ಬ್ಯಾಟಿಂಗ್ ನಿಂದಲೇ ಭಾರತಕ್ಕೆ ಕಪ್? – ಬುಮ್ರಾ ಬಿಟ್ರೆ ಬೌಲಿಂಗ್ ವೀಕ್ ಆಯ್ತಾ?
ರೋಹಿತ್ ಸಾಮರ್ಥ್ಯ ಸೂರ್ಯನಿಗೆ ಇದ್ಯಾ?

ಟಿ-20ಐ ಫಾರ್ಮೆಟ್ನಲ್ಲಿ ಸಾಮ್ರಾಟರಾಗಿ ಮೆರೀತಿರೋ ಟೀಂ ಇಂಡಿಯಾ ಮತ್ತೊಮ್ಮೆ ವಿಶ್ವಕಪ್ ಗದ್ದುಗೆ ಏರೋಕೆ ಇನ್ನೊಂದು ಹೆಜ್ಜೆಯಷ್ಟೇ ಬಾಕಿ. ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನ್ಯೂಜಿಲೆಂಡ್ ಗೆ ನೀರು ಕುಡಿಸಿ ಟ್ರೋಫಿ ಎತ್ತಿ ಹಿಡಿಯೋಕೆ ಸರ್ವಸನ್ನದ್ಧರಾಗಿದ್ದಾರೆ. ಕಳೆದ 2 ವರ್ಷಗಳ ಭಾರತದ ಜರ್ನಿ ನೋಡಿದ್ರೆ ಈ ಮ್ಯಾಚ್ನೂ ಗೆದ್ದು ಚಾಂಪಿಯನ್ಸ್ ಆಗೋ ಫೇವರೆಟ್ ಟೀಂ ಆಗಿದ್ದಾರೆ. ಬಟ್ ಗೇಮ್ ಅಂತಾ ಬಂದಾಗ ಎಲ್ಲಿ ಬೇಕಾದ್ರೂ ಉಲ್ಟಾ ಹೊಡೀಬೋದು. ಌಂಡ್ ಭಾರತದ ಕೆಲ ವೀಕ್ನೆಸ್ ಕೂಡ ಇದೆ. ಕಳೆದ ಪಂದ್ಯದಲ್ಲೂ ಅದು ರಿವೀಲ್ ಆಗಿದೆ.
ಇದನ್ನೂ ಓದಿ : 2023ರ ಸೋಲಿನ ಕಹಿ ತೊಲಗುತ್ತಾ? – ಮೋದಿ ಸ್ಟೇಡಿಯಮ್ನ ಭಯವೇಕೆ?
2026 ಟಿ-20 ವಿಶ್ವಕಪ್ ಜರ್ನಿಯಲ್ಲಿ 8 ಪಂದ್ಯಗಳ ಪೈಕಿ 7 ಮ್ಯಾಚ್ಗಳನ್ನ ಗೆದ್ದು ಫೈನಲ್ನಲ್ಲಿರೋ ಭಾರತ ಕಿವೀಸ್ ವಿರುದ್ಧ ಕಣಕ್ಕಿಳಿಯುತ್ತೆ. ಕಳೆದ ಮೂರು ಪಂದ್ಯಗಳ ಪರ್ಫಾಮೆನ್ಸ್ ನೋಡಿದಾಗ ಮೋಸ್ಟ್ ಡೇಂಜರಸ್ ಆಗಿ ಕಾಣ್ತಿದ್ದಾರೆ. ಬ್ಯಾಟಿಂಗ್ ಅಂತೂ ನೆಕ್ಸ್ಟ್ ಲೆವೆಲ್ನಲ್ಲಿದೆ. ಬಟ್ ಎದುರಾಳಿಯಾಗಿರೋ ನ್ಯೂಜಿಲೆಂಡ್ ಕೂಡ ಬಲಿಷ್ಠವಾಗೇ ಬಂದಿದೆ. ಗ್ರೂಪ್ ಸ್ಟೇಜ್, ಸೂಪರ್ 8ನಲ್ಲಿ ಎಡವಿದ್ರೂ ಕೂಡ ಸೆಮೀಸ್ನಲ್ಲಿ ಗ್ರೇಟ್ ಕಂ ಬ್ಯಾಕ್ ಮಾಡಿದ್ದಾರೆ. ಹೀಗಾಗಿ ಫೈನಲ್ ಮ್ಯಾಚ್ ಹೈವೋಲ್ಟೇಜ್ ಆಗಿರೋದ್ರಲ್ಲಿ ಡೌಟೇ ಇಲ್ಲ.
ಭಾರತಕ್ಕಿರೋ ಪ್ಲಸ್ ಪಾಯಿಂಟ್ಸ್!
- ಓಪನರ್ ಸಂಜು ಸ್ಯಾಮ್ಸನ್ ಅದ್ಭುತ ಫಾರ್ಮ್ ನಲ್ಲಿ ಬ್ಯಾಟಿಂಗ್
- ಬ್ಯಾಟಿಂಗ್ ಡೆಪ್ತ್ ಌಂಡ್ ಭಾರತೀಯರಿಂದ ಸೂಪರ್ ಸ್ಟ್ರೈಕ್ ರೇಟ್
- ಲೆಫ್ಟ್ ರೈಟ್ ಕಾಂಬಿನೇಷನ್ ಇರೋದ್ರಿಂದ ಸ್ಪಿನ್ನರ್ಸ್ ಎದುರು ಫೈಟ್
- ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ನಿಂದಲೇ ಗೆದ್ದಿರೋ ಭಾರತ
- ಜಸ್ಪ್ರೀತ್ ಬೂಮ್ರಾನಂತಹ ವರ್ಲ್ಡ್ ಕ್ಲಾಸ್ ಬೌಲರ್ ಇರೋದೇ ಅದೃಷ್ಟ
ಇದಿಷ್ಟು ಕಪ್ ಗೆಲ್ಲೋಕೆ ಭಾರತಕ್ಕೆ ಇರೋ ಪಾಸಿಟಿವ್ ಪಾಯಿಂಟ್ಸ್. ಌಂಡ್ ಟೀಂ ಸ್ಪಿರಿಟ್. ಅರ್ಶದೀಪ್ ಸಿಂಗ್, ಪಾಂಡ್ಯ ಬೌಲಿಂಗ್ ಕೂಡ ಕ್ರೂಶಿಯಲ್ ಟೈಮಲ್ಲಿ ಪ್ರೆಶರ್ ಫ್ರೀ ಮಾಡ್ತಿದೆ. ಅಕ್ಷರ್ ಪಟೇಲ್ ಪ್ರಸೆನ್ಸ್ ಕೂಡ ಪಂದ್ಯಕ್ಕೆ ತುಂಬಾನೇ ಟರ್ನಿಂಗ್ ಪಾಯಿಂಟ್ಸ್ ಕೊಡ್ತಿದೆ.
ಭಾರತಕ್ಕಿರೋ ಚಾಲೆಂಜಸ್ ಏನು?
- ಮುಖ್ಯವಾಗಿ ಅಭಿಷೇಕ್ ಶರ್ಮಾ ಫಾರ್ಮ್ ಗೆ ಬಂದಿಲ್ಲ
- ಬುಮ್ರಾ ಹೊರತುಪಡಿಸಿ ಬೌಲಿಂಗ್ ನಲ್ಲಿ ತುಂಬಾ ದುಬಾರಿ
- ಸ್ಪೆಷಲಿಸ್ಟ್ ಸ್ಪಿನ್ನರ್ ವರುಣ್ ಚಕ್ರವರ್ತಿ ಈ ಸಲ ತುಂಬಾ ದುಬಾರಿ
- 6ನೇ ಬೌಲರ್ ಕೊರತೆ, ದುಬೆ ಓವರ್ ಗಳು ತೀರಾ ದುಬಾರಿ
- ಮೋದಿ ಸ್ಟೇಡಿಯಂನಲ್ಲಿ 2 ಬಿಗ್ ಮ್ಯಾಚ್ ಸೋತಿರೋ ಭಾರತ
- ರೋಹಿತ್ ಶರ್ಮಾ ಥರ ಸೂರ್ಯ ಕ್ಯಾಪ್ಟನ್ಸಿ ವರ್ಕ್ ಆಗುತ್ತಾ?
- ಫೀಲ್ಡಿಂಗ್ ನಲ್ಲಿ ಪದೇಪದೆ ಕ್ಯಾಚ್ ಡ್ರಾಪ್ ಹಾಗೇ ಮಿಸ್ ಫೀಲ್ಡ್

ನೋಡಿರಿ

