3 ದಿನದ ಹಿಂದಿನ ಸಾಂಬಾರ್ ಬಡಿಸಿದ್ದಕ್ಕೆ ಪತಿ ಕಿರಿಕ್! – ಅಯ್ಯಯೋ.. ಗಂಡ ಬೈದಿದ್ದಕ್ಕೆ ಪಾಣಬಿಟ್ಟ ಮಹಿಳೆ!

ಗಂಡ, ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತನ್ನ ಕೇಳಿದ್ದೇವೆ. ಆದ್ರೆ ಈಗ ಸಣ್ಣ ಪುಟ್ಟ ಜಗಳ ಕೂಡ ವಿಕೋಪಕ್ಕೆ ತಿರುಗುತ್ತಿದೆ. ಇದೀಗ ಇಲ್ಲೊಂದು ಕಡೆ ಸಾಂಬಾರ್ ವಿಚಾರಕ್ಕೆ ಜಗಳ ನಡೆದಿದ್ದು, ಮಹಿಳೆ ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿ:ಸಿನಿಮಾ ಪ್ರಮೋಷನ್ಗಾಗಿ ಲಾಂಗ್’ ಝಳಪಿಸಿದ ನಟ – ಚೀಪ್ ಗಿಮಿಕ್ ಮಾಡಲು ಹೋದ ಸ್ಟಾರ್ ವಿರುದ್ಧ ಎಫ್ಐಆರ್..!
ಈ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮೂರು ದಿನದ ಹಳೇ ಸಾಂಬಾರ್ ಬಡಿಸಿದ ವಿಚಾರಕ್ಕೆ ಪತಿ ಕಿರಿಕ್ ತೆಗೆದಿದ್ದರಿಂದ ಮನನೊಂದ ಪತ್ನಿ ವಿಷ ಸೇವಿಸಿ ಪ್ರಾಣಬಿಟ್ಟಿದ್ದಾಳೆ. ಮೃತ ಮಹಿಳೆಯನ್ನು ಕಾವ್ಯ (27) ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ಕಾವ್ಯ ಕಳೆದ ಐದು ವರ್ಷಗಳ ಹಿಂದೆ ರಂಗಸ್ವಾಮಿ ಎಂಬುವವರನ್ನು ಮದುವೆಯಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಒಂದು ಮಗುವಿದೆ. ಗುರುವಾರ ಮನೆಯಲ್ಲಿ ಊಟದ ವಿಚಾರವಾಗಿ ದಂಪತಿ ನಡುವೆ ಜೋರು ಜಗಳ ನಡೆದಿದೆ. ವರದಿಗಳ ಪ್ರಕಾರ, ಕಾವ್ಯ ಅವರು ಮೂರು ದಿನಗಳ ಹಿಂದೆ ತಯಾರಿಸಿದ್ದ ಸಾಂಬಾರ್ ಅನ್ನು ಬಿಸಿ ಮಾಡಿ ಪತಿಗೆ ಬಡಿಸಿದ್ದರು. ಇದೇ ವಿಷಯಕ್ಕೆ ರಂಗಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಪ್ರತಿದಿನ ಹಳೇ ಸಾಂಬಾರನ್ನೇ ಹಾಕುತ್ತೀಯಾ?’ ಎಂದು ಪ್ರಶ್ನಿಸಿ ಪತ್ನಿಯ ಜೊತೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ರಂಗಸ್ವಾಮಿ ಪತ್ನಿಯನ್ನು ಮನಬಂದಂತೆ ಬೈದಿದ್ದಲ್ಲದೆ, ಆಕೆಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಪತಿಯ ನಿಂದನೆ ಹಾಗೂ ಹಲ್ಲೆಯ ಯತ್ನದಿಂದ ತೀವ್ರವಾಗಿ ಮನನೊಂದ ಕಾವ್ಯ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಕಾವ್ಯ ವಿಷ ಸೇವಿಸಿದ್ದರು. ಆಕೆಯ ಆರೋಗ್ಯದಲ್ಲಿ ಏರುಪೇರಾಗಿದ್ದನ್ನು ಗಮನಿಸಿದ ಕುಟುಂಬ ಸದಸ್ಯರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಆದ್ರೆ ಮಾರ್ಗಮಧ್ಯದಲ್ಲೇ ಕಾವ್ಯ ಕೊನೆಯುಸಿರೆಳೆದಿದ್ದಾರೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರಂಗಸ್ವಾಮಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಒಂದು ಸಣ್ಣ ಊಟದ ವಿಚಾರಕ್ಕೆ ತಲೆಮಾರುಗಳ ಬಾಂಧವ್ಯ ಕಡಿದುಹೋಗಿರುವುದು ಮತ್ತು ಮಗು ತಾಯಿಯನ್ನು ಕಳೆದುಕೊಂಡಿರುವುದು ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ.

ನೋಡಿರಿ

