ಟಿ20 ವಿಶ್ವಕಪ್ನಲ್ಲಿ ಸೂರ್ಯೋದಯ – 3ನೇ ಟಿ20 ವಿಶ್ವಕಪ್ ಗೆದ್ದ ಭಾರತ!

ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಹಾಗೂ ಬೌಲರ್ಗಳ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನದ ಸಹಾಯದಿಂದ ಭಾರತ ತಂಡ, 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೀಮ್ ಇಂಡಿಯಾ ಮೂರನೇ ಚುಟುಕು ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಇದರೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರು ಬಾರಿ ಚಾಂಪಿಯನ್ಸ್ ಆದ ವಿಶ್ವದ ಮೊದಲ ತಂಡ ಎಂಬ ದಾಖಲೆಯನ್ನು ಭಾರತ ಬರೆಯಿತು. ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನವನ್ನು ತೋರಿದ ಹೊರತಾಗಿಯೂ ಫೈನಲ್ ಸೋಲಿನಿಂದಾಗಿ ನ್ಯೂಜಿಲೆಂಡ್ ತಂಡದ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಕನಸು ಭಗ್ನವಾಯಿತು.
ಗುರುವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 256 ರನ್ಗಳ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ ತಂಡ, ಅಕ್ಷರ್ ಪಟೇಲ್ ಸ್ಪಿನ್ ಮೋಡಿಗೆ ನಲುಗಿತು. ಆ ಮೂಲಕ ತನ್ನ ಪಾಲಿನ 19 ಓವರ್ಗಳಿಗೆ 159 ರನ್ಗಳಿಗೆ ಆಲ್ಔಟ್ ಆಯಿತು. ಸ್ಕೋರ್ ಬೋರ್ಡ್ ಒತ್ತಡದಲ್ಲಿ ಕಿವೀಸ್ ತಂಡದ ಬ್ಯಾಟ್ಸ್ಮನ್ಗಳು ದೀರ್ಘಾವಧಿ ಕ್ರೀಸ್ನಲ್ಲಿ ಉಳಿಯಲು ಸಾಧ್ಯವಾಗಿಲ್ಲ. ಆದರೆ, ಆರಂಭಿಕ ಬ್ಯಾಟ್ಸ್ಮನ್ ಟಿಮ್ ಸೈಫರ್ಟ್ ಪ್ರತಿರೋಧ ತೋರಿ ಅರ್ಧಶತಕವನ್ನು ಸಿಡಿಸಿದ್ದು ಬಿಟ್ಟರೆ, ಇನ್ನುಳಿದ ಬ್ಯಾಟರ್ಸ್ ವಿಫಲರಾದರು.
ಇದನ್ನೂ ಓದಿ: ಅಯ್ಯಯ್ಯೋ.. ಮೈ ಸುಡೋ ಬಿಸಿಲು – ಏಪ್ರಿಲ್, ಮೇ ನಲ್ಲೂ ರಾಜ್ಯದಲ್ಲಿ ತಾಪಾಮಾನ ಏರಿಕೆ
ಬೃಹತ್ ಮೊತ್ತದ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ ತಂಡದ ಪರ ಇನಿಂಗ್ಸ್ ಆರಂಭಿಸಿದ ಟಿಮ್ ಸೈಫರ್ಟ್ ಹಾಗೂ ಫಿನ್ ಆಲೆನ್, 31 ರನ್ಗಳ ಜೊತೆಯಾಟವನ್ನು ಆಡಿದರು. ಸೆಮಿಫೈನಲ್ನಲ್ಲಿ ಸ್ಪೋಟಕ ಶತಕ ಬಾರಿಸಿದ್ದ ಫಿನ್ ಆಲೆನ್, ಈ ಪಂದ್ಯದಲ್ಲಿ ಕೇವಲ 9 ರನ್ ಗಳಿಸಿ ಅಕ್ಷರ್ ಪಟೇಲ್ಗೆ ಶರಣಾದರು. ನಂತರ ಕ್ರೀಸ್ಗೆ ಬಂದ ರಚಿನ್ ರವೀಂದ್ರ ಅವರನ್ನು ಜಸ್ಪ್ರೀತ್ ಬುಮ್ರಾ ಕಟ್ಟಿ ಹಾಕಿದರು. ನಂತರ ಅಕ್ಷರ್ ಪಟೇಲ್ ಅಪಾಯಕಾರಿ ಗ್ಲೆನ್ ಫಿಲಿಪ್ಸ್ ಅವರನ್ನು ಔಟ್ ಮಾಡಿದರು. ಕೇವಲ 3 ರನ್ಗೆ ಮಾರ್ಕ್ ಚಾಪ್ಮನ್ ಅವರನ್ನು ಹಾರ್ದಿಕ್ ಪಾಂಡ್ಯ ಔಟ್ ಮಾಡಿದರು. ಒಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್ ಮಾಡಿದ್ದ ಟಿಮ್ ಸೈಫರ್ಟ್, 26 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ ಎರಡು ಬೌಂಡರಿಗಳೊಂದಿಗೆ 52 ರನ್ ಗಳಿಸಿ ಕಿವೀಸ್ಗೆ ಭರವಸೆ ಮೂಡಿಸಿದ್ದರು. ಆದರೆ, ಅವರನ್ನು ವರುಣ್ ಚಕ್ರವರ್ತಿ ಕಟ್ಟಿ ಹಾಕಿದರು. ಆ ಮೂಲಕ 72 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಕಿವೀಸ್ ಸಂಕಷ್ಟಕ್ಕೆ ಸಿಲುಕಿತು.
ಅಭಿಷೇಕ್ ಔಟ್ ಆದ ಬಳಿಕ ಸಂಜು ಸ್ಯಾಮ್ಸನ್ ಜತೆಗೆ ಆಡಿದ ಇಶಾನ್ ಕಿಶನ್ ಕೂಡ ಅಬ್ಬರಿಸಿದರು. ಅವರು ಆಡಿದ 25 ಎಸೆತಗಳಲ್ಲಿ4 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 54 ರನ್ ಗಳಿಸಿದರು. ಅಲ್ಲದೆ ಸಂಜು ಜೊತೆಗೆ ಎರಡನೇ ವಿಕೆಟ್ಗೆ 48 ಎಸೆತಗಳಲ್ಲಿ 105 ರನ್ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಇಶಾನ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ 317 ರನ್ಗಳನ್ನು ಕಲೆ ಹಾಕಿದರು.

ನೋಡಿರಿ

