ಆವತ್ತು ಸೋಲದಿದ್ರೆ ಇವತ್ತು ಗೆಲ್ಲುತ್ತಿರಲಿಲ್ಲ – ಚಿನ್ನದ ಹುಂಡಿ ಚಿಲ್ರೆ ಕಾಸಿಗೆ ಇಟ್ಟಿದ್ರಾ?
ಬೆಂಚ್ ಕಾದು ಚರಿತ್ರೆ ಬರೆದ ಸಂಜು

ಆವತ್ತು ಸೋಲದಿದ್ರೆ ಇವತ್ತು ಗೆಲ್ಲುತ್ತಿರಲಿಲ್ಲ – ಚಿನ್ನದ ಹುಂಡಿ ಚಿಲ್ರೆ ಕಾಸಿಗೆ ಇಟ್ಟಿದ್ರಾ?ಬೆಂಚ್ ಕಾದು ಚರಿತ್ರೆ ಬರೆದ ಸಂಜು

ಆವತ್ತು ಭಾರತ ಸೌತ್ ಆಫ್ರಿಕಾ ವಿರುದ್ಧ ಸೋತಿರಲಿಲ್ಲ ಅಂದ್ರೆ ಬಹುಶಃ ಇವತ್ತು ಚಾಂಪಿಯನ್ಸ್ ಆಗ್ತಿರಲಿಲ್ಲ ಅನ್ಸುತ್ತೆ. ಯಾಕಂದ್ರೆ ಆ ಸೋಲಿನಿಂದ ಕಲಿತ ಪಾಠ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇತಿಹಾಸ ಸೃಷ್ಟಿಸುಂತೆ ಮಾಡಿದೆ. ಪ್ಲೇಯಿಂಗ್ 11ನಲ್ಲಾದ ಬದಲಾವಣೆ, ಬ್ಯಾಟಿಂಗ್ ಆರ್ಡರ್ ಸರ್ಜರಿ ಇವತ್ತು ಟ್ರೋಫಿ ಗಿಫ್ಟ್ ನೀಡಿದೆ. ಈ ಟ್ರೋಫಿ ಗೆಲುವಿನಲ್ಲಿ ಆಪತ್ಬಾಂಧವನಾಗಿ ನಿಂತದ್ದೇ ಚೇಟಾ ಸಂಜು ಸ್ಯಾಮ್ಸನ್. ಓಪನರ್ ಆಗಿ ಶಸ್ತ್ರ ಹೆಗಲಿಗೇರಿಸಿಕೊಂಡ ಸಂಜು ಈಗ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯೊಂದಿಗೆ ಜಗತ್ತನ್ನೇ ಗೆದ್ದಿದ್ದಾರೆ.

ಇದನ್ನೂ ಓದಿ : ಇದು ಚರಿತ್ರೆ ಸೃಷ್ಟಿಸೋ ಅವತಾರ – 3ನೇ ಟ್ರೋಫಿಯೋ.. ಚೊಚ್ಚಲ ಕಪ್?

2024ರ ಟಿ-20 ವಿಶ್ವಕಪ್​ನಿಂದ ಒಂದೇ ಒಂದು ಸರಣಿಯನ್ನೂ ಸೋಲದೆ ಭಾರತ 2026ರ ಟಿ-20 ವಿಶ್ವಕಪ್ ಅಖಾಡಕ್ಕೆ ಧುಮುಕಿತ್ತು. ಌಂಡ್ ಟ್ರೋಫಿ ಗೆಲ್ಲೋ ಫೇವರೆಟ್ ಟೀಂ ಕೂಡ ಆಗಿತ್ತು. ಗ್ರೂಪ್​ ಸ್ಟೇಜ್​ನಲ್ಲಿ ನಾಲ್ಕಕ್ಕೇ ನಾಲ್ಕೂ ಮ್ಯಾಚ್ ಗೆದ್ರೂ ಅಮೆರಿಕ ಮತ್ತು ನೆದರ್ ಲ್ಯಾಂಡ್ ಶಾಕ್ ಟ್ರೀಟ್​ಮೆಂಟ್ ಕೊಟ್ಟಿದ್ವು. ಕ್ರಿಕೆಟ್ ಶಿಶುಗಳ ಎದುರಲ್ಲೇ ಭಾರತ ತಿಣಕಾಡಿಕೊಂಡೇ ಗೆದ್ದಿತ್ತು. ಬಟ್ ಓವರ್ ಕಾನ್ಫಿಡೆನ್ಸ್​​ನಲ್ಲಿದ್ದ ಟೀಂ ಇಂಡಿಯಾಗೆ ಅದು ಅರ್ಥವಾಗ್ಲೇ ಇಲ್ಲ. ಪರಿಣಾಮ ಸೂಪರ್ 8 ಸುತ್ತಿಲ ಫಸ್ಟ್ ಮ್ಯಾಚಲ್ಲೇ ಸೌತ್ ಆಫ್ರಿಕಾ ಹೀನಾಯವಾಗಿ ಸೋಲ್ತಾರೆ. ಈ ಸೋಲು ಭಾರತಕ್ಕೆ ಸೆಮೀಸ್ ಟಿಕೆಟ್ ಕೂಡ ಸಿಗಲ್ಲ ಎನ್ನುವಂಥ ಸಿಚುಯೇಷನ್ ಸೃಷ್ಟಿಸಿತ್ತು. ಮುಂದಿನ ಒಂದೊಂದು ಪಂದ್ಯಗಳೂ ಡು ಆರ್ ಡೈ. ಇಂಥಾ ಟೈಮಲ್ಲಿ ಬಿಸಿಸಿಐ ಕಣ್ಣಿಗೆ ಸಂಜೀವಿನಿಯಾಗಿ ಕಂಡಿದ್ದೇ ಸಂಜು ಸ್ಯಾಮ್ಸನ್.

ಸಂಜುನಿಂದಲೇ ಸೆಮೀಸ್​.. ಫೈನಲ್.. ಕೊನೆಗೆ ಕಪ್!

ಸೂಪರ್ 8 ಸುತ್ತಿನಲ್ಲಿ ಸೌತ್ ಆಫ್ರಿಕಾ ವಿರುದ್ಧ 76 ರನ್​ಗಳ ಅಂತರದಿಂದ ಸೋತ ಭಾರತ ಮೈನಸ್ 3 ನೆಟ್​ ರನ್​ರೇಟ್ ಇತ್ತು. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಮಸ್ಟ್ ಌಂಡ್ ಶುಡ್ ಗೆಲ್ಲಲೇಬೇಕಿತ್ತು. ಗೆದ್ರೂ ಸೆಮೀಸ್​ಗೆ ಹೋಗ್ತಾರೋ ಇಲ್ವೋ ಕ್ಲಾರಿಟಿ ಇರ್ಲಿಲ್ಲ. ಆಗ ಪ್ಲೇಯಿಂಗ್ 11ನಲ್ಲಿ 2 ಬದಲಾವಣೆ ತರ್ತಾರೆ. ರಿಂಕು ಸಿಂಗ್ ಹೊರಗಿಟ್ಟು ಸಂಜುನ ಓಪನರ್ ಆಗಿ ಕಳಿಸ್ತಾರೆ. ಬ್ಯಾಟಿಂಗ್ ಆರ್ಡರ್ ಚೇಂಜ್ ಮಾಡ್ತಾರೆ. ಌಂಡ್ ವಾಷಿಂಗ್ಟನ್ ಸುಂದರ್ ಹೊರಗಿಟ್ಟು ಅಕ್ಷರ್ ಪಟೇಲ್​​ಗೆ ಚಾನ್ಸ್ ಕೊಡ್ತಾರೆ. ಈ ಎರಡೂ ಬದಲಾವಣೆಗೂ ಭಾರತಕ್ಕೆ ಪ್ಲಸ್ ಆಯ್ತು. ಗ್ರೂಪ್ ಸ್ಟೇಜಲ್ಲಿ ಬೆಂಚ್ ಕಾದಿದ್ದ ಸಂಜು ಆ ಮೇಲೆ ಸಿಡಿಲಮರಿಯಂತೆ ಅಬ್ಬರಿಸಿದ್ರು.

ಸಂಜು ಸ್ಪೆಷಲ್ ಸ್ಯಾಮ್ಸನ್!

ಎದುರಾಳಿ                        ರನ್ಸ್                             ಗೆಲುವು

ಜಿಂಬಾಬ್ವೆ                        24(15)                         72 ರನ್ಸ್

ವೆಸ್ಟ್ ಇಂಡೀಸ್                 97(50)                         5 ವಿಕೆಟ್ಸ್

ಇಂಗ್ಲೆಂಡ್                       89(42)                          7 ರನ್ಸ್

ನ್ಯೂಜಿಲೆಂಡ್                    89(46)                          96 ರನ್ಸ್

ಈ ನಾಲ್ಕು ಪಂದ್ಯಗಳ ಪೈಕಿ ಸಂಜು ಬ್ಯಾಟಿಂಗ್ ತುಂಬಾನೇ ಮುಖ್ಯ ಆಗಿದೆ. ಸತತ ಮೂರು ಸಲ ಶತಕ ವಂಚಿತರಾದ್ರೂ ಓಪನರ್ ಆಗಿ ಕಣಕ್ಕಿಳಿದು ಆಲ್ಮೋಸ್ಟ್ ಡೆತ್ ಓವರ್ಸ್​ವರೆಗೂ ಕ್ರೀಸ್ ಕಚ್ಚಿ ನಿಂತಿದ್ದರಿಂದಲೇ ನೆಕ್ಸ್​ಟ್ ಬರೋ ಬ್ಯಾಟರ್ಸ್ ಫಿಯರ್​ಲೆಸ್ ಆಗಿ ಬ್ಯಾಟ್ ಬೀಸಿದ್ರು. ಐದು ಪಂದ್ಯಗಳಲ್ಲಿ ಬ್ಯಾಟ್ ಬೀಸಿದ ಸಂಜು 88ರ ಸರಾಸರಿಯಲ್ಲಿ 321 ರನ್‌ ಬಾರಿಸಿದರು. ಈ ಮೂಲಕ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಗರಿಷ್ಠ ರನ್ ಸಾಧನೆ ಮಾಡಿದರು. ಈ ಅದ್ಭುತ ಪ್ರದರ್ಶನದ ಮೂಲಕ ಸಂಜು ಹಲವು ದಾಖಲೆಗಳನ್ನೂ ಬರೆದಿದ್ದಾರೆ.

ಬೆಂಚ್ ಕಾದು ಚರಿತ್ರೆ ಬರೆದ ಸಂಜು!

ಟೂರ್ನಿಯಲ್ಲಿ 24 ಸಿಕ್ಸ್ ಬಾರಿಸಿ ಹೈಯೆಸ್ಟ್ ಸಿಕ್ಸ್ ದಾಖಲೆ

ನಾಲ್ಕು ಪಂದ್ಯಗಳಲ್ಲಿ ಮೊದಲ ಓವರ್‌ ನಲ್ಲಿ ಸಿಕ್ಸರ್‌ ವಿಶ್ವ ದಾಖಲೆ

ಟಿ20 ವಿಶ್ವಕಪ್ ಫೈನಲ್‌ ನಲ್ಲಿ ಅತಿ ಹೆಚ್ಚು ಸ್ಕೋರ್ 89 ರನ್ಸ್

2021 ರಲ್ಲಿ ಕೇನ್ ವಿಲಿಯಮ್ಸನ್ 85 ರನ್‌ಗಳ ಹಿಂದಿನ ದಾಖಲೆ

321 ರನ್ ಗಳಿಸಿ ಕೊಹ್ಲಿ ದಾಖಲೆ (319) ಬ್ರೇಕ್ ಮಾಡಿದ ಸಂಜು

ಸೆಮಿಫೈನಲ್ ಮತ್ತು ಫೈನಲ್ ನಲ್ಲಿ ಅರ್ಧಶತಕ ಬಾರಿಸಿದ 3ನೇ ಆಟಗಾರ

ಅಭಿಷೇಕ್ ಜೊತೆ ಫೈನಲ್ ನಲ್ಲಿ 98 ರನ್​ಗಳ ಜೊತೆಯಾಟದ ಇತಿಹಾಸ

ಟೀಂ ಇಂಡಿಯಾ ಈ ಟೂರ್ನಿಯಲ್ಲಿ ಒಟ್ಟು 9 ಪಂದ್ಯಗಳನ್ನ ಆಡಿದೆ. ಈ ಪೈಕಿ ಸಂಜು ಸ್ಯಾಮ್ಸನ್ ಆಡಿರೋದು ಐದು ಪಂದ್ಯಗಳನ್ನ  ಮಾತ್ರ. ಹೀಗಿದ್ರೂ ಟೂರ್ನಿಯ ಟಾಪ್ 3 ಸ್ಕೋರರ್ ಆಗಿದ್ದು ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಬಹುಶಃ ಎಲ್ಲಾ ಮ್ಯಾಚ್​ಗಳನ್ನೂ ಆಡಿದಿದ್ರೆ ಇನ್ನೂ ಅದೆಷ್ಟು ರೆಕಾರ್ಡ್ಸ್ ಕ್ರಿಯೇಟ್ ಮಾಡ್ತಿದ್ರೋ ಏನೋ. ಇನ್ನು ಭಾರತದ  ಗೆಲುವನ್ನ ಸಂಭ್ರಮಿಸಿರೋ ವಿರಾಟ್ ಕೊಹ್ಲಿ ಕೂಡ ಸಂಜು ಸ್ಯಾಮ್ಸನ್‌ರನ್ನ ಹಾಡಿಹೊಗಳಿದ್ದಾರೆ.  ಶ್ರೇಷ್ಠ ಆಟಗಾರ ಸಂಜು ಸ್ಯಾಮ್ಸನ್ ಅವರಿಂದ ಅದ್ಭುತ ಟೂರ್ನಿಯನ್ನು ಕಂಡೆವು. ಕ್ರೂಶಿಯಲ್ ಟೈಮಲ್ಲಿ ನೀವು ಅತ್ಯುತ್ತಮವಾಗಿ ಪ್ರದರ್ಶನ ನೀಡಿದ್ದೀರಿ. ನನಗೆ ತುಂಬಾ ಸಂತೋಷವಾಗಿದೆ ಚೆಟಾ ಎಂದು ವಿರಾಟ್‌ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದಿದ್ದಾರೆ. ಇನ್ನು ಪಂದ್ಯದ ಬಳಿಕ ಮಾತನಾಡಿದ ಸಂಜು ತಮ್ಮ ಸಕ್ಸಸ್​ ಕ್ರೆಡಿಟ್​ನ ಸಚಿನ್ ತೆಂಡೂಲ್ಕರ್​ಗೆ ನೀಡಿದ್ದಾರೆ. ನನ್ನ ಕಷ್ಟದ ಟೈಮಲ್ಲಿ ಜೊತೆಗಿದ್ದು ಸಪೋರ್ಟ್ ಮಾಡಿದ್ರು ಎಂದಿದ್ದಾರೆ.  ಒಟ್ನಲ್ಲಿ ಸಂಜು ಕಂ ಬ್ಯಾಕ್ ಟಿ-20ಐ ಟೀಮ್​ಗೆ ಮತ್ತಷ್ಟು ಬೂಸ್ಟ್ ನೀಡಿದೆ. ಟಾಪ್ ಆರ್ಡರ್ ಬ್ಯಾಟಿಂಗ್ ಪರ್ಫಾಮೆನ್ಸ್ ಇನ್ನೂ ಸ್ಟ್ರಾಂಗ್ ಆಗಿದೆ. ಈ ಬಾರಿಯ ಟೂರ್ನಿಯಲ್ಲಿ ಆಲ್​ರೌಂಡ್ ಪ್ರದರ್ಶನ ಚೆನ್ನಾಗಿ ವರ್ಕ್ ಆಗಿದೆ.

Shantha Kumari

Leave a Reply

Your email address will not be published. Required fields are marked *