೆಪಿ ಹಿರಿಯ ಲಾಲ್ ಕೃಷ್ಣ ಅಡ್ವಾಣಿ ಅವರ ಛಾಯಾಚಿತ್ರವನ್ನು ಇಬ್ಬರು ತೃಣಮೂಲ ನಾಯಕಿಯರು ಹಿಡಿದಿರುವುದನ್ನು ಕಾಣಬಹುದು. ಈ ಫೋಟೋವನ್ನು ಮಾರ್ಚ್ 31, 2024 ರಂದು ರಾಷ್ಟ್ರಪತಿ ಮತ್ತು ಪ್ರಧಾನಿ ಅಡ್ವಾಣಿ ಅವರನ್ನು ಭೇಟಿ ಮಾಡಿ ಭಾರತ ರತ್ನ ನೀಡಿ ಗೌರವಿಸಿದಾಗ ತೆಗೆಯಲಾಗಿತ್ತು.

ಗೌರವಾನ್ವಿತ ಪ್ರಧಾನ ಮಂತ್ರಿಗಳೇ, ಇದು ನಿಮಗಾಗಿ. ನೀವು ರಾಷ್ಟ್ರಪತಿ, ಮಹಿಳೆ ಮತ್ತು ಬುಡಕಟ್ಟು ನಾಯಕರನ್ನು ಗೌರವಿಸುತ್ತೀರಾ? ಹಾಗಾದರೆ ರಾಷ್ಟ್ರಪತಿಗಳು ನಿಂತಿದ್ದಾರೆ, ನೀವು ಏಕೆ ಕುಳಿತಿದ್ದೀರಿ? ನಾನು ನಿಮಗೆಲ್ಲರಿಗೂ ತೋರಿಸಿದ್ದೇನೆ. ನಾವು ರಾಷ್ಟ್ರಪತಿಯನ್ನು ಗೌರವಿಸುತ್ತೇವೆ. ಆದರೆ ಅವರು ಹಾಗೆ ಮಾಡುವುದಿಲ್ಲ. ಈ ಛಾಯಾಚಿತ್ರವು ಯಾರು ಗೌರವಿಸುತ್ತಾರೆ ಮತ್ತು ಯಾರು ಗೌರವಿಸುವುದಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.

Kishor KV

Leave a Reply

Your email address will not be published. Required fields are marked *