ಹೈಕಮಾಂಡ್‌ ಚಾನ್ಸ್‌ ಕೊಟ್ಟರೆ ಮತ್ತೆರಡು ಬಜೆಟ್‌ ಮಂಡನೆ ಮಾಡುತ್ತೇನೆ! – ಸಿಎಂ ಸಿದ್ದರಾಮಯ್ಯ!

ಹೈಕಮಾಂಡ್‌ ಚಾನ್ಸ್‌ ಕೊಟ್ಟರೆ ಮತ್ತೆರಡು ಬಜೆಟ್‌ ಮಂಡನೆ ಮಾಡುತ್ತೇನೆ! – ಸಿಎಂ ಸಿದ್ದರಾಮಯ್ಯ!

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಇನ್ನು ಸದ್ದು ಮಾಡುತ್ತಲೇ ಇದೆ. ಇವೆಲ್ಲದ್ರ ನಡುವೆ ಸಿಎಂ ಸಿದ್ದರಾಮಯ್ಯ ದಾಖಲೆಯ ಬಜೆಟ್‌ ಮಂಡನೆ ಮಾಡಿದ್ರು. ಇದೀಗ ಸಿಎಂ ಸಿದ್ದರಾಮಯ್ಯ ಹೈಕಮಾಂಡ್‌ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್‌ ಮಂಡನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿನಿಮಾ ಪ್ರಮೋಷನ್‌ಗಾಗಿ ಲಾಂಗ್’ ಝಳಪಿಸಿದ ನಟ – ಚೀಪ್‌ ಗಿಮಿಕ್‌ ಮಾಡಲು ಹೋದ ಸ್ಟಾರ್‌ ವಿರುದ್ಧ ಎಫ್‌ಐಆರ್..!

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾಯಕತ್ವ ಬದಲಾವಣೆ ಬಗ್ಗೆ ಯಾರೊ ಏನೋ ಹೇಳುತ್ತಾರೆ ಎಂಬುದು ನನಗೆ ಮುಖ್ಯ ಅಲ್ಲ. ನನಗೆ ಹೈಕಮಾಂಡ್ ತೀರ್ಮಾನವಷ್ಟೇ ಮುಖ್ಯ. ಹೈಕಮಾಂಡ್ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸ ಇದೆ ಎಂದಿದ್ದಾರೆ. ಹೈಕಮಾಂಡ್‌ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್‌ ಮಂಡನೆ ಮಾಡುತ್ತೇನೆ. ಅವರು ಮುಂದುವರೆಯಿರಿ ಎಂದರೆ ಮುಂದುವರೆಯುತ್ತೇನೆ. ಎಲ್ಲದೂ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ ಜನ ಮಾತ್ರ ಅಲ್ಲ, ಇಡೀ ನಾಡಿನ ಜನ ನಾನು ಇರಬೇಕೆಂದು ಬಯಸಿದ್ದಾರೆ. ಈ ಬಗ್ಗೆ ಅಂತಿಮ ತೀರ್ಮಾನ ಮಾಡುವುದು ಹೈಕಮಾಂಡ್. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ಬಜೆಟ್‌ನ ದಾಖಲೆಗಳ ಮೇಲೆ ನಂಬಿಕೆ ಇಲ್ಲ. ಆದರೆ ಇನ್ನರೆಡು ಬಜೆಟ್ ಮಂಡಿಸುವ ಅವಕಾಶ ಸಿಕ್ಕರೆ ಮಂಡಿಸುತ್ತೇನೆ. ಎಲ್ಲವನ್ನೂ ತೀರ್ಮಾನ ಮಾಡುವುದು ಹೈಕಮಾಂಡ್. ಈ ವಿಚಾರದಲ್ಲಿ ಏನೇ ಹಿಂದೆ ಮುಂದೆ ಪ್ರಶ್ನೆ ಕೇಳಿದರು ನನ್ನ ಉತ್ತರ ಹೈಕಮಾಂಡ್. ಜನ ಅವಕಾಶ ಕೊಟ್ಟರೆ ಮಂಡಿಸುತ್ತೇನೆ ಎಂದಿದ್ದಾರೆ.

ಬಜೆಟ್‌ಗೆ ಸಾಲ ಮಾಡಿದ್ದನ್ನು ಸಮರ್ಥಿಸಿಕೊಂಡ ಸಿಎಂ, ಅಭಿವೃದ್ಧಿಗಾಗಿ ಸಾಲ ಮಾಡಬೇಕಾಗುತ್ತದೆ. ಹೀಗಾಗಿ ಸಾಲ ಮಾಡಿದ್ದೇನೆ. ರಾಜ್ಯದ ಮಿತಿಯ ಒಳಗಡೆ ಸಾಲ ಮಾಡಿದ್ದೇನೆ. ಸಾಲದಿಂದ ರಾಜ್ಯದ ಜನರಿಗೆ ಹೊರೆಯಾಗಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿದ್ದ ಅನ್ಯಾಯದಿಂದ ರಾಜ್ಯದ ಜನರಿಗೆ ಹೊರೆಯಾಗಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಸಾಲ ಮಾಡಿದ್ದಾರೆ ಅನ್ನೋದು ರಾಜ್ಯ ಬಿಜೆಪಿ ನಾಯಕರಿಗೆ ಗೊತ್ತಾ? ನಾನು ಯಾವುದೇ ಒಂದು ವರ್ಗದ ಪರವಾಗಿ ಬಜೆಟ್ ಮಂಡಿಸಿಲ್ಲ. ಇದು ಎಲ್ಲಾ ವರ್ಗದ ಬಜೆಟ್ ಎಂದಿದ್ದಾರೆ.

Shwetha M