ಆಡದ ಅಭಿಷೇಕ್.. ದುಬಾರಿ ವರುಣ್ – NZ ಬೇಟೆಗಿಲ್ವಾ ನಂಬರ್ 1 ಪ್ಲೇಯರ್ಸ್?
ವಿನ್ನಿಂಗ್ ಪ್ಲೇಯಿಂಗ್ 11 ಸರ್ಜರಿ ಬೇಕಾ?

ಕ್ರಿಕೆಟ್ ಅಭಿಮಾನಿಗಳಿಗೆ ಈಗ ಆಲ್ರೆಡಿ ಸಂಡೇ ಫೀವರ್ ಸ್ಟಾರ್ಟ್ ಆಗಿದೆ. ಅದ್ರಲ್ಲೂ ಭಾರತೀಯರಿಗಂತೂ ಸ್ಪೆಷಲ್ ಸಂಡೇ. ತವರಿನಲ್ಲೇ ಐಸಿಸಿ ಟ್ರೋಫಿ ಎತ್ತಿ ಹಿಡಿಯೋಕೆ ಸೂರ್ಯಕುಮಾರ್ ಕ್ಯಾಪ್ಟನ್ಸಿಯ ಬಾಯ್ಸ್ ರೆಡಿಯಾಗ್ತಿದ್ರೆ ಸೆಲೆಬ್ರೇಟ್ ಮಾಡೋಕೆ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ. ಆದ್ರೆ ಪಂದ್ಯಕ್ಕೂ ಮುನ್ನ ಅಭಿಷೇಕ್ ಶರ್ಮಾ ಮತ್ತು ವರುಣ್ ಚಕ್ರವರ್ತಿಯನ್ನ ಫೈನಲ್ ಪಂದ್ಯ ಆಡ್ಸೋದು ಬೇಡ ಅಂತಿದ್ದಾರೆ.
ಇದನ್ನೂ ಓದಿ : 2023ರ ಸೋಲಿನ ಕಹಿ ತೊಲಗುತ್ತಾ? – ಮೋದಿ ಸ್ಟೇಡಿಯಮ್ನ ಭಯವೇಕೆ?
ಸೂಪರ್ 8 ಸುತ್ತಿನ ಮೊದಲ ಮ್ಯಾಚಲ್ಲಿ ಭಾರತ ಸೋಲನ್ನ ಕಂಡಿತ್ತು. ಆ ನಂತ್ರ ಪ್ಲೇಯಿಂಗ್ 11ನಲ್ಲಿ 2 ಬದಲಾವಣೆ ಮಾಡಿದ್ರು. ಆ ಬಳಿಕ ಆಡಿದ ಮೂರು ಪಂದ್ಯಗಳಲ್ಲಿ ಸೇಮ್ ಟೀಮ್ ಕಂಟಿನ್ಯೂ ಮಾಡಿದ್ದಾರೆ. ಌಂಡ್ ಮೂರೂ ಮ್ಯಾಚ್ಗಳನ್ನೂ ಗೆದ್ದಿದ್ದಾರೆ. ಆದ್ರೀಗ ಫೈನಲ್ ಪಂದ್ಯಕ್ಕೂ ಮುನ್ನ ಅಭಿಷೇಕ್ ಶರ್ಮಾ ಮತ್ತು ವರುಣ್ ಚಕ್ರವರ್ತಿ ಇಬ್ರನ್ನೂ ಹೊರಗಿಡಿ ಅಂತಿದ್ದಾರೆ. ಅದಕ್ಕೆ ಕಾರಣ ಅಭಿಷೇಕ್ ಶರ್ಮಾ ಕಡೆಯಿಂದ ರನ್ಸ್ ಬರ್ತಿಲ್ಲ ಅನ್ನೋದು ಌಂಡ್ ವರುಣ್ ಚಕ್ರವರ್ತಿ ಎದ್ವಾತದ್ವಾ ರನ್ಸ್ ಕೊಡ್ತಿದ್ದಾರೆ ಅನ್ನೋದು.
ಅಭಿಷೇಕ್ ಮತ್ತು ವರುಣ್ ಇಬ್ಬರದ್ದೂ ರನ್ಸ್ ಪ್ರಾಬ್ಲಂ!
ಭಾರತ ತಂಡದಲ್ಲಿ ಸದ್ಯ ತಲೆಬಿಸಿ ಇರೋದು ಅಂದ್ರೆ ಇವ್ರಿಬ್ಬರ ಬಗ್ಗೆಯೇ. ಅಭಿಷೇಕ್ ಶರ್ಮಾ ರನ್ಸ್ ಹೊಡೀತಿಲ್ಲ ಅಂದ್ರೆ ವರುಣ್ ಚಕ್ರವರ್ತಿ ರನ್ಸ್ ಕಂಟ್ರೋಲ್ ಮಾಡ್ತಿಲ್ಲ ಅನ್ನೋ ಚಿಂತೆ. ಇಂಟ್ರೆಸ್ಟಿಂಗ್ ಅಂದ್ರೆ ಇವ್ರಿಬ್ರೂ ಟಿ-20ಐ ಫಾರ್ಮೆಟ್ನಲ್ಲಿ ನಂಬರ್ 1 ಪ್ಲೇಯರ್ಸ್.. ಅಭಿಷೇಕ್ ಶರ್ಮಾ ನಂಬರ್ 1 ಬ್ಯಾಟರ್ ವರುಣ್ ಚಕ್ರವರ್ತಿ ನಂಬರ್ 1 ಬೌಲರ್. ಭಾರತದ ಪರ ಕಳೆದ 7 ಪಂದ್ಯಗಳಲ್ಲಿ ಓಪನರ್ ಆಗಿ ಆಡಿರೋ ಅಭಿಷೇಕ್ ಶರ್ಮಾ ಒಟ್ಟಾರೆಯಾಗಿ 89 ರನ್ಸ್ ಸ್ಕೋರ್ ಮಾಡಿದ್ದಾರೆ. ಜಿಂಬಾಬ್ವೆ ವಿರುದ್ಧ 55 ರನ್ ಗಳಿಸಿದ್ದೇ ಹೈಯೆಸ್ಟ್ ಸ್ಕೋರ್. ಹೀಗಾಗಿ ಫೈನಲ್ ಮ್ಯಾಚಲ್ಲೂ ಹಿಂಗೇ ಆಡಿದ್ರೆ ತಂಡಕ್ಕೆ ಹೊರೆಯಾಗ್ತಾರೆ ಅನ್ನೋದು ಆತಂಕಕ್ಕೆ ಕಾರಣವಾಗಿದೆ. ಌಂಡ್ ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಎಕ್ಸ್ಪೆನ್ಸಿವ್ ಆಗಿದ್ದಾರೆ. ಭಾರತ ಪರ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ 8 ಪಂದ್ಯಗಳಲ್ಲಿ 13 ವಿಕೆಟ್ಗಳನ್ನು ಕಬಳಿಸಿದ್ದಾರೆ. ಒಂದು ವಿಕೆಟ್ ಪಡೆದರೆ, ಅವರು ಟೂರ್ನಮೆಂಟ್ನ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗುತ್ತಾರೆ. ವರುಣ್ ಗ್ರೂಪ್ ಹಂತದ ಪಂದ್ಯಗಳಲ್ಲಿ ಅಂದ್ರೆ 4 ಪಂದ್ಯಗಳಲ್ಲಿ 9 ವಿಕೆಟ್ಗಳನ್ನು ಕಬಳಿಸಿದರು. ಬಟ್ ಆಮೇಲೆ 4 ಪಂದ್ಯಗಳಲ್ಲಿ 4 ವಿಕೆಟ್ಗಳನ್ನು ಮಾತ್ರ ತೆಗೆದಿದ್ದಾರೆ. ಹಾಗೇ ರನ್ ರೇಟ್ ತೀರಾ ಕಳಪೆಯಾಗಿದೆ. ಅದ್ರಲ್ಲೂ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಮ್ಯಾಚಲ್ಲಿ ಕೇವಲ 4 ಓವರ್ಗಳಲ್ಲಿ 64 ರನ್ಗಳನ್ನು ಬಿಟ್ಟುಕೊಟ್ಟರು. ಇದು ಅವ್ರ ಟಿ-20 ಕರಿಯರ್ನಲ್ಲೇ ಮೋಸ್ಟ್ ಕಾಸ್ಟ್ಲಿಯೆಸ್ಟ್ ಸ್ಪೆಲ್ ಆಗಿದೆ. ಹೀಗಾಗಿ ವರುಣ್ ವಿಚಾರದಲ್ಲೂ ತಲೆಬಿಸಿ ಸ್ಟಾರ್ಟ್ ಆಗಿದೆ.
ಭಾರತದ ಪರ ಪ್ಲೇಯಿಂಗ್ 11
ಸಂಜು ಸ್ಯಾಮ್ಸನ್
ಅಭಿಷೇಕ್ ಶರ್ಮಾ
ಇಶಾನ್ ಕಿಶನ್
ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ
ತಿಲಕ್ ವರ್ಮಾ
ಶಿವಂ ದುಬೆ
ಅಕ್ಷರ್ ಪಟೇಲ್
ವರುಣ್ ಚಕ್ರವರ್ತಿ / ಕುಲ್ದೀಪ್ ಯಾದವ್
ಅರ್ಶದೀಪ್ ಸಿಂಗ್
ಜಸ್ಪ್ರೀತ್ ಬುಮ್ರಾ
ಇದನ್ನೆಲ್ಲಾ ನೋಡಿದಾಗ ಭಾರತದ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಚಾನ್ಸಸ್ ಕಡಿಮೆ ಇದೆ. ಇಲ್ಲಿ ಅಭಿಷೇಕ್ ಆಡದೇ ಇದ್ರೂ ವರುಣ್ ದುಬಾರಿಯಾದ್ರೂ ಪಂದ್ಯಗಳನ್ನ ಗೆದ್ದಿರೋದ್ರಿಂದ ಅದೇ ವಿನ್ನಿಂಗ್ ಕಾಂಬಿನೇಷನ್ ಕಂಟಿನ್ಯೂ ಮಾಡ್ತಾರೆ.

ನೋಡಿರಿ

