5 ವರ್ಷದ ಮಗಳ ಮೇಲೆ ಅ*ತ್ಯಾ*ಚಾರ – ಕಾಮುಕ ತಂದೆಗೆ ಸಾ*ಯೋ ತನಕ ಜೈಲು ಶಿಕ್ಷೆ ಪ್ರಕಟ

5 ವರ್ಷದ ಮಗಳ ಮೇಲೆ ಅ*ತ್ಯಾ*ಚಾರ – ಕಾಮುಕ ತಂದೆಗೆ ಸಾ*ಯೋ ತನಕ ಜೈಲು ಶಿಕ್ಷೆ ಪ್ರಕಟ

ಐದು ವರ್ಷದ ಅಪ್ರಾಪ್ತ ವಯಸ್ಸಿನ ಸ್ವಂತ ಮಗಳ ಮೇಲೆ ಅತ್ಯಾಚಾರ  ಎಸಗಿದ್ದ ಕಾಮುಕ ತಂದೆಗೆ  ವಿಜಯಪುರದ  ವಿಶೇಷ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ  ಹಾಗೂ 50 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ. ತಂದೆಯೇ ಐದು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ  ನಡೆಸಿದ್ದು, ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ನೀಡಿದೆ.

ಹೆಂಡತಿ ಮೇಲಿನ ವೈಮನಸ್ಸಿನಿಂದಾಗಿ ತನ್ನ ಐದು ವರ್ಷದ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆಗೆ ವಿಜಯಪುರದ ವಿಶೇಷ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ. ಮೂಲತಃ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದ ನಿವಾಸಿ ಆರೋಪಿ ಸೋಮನಿಂಗ ಕಳಸದವರ ಶಿಕ್ಷೆಗೆ ಗುರಿಯಾಗಿದ್ದಾನೆ.

ಇದನ್ನೂ ಓದಿ: ಹಲ್‌ಚಲ್ ಎಬ್ಬಿಸಿದ  ‘ಧುರಂಧರ್ 2’ ಸಿನಿಮಾ  ಟ್ರೇಲರ್

ಸೋಮನಿಂಗ ತನ್ನದೇ ಅಪ್ರಾಪ್ತ ಐದು ವರ್ಷದ ಮಗಳಿಗೆ ಕಳೆದ ಗಣೇಶ ಚತುರ್ಥಿ ವೇಳೆ ಗಣೇಶನ ಮೂರ್ತಿಗಳನ್ನು ತೋರಿಸುತ್ತೇನೆ ಎಂದು ಕರೆದುಕೊಂಡು ವಿಜಯಪುರ ನಗರದ ಆಲಕುಂಟೆ ನಗರದಲ್ಲಿನ ನಿರ್ಜನ ಪ್ರದೇಶದಕ್ಕೆ ಕರೆದುಕೊಂಡು ಹೋಗಿ 2025 ಆಗಸ್ಟ್ 30ರಂದು ಸಾಯಂಕಾಲ ಅತ್ಯಾಚಾರ ಎಸಗಿದ್ದ. ಈ‌ ಕುರಿತು ಅಪ್ರಾಪ್ತೆಯ ತಾಯಿ ವಿಜಯಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ 65(2) ಬಿ ಎನ್ ಎಸ್ – 2023 ಹಾಗೂ 5(ಎಂ) 6 ಪೋಕ್ಸೋ ಕಾಯ್ದೆ 2012ರಂತೆ ದೂರು ದಾಖಲಿಸಿದ್ದರು. ವಿಚಾರಣೆಯಲ್ಲಿ ಸಾಕ್ಷಿಗಳನ್ನು ಪರಿಶೀಲಿಸಿದ ವಿಜಯಪುರದ ವಿಶೇಷ ಪೋಕ್ಸೋ ನ್ಯಾಯಾಧೀಶೆ ಕು. ಸಿಂದು ಪೋತದಾರ ಅವರು ಆರೋಪಿ ಸೋಮನಿಂಗ ಕಳಸದಗೆ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Kishor KV

Leave a Reply

Your email address will not be published. Required fields are marked *