ನನ್ನ ಮುಂದೆ ನಿನ್ನ ಆಟ ನಡೆಯಲ್ಲ.. – ತನ್ನ ಮುಂದೆ ಕುಣಿದ ಬಾಲಕಿಯನ್ನು ಅಟ್ಟಾಡಿಸಿಕೊಂಡು ಹೋದ ಹುಂಜ

ಪುಟ್ಟ ಮಕ್ಕಳೇ ಹಾಗೆ, ತುಂಟಾಟ ಮಾಡುವುದರಲ್ಲಿ ಎತ್ತಿದ ಕೈ. ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳುವುದೇ ಹೆಚ್ಚು. ಈ ಪುಟ್ಟ ಹುಡುಗಿಯದ್ದು ಅದೇ ಕಥೆ. ಹುಂಜದ ಮುಂದೆ ಪುಟ್ಟ ಹುಡುಗಿ ಕುಣಿದಾಡಿದ್ದಾರೆ. ಇದ್ರಿಂದ ಸಿಟ್ಟಾದ ಹುಂಜ ಆಕೆಯನ್ನು ಅಟ್ಟಾಡಿಸಿಕೊಂಡು ಹೋಗಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ನೆಟ್ಟಿಗರ ಮೊಗದಲ್ಲಿ ನಗು ತರಿಸಿದೆ.
ಇದನ್ನೂ ಓದಿ: ಬ್ಯುಸಿನೆಸ್ ಲೋಕಕ್ಕೆ ಮತ್ತೆ ಗೌತಮ್ ದಿವಾನ್ ಎಂಟ್ರಿ! – ಗೌತಮ್ ಆರ್ಭಟಕ್ಕೆ ಜೈದೇವ್ ಫುಲ್ ಶೇಕ್ ಶೇಕ್!
trollhaiklu_.ka10 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಶಾಲಾ ಸಮವಸ್ತ್ರ ಧರಿಸಿರುವ ಪುಟ್ಟ ಹುಡುಗಿಯೊಬ್ಬಳು ಹುಂಜ ಮುಂದೆ ಡ್ಯಾನ್ಸ್ ಮಾಡುತ್ತಿದ್ದಾಳೆ. ನೋಡ ನೋಡುತ್ತಿದ್ದಂತೆ ಈ ಪುಟ್ಟ ಹುಡುಗಿಯನ್ನು ಅಟ್ಟಾಡಿಸಿಕೊಂಡು ಹೋಗಿದ್ದು, ಆಕೆ ಒಂದೇ ಸಮನೆ ಓಡುತ್ತಿರುವುದನ್ನು ಕಾಣಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಹೋಗಿ ಹೋಗಿ ಗಂಡು ಕೋಳಿನಾ ಕೆಣಕಿದ್ದೀಯಾ ಎಂದು ಹೇಳಿದರೆ, ಮತ್ತೊಬ್ಬರು, ಸ್ಕೂಲ್ ಗೆ ಹೋಗೋದು ಬಿಟ್ಟು ಇದೆಲ್ಲಾ ಬೇಕಿತ್ತಾ ಎಂದು ಕಾಮೆಂಟ್ ನಲ್ಲಿ ಕೇಳಿದ್ದಾರೆ. ಇನ್ನೂ ಕೆಲವರು ಹುಂಜದ ಮುಂದೆ ನಿನ್ನ ಆಟ ನಡೆಯಲ್ಲ ಎಂದು ಹೇಳಿದ್ರೆ, ಇನ್ನೊಬ್ಬರು, ಸುಮ್ನೆ ಇರಲಾರದೇ ಇರುವೆ ಬಿಟ್ಕೊಳ್ಳೋದು ಅಂದ್ರೆ ಇದೇ ನೋಡಿ ಎಂದು ಹೇಳಿದ್ದಾರೆ.

ನೋಡಿರಿ

