ಬೆಂಚ್ ಕಾದ ಸಂಜುನೇ ಸಂಜೀವಿನಿ – ಫೈನಲ್ ನಲ್ಲೂ ಸಿಡಿದ್ರೆ ಕಪ್ ನಮ್ದೇ
ಸ್ಯಾಮ್ಸನ್ ಬೆಲೆ ಈಗ ಗೊತ್ತಾಯ್ತಾ?

ಬೆಂಚ್ ಕಾದ ಸಂಜುನೇ ಸಂಜೀವಿನಿ –  ಫೈನಲ್ ನಲ್ಲೂ ಸಿಡಿದ್ರೆ ಕಪ್ ನಮ್ದೇಸ್ಯಾಮ್ಸನ್ ಬೆಲೆ ಈಗ ಗೊತ್ತಾಯ್ತಾ?

ಮುಗಿದೆ ಹೋಯ್ತು ಸಂಜು ಕೆರಿಯರ್ ಮುಗಿದೇ ಹೋಯ್ತು ಅಂತ ಎಲ್ಲರ ಅಂದ್ಕೊಂಡಿದ್ರು. ಜನವರಿಯಲ್ಲಿ ನ್ಯೂಜೆಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಸಂಜು ಅಬ್ಬರಿಸಿರಲಿಲ್ಲ, ಸಂಜು ಬ್ಯಾಟ್ ಅಬ್ಬರಿಸರಲಿಲ್ಲ.. ಹೀಗಾಗಿಯೇ  ಟಿ20 ವಿಶ್ವಕಪ್ 2026ರ ಲೀಗ್ ಹಂತದಲ್ಲಿ ಸಂಜುಗೆ ಹೆಚ್ಚು ಚಾನ್ಸ್ ಸಿಕ್ಕಿಲ್ಲ. ಇದ್ದನ್ನೇಲ್ಲಾ ನೋಡಿದ ಫ್ಯಾನ್ಸ್ ಸಂಜು ಮನೆ ಕಡೆ ಗಂಟು ಮೂಟೆ ಕಟ್ಟಬೇಕಾಗುತ್ತೆ ಅಂತ ಅಂದ್ಕೊಂಡ್ರಿದ್ರು..ಆದ್ರೆ ವಿಶ್ವಕಪ್‌ ಅಂತ್ಯದಲ್ಲಿ ತನ್ನ ತಾಕತ್ತು ಏನ್ ಅನ್ನೋದ್ದನ್ನ ಸಂಜು ತೋರಿಸಿದ್ದಾರೆ.

ಭಾರತದ ಓಪನರ್ ಹಾಗೂ ವಿಕೆಟ್‌ಕೀಪರ್ ಆಗಿದ್ದ ಸಂಜು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಬ್ಯಾಕ್‌ಬೆಂಚ್‌ನಿಂದ ಸ್ಟಾರ್ ಆಗಿದ್ದಾರೆ. ಆರಂಭದಲ್ಲಿ ಆಡದೇ ಇದ್ದರೂ, ಸೂಪರ್ 8 ಮತ್ತು ನಾಕೌಟ್ ಹಂತದಲ್ಲಿ ಅವರ ಬ್ಯಾಟಿಂಗ್ ಅಬ್ಬರಿಸಿದೆ. ಇಂದು ಭಾರತ ಪೈನಲ್‌ಗೆ ಹೋಗಿದೆ ಅಂದ್ರೆ ಅದ್ದಕ್ಕೆ ನೇರವಾಗಿ ಕಾರಣವಾಗಿದ್ದು ಸಂಜು ಸ್ಯಾಮ್ಸನ್‌.

ನಿಮ್ಗೆಲ್ಲಾ ಗೊತ್ತಿರೋ ಹಾಗೇ ಲೀಗ್ ಹಂತದಲ್ಲಿ ಸಂಜು ಬೆಂಚ್ ಕಾದಿದ್ರು. ಆದ್ರೆ ಸೂಪರ್‌8ನಲ್ಲಿ ಟೀಂ ಇಂಡಿಯಾ Vs ವೆಸ್ಟ್ ಇಡೀಸ್ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯ ಆಗಿತ್ತು. ಈ ಪಂದ್ಯ ಗೆದ್ರೆ ನಾವು ಸೆಮಿಗೆ ಎಂಟ್ರಿಕೊಡ್ತಾ ಇದ್ವಿ.. ಎಲ್ಲರಿಗೂ ಭಯವಿತ್ತು. ಈ ಪಂದ್ಯ ನಾವು ಗೆಲ್ತೀವಾ ಇಲ್ವಾ ಅನ್ನೋದು.. ಆದ್ರೆ ರಣರೋಚಕ ಬ್ಯಾಟಿಂಗ್ ಮಾಡಿದ ಸಂಜು 50 ಬಾಲ್‌ನಲ್ಲಿ 97 ರನ್ ಬಾರಿಸಿ ಟೀಂ ಇಂಡಿಯಾವನ್ನ ಗೆಲ್ಲಿಸಿದ್ರು. ಸೆಮಿಗೆ ಹೋಗುವಂತೆ ಮಾಡಿದ್ರು. ಹಾಗಂತ ಸೆಮಿಫೈನಲ್ಲೂ ಸಂಜು ಅಬ್ಬರ ನಿಲ್ಲಲಿಲ್ಲ..  ಇವತ್ತು ನಾವು ಫೈನಲ್ ಆಡೋಕೆ ಕಾರಣ ಸಂಜುನೇ.. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 42 ಬಾಲ್‌ನಲ್ಲಿ 8 ಫೋರ್‌, 7 ಸಿಕ್ಸ್‌ ಸಿಡಿಸಿ 89 ರನ್‌ಗಳಿಸಿದ್ರು. ಒಂದು ವೇಳೆ ಸಂಜು ಈ ಸ್ಕೋರ್ ಮಾಡಿಲ್ಲ ಅಂದಿದ್ರೆ, ಇಂಗ್ಲೆಂಡ್ ಇವತ್ತು ಫೈನಲ್‌ನಲ್ಲಿ ಇರುತಿತ್ತು. ಸುಲಭವಾಗಿ ಚೇಸ್ ಮಾಡಿ ಇಂಗ್ಲೆಂಡ್ ಫೈನಲ್‌ಗೆ ಪ್ರವೇಶ ಮಾಡ್ತಿತ್ತು. ಹೀಗಾಗಿ ಯೇ ಸಂಜು ಆಟಕ್ಕೆ ಇಡೀ ಕ್ರಿಕೆಟ್ ಜಗತ್ತು ಫಿದಾ ಆಗಿದೆ.

 ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌! 

ಇನ್ನು ರೋಹಿತ್ ಶರ್ಮಾ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ ಈ ಹಿಂದೆ ಒಂದೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ 15 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈಗ ಸಂಜು ಸ್ಯಾಮ್ಸನ್ ಈ ದಾಖಲೆಯನ್ನು ಮುರಿದಿದ್ದಾರೆ. ಸಂಜು ಸ್ಯಾಮ್ಸನ್ ಈ ಟೂರ್ನಿಯ 4 ಪಂದ್ಯಗಳಲ್ಲಿ ಆಡಲು ಅವಕಾಶ ಪಡೆದಿದ್ದಾರೆ. ಈ 4 ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಅವರು ಮುರಿದಿದ್ದಾರೆ. ಸಂಜು ಸ್ಯಾಮ್ಸನ್ ಇದುವರೆಗೆ 16 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲ  ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅತೀ ಹೆಚ್ಚು ರನ್‌ಗಳಿಸಿದ ಟೀಂ ಇಂಡಿಯಾ ಆಟಗಾರರ ಪಟ್ಟಿಯಲ್ಲಿ ಸಂಜು 3ನೇ ಸ್ಥಾನವನ್ನ ಪಡೆದಿದ್ದಾರೆ. ಇನ್ನುಂದು ವಿಶೇಷ ಅಂದ್ರೆ ರನ್‌ ರೇಟ್‌. ಸಂಜು ಆಡಿರೋ 4 ಇನ್ನಿಂಗ್ಸ್‌ ನಿಂದ 232 ರನ್ ಬಂದಿದೆ.  ಸ್ಟ್ಕೈಕ್ ರೇಟ್ 211.90 ಇದೆ. ಸಂಜು ಸ್ಯಾಮ್ಸನ್ ಈಗಾಗಲೇ T20 ಫಾರ್ಮ್ಯಾಟ್‌ನಲ್ಲಿ ಭಾರತದ ಅತ್ಯಂತ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ,  ಅವರ ಸ್ಟ್ರೈಕ್ ರೇಟ್ 200+ ಆಗಿರುವುದು ಅದ್ಭುತ.  ಕಳೆದ ಎರಡು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಶೈಲಿ ಅವರ ಟೀಕಾಕಾರರ ಬಾಯಿ ಮುಚ್ಚಿಸಿದೆ, ಇಂದಿನ ಪಂದ್ಯದಲ್ಲೂ ಸಂಜು ಬ್ಯಾಟ್‌ನಿಂದ ಬಿಗ್ ಸ್ಕೋರ್ ಬರುವುದಂತು ಪಕ್ಕಾ. ಟೀಂ ಇಂಡಿಯಾ ಫೈನಲ್‌ಗೇರಲು ದಿಟ್ಟ ಹೋರಾಟ ನಡೆಸಿದ ಸಂಜು ಸ್ಯಾಮ್ಸನ್‌ಗೆ ನಮ್ಮದೊಂದು ಸಲಾಂ.

 

Kishor KV

Leave a Reply

Your email address will not be published. Required fields are marked *