NZ ವಿರುದ್ಧ ಗೆದ್ದೇ ಇಲ್ಲ IND – T-20 ವಿಶ್ವಕಪ್ ನ ರಿಯಲ್ ವಿಲನ್!
ಫೈನಲ್ ಚೋಕ್ ಕೊಡ್ತಾರಾ ಕಿವೀಸ್?

ಟಿ-20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇನ್ನೊಂದೇ ದಿನ ಬಾಕಿ. ಫೈನಲ್ ಫೈಟ್ಗೆ ನರೇಂದ್ರ ಮೋದಿ ಸ್ಟೇಡಿಯಮ್ ಅದ್ಧೂರಿಯಾಗೇ ಸಿದ್ಧವಾಗ್ತಿದೆ. 3ನೇ ಬಾರಿ ಟ್ರೋಫಿ ಗೆಲ್ಲೋಕೆ ಭಾರತ ಕಾಯ್ತಿದ್ರೆ ಅತ್ತ ನ್ಯೂಜಿಲೆಂಡ್ ಚೊಚ್ಚಲ ಟ್ರೋಫಿ ಕನಸಿನಲ್ಲಿದೆ. 2026ರ ಟಿ-20 ವಿಶ್ವಕಪ್ ಹತ್ತು ಹಲವು ಅದ್ಭುತಗಳಿಗೆ ಸಾಕ್ಷಿಯಾಗಿದೆ. ಈಗೇನಿದ್ರೂ ಕ್ಲೋಸಿಂಗ್ ಸೆರೆಮನಿಯೊಂದೇ ಬಾಕಿ. ಭಾರತ ಮತ್ತು ನ್ಯೂಜಿಲೆಂಡ್ ಮಾರ್ಚ್ 8 ರಂದು ಟ್ರೋಫಿಗಾಗಿ ಫೈಟ್ ನಡೆಸ್ತಾರೆ. ಪಂದ್ಯ ನಡೆಯಲಿರೋ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮೇಲುಗೈ ಸಾಧಿಸಿದ್ರೆ ನ್ಯೂಜಿಲೆಂಡ್ ತಂಡ ಸಾಕಷ್ಟು ಸ್ಟ್ರಗಲ್ ಪಟ್ಟಿದೆ.
ಇದನ್ನೂ ಓದಿ : ಹೈಕಮಾಂಡ್ ಚಾನ್ಸ್ ಕೊಟ್ಟರೆ ಮತ್ತೆರಡು ಬಜೆಟ್ ಮಂಡನೆ ಮಾಡುತ್ತೇನೆ! – ಸಿಎಂ ಸಿದ್ದರಾಮಯ್ಯ!
ಮೋದಿ ಮೈದಾನದಲ್ಲಿ ಗೆಲುವನ್ನೇ ಕಾಣದ ನ್ಯೂಜಿಲೆಂಡ್!
ಟಿ-20ಐ ಫಾರ್ಮೆಟ್ನಲ್ಲಿ ಭಾರತ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 10 ಪಂದ್ಯಗಳನ್ನು ಆಡಿದೆ. ಈ ಪೈಕಿ 7 ಪಂದ್ಯಗಳನ್ನು ಗೆದ್ದು ಮೂರರಲ್ಲಿ ಸೋತಿದೆ. ಈ ಪಿಚ್ನಲ್ಲಿ ಭಾರತದ ಹೈಯೆಸ್ಟ್ ಸ್ಕೋರ್ ನ್ಯೂಜಿಲೆಂಡ್ ವಿರುದ್ಧವೇ ಬಂದಿದೆ. 2023ರಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ಗಳನ್ನ ಕಲೆ ಹಾಕಿತ್ತು. ಌಂಡ್ ಇದೇ ಸ್ಟೇಡಿಯಮ್ನಲ್ಲಿ ಶುಭ್ಮನ್ ಗಿಲ್ 126 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು ಇಂಡಿವಿಶ್ಯೂಯಲ್ ಹೈಯೆಸ್ಟ್ ಸ್ಕೋರ್ ಆಗಿದೆ. ಌಂಡ್ ಪಾಂಡ್ಯ ಇದೇ ಮೈದಾನದಲ್ಲಿ 16 ರನ್ ಮಾತ್ರ ನೀಡಿ 4 ವಿಕೆಟ್ ತೆಗೆದಿರೋದು ಬೆಸ್ಟ್ ಬೌಲಿಂಗ್ ಪರ್ಪಾಮೆನ್ಸ್ ಆಗಿದೆ. ಲೋಯೆಸ್ಟ್ ಸ್ಕೋರ್ ಅಂದ್ರೆ ಈ ಬಾರಿ ಟಿ-20 ವಿಶ್ವಕಪ್ನ ಸೂಪರ್ 8 ಮ್ಯಾಚಲ್ಲಿ ಸೌತ್ ಆಫ್ರಿಕಾ ವಿರುದ್ಧ 111 ರನ್ಗಳಿಗೆ ಆಲೌಟ್ ಆಗಿದ್ದೇ ಭಾರತದ ಕಳಪೆ ಪ್ರದರ್ಶನವಾಗಿದೆ. ಇನ್ನು ನ್ಯೂಜಿಲೆಂಡ್ ಈ ಮೈದಾನದಲ್ಲಿ 2 ಪಂದ್ಯಗಳನ್ನ ಆಡಿದೆ. ಬಟ್ ಎರಡಕ್ಕೆ ಎರಡೂ ಪಂದ್ಯಗಳನ್ನ ಸೋತಿದೆ. ಹೀಗಾಗಿ ನ್ಯೂಜಿಲೆಂಡ್ ಪಾಲಿಗೆ ಈ ಮೈದಾನ ಮತ್ತೆ ಕಬ್ಬಿಣದ ಕಡಲೆಯಾಗೋ ಚಾನ್ಸಸ್ ಕೂಡ ಇದೆ. 2026 ರ ಟಿ20 ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಇಲ್ಲಿಯವರೆಗೆ ಈ ಕ್ರೀಡಾಂಗಣದಲ್ಲಿ ಆರು ಪಂದ್ಯಗಳನ್ನು ಆಡಲಾಗಿದೆ. ಮೊದಲು ಬ್ಯಾಟ್ ಮಾಡಿದ ತಂಡಗಳು ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಬೆನ್ನಟ್ಟಿದ ತಂಡಗಳು ಎರಡರಲ್ಲಿ ಗೆದ್ದಿವೆ. ಅಫ್ಘಾನಿಸ್ತಾನ ಹಾಗೇ ಸೌತ್ ಆಫ್ರಿಕಾ ಪಂದ್ಯವು ಟೈನಲ್ಲಿ ಕೊನೆಗೊಂಡಿತ್ತು. ಆ ನಂತ್ರ 2 ಸೂಪರ್ ಓವರ್ ನಡೆದು ಕೊನೆಗೆ ಸೌತ್ ಆಫ್ರಿಕಾ ವಿನ್ ಆಗಿತ್ತು.
ಟಿ-20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದೇ ಇಲ್ಲ ಭಾರತ!
ಇಲ್ಲೇ ನೋಡಿ ಇರೋದು ಇಂಟ್ರೆಸ್ಟಿಂಗ್ ವಿಚಾರ. ಅಚ್ಚರಿ ಅನ್ಸಿದ್ರೂ ಇದೇ ಸತ್ಯ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮೂರು ಬಾರಿ ಮುಖಾಮುಖಿಯಾಗಿದ್ದು, ಕಿವೀಸ್ ಮೂರೂ ಮುಖಾಮುಖಿಗಳಲ್ಲಿ ಗೆಲುವು ಸಾಧಿಸಿದೆ. ಅಂದ್ರೆ ಭಾರತ ಒಮ್ಮೆಯೂ ಗೆಲ್ಲೋಕೆ ಆಗಿಲ್ಲ. 2007 ಜೋಹಾನ್ಸ್‌ಬರ್ಗ್ ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 10 ರನ್‌ಗಳಿಂದ ಗೆದ್ದಿದೆ. ಆ ನಂತ್ರ 2016ರಲ್ಲಿ ದುಬೈನಲ್ಲಿ ನ್ಯೂಜಿಲೆಂಡ್ 47 ರನ್ಗಳಿಗೆ ವಿನ್ ಆಗಿತ್ತು. ಌಂಡ್ 2021ರಲ್ಲಿ ದುಬೈನಲ್ಲಿ ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ಒಟ್ಟಾರೆ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಎರಡೂ ತಂಡಗಳು 30 ಬಾರಿ ಮುಖಾಮುಖಿಯಾಗಿದ್ದು, ಭಾರತ 18 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ 11 ಪಂದ್ಯಗಳನ್ನು ಗೆದ್ದಿದ್ದರೆ, ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿದೆ.

ನೋಡಿರಿ

