ಇಸ್ರೇಲ್ Vs ಇರಾನ್ ಯುದ್ಧ ನಿಲ್ಲದಿದ್ರೆ ಏನಾಗುತ್ತೆ – ಭಾರತಕ್ಕೆ ಹೇಗೆಲ್ಲಾ ಏಫೆಕ್ಟ್ ಆಗಲಿದೆ ಗೊತ್ತಾ?

ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಜೊತೆ ಮಾಡುತ್ತಿರೋ ಯುದ್ಧ ನಿಲ್ಲೋ ಲಕ್ಷಣ ಕಾಣುತ್ತಿಲ್ಲ. ಯುದ್ದದ ಪರಿಣಾಣವು ಮಧ್ಯಪ್ರಾಚ್ಯ ದೇಶಗಳಿಗೆ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳ ಆರ್ಥಿಕತೆಯ ಮೇಲೂ ತನ್ನ ಪರಿಣಾಮ ಉಂಟು ಮಾಡಲಿದೆ. ಭಾರತಕ್ಕೂ ಕೂಡ ಈ ಯುದ್ಧದ ಬಿಸಿ ತಟ್ಟಲಿದೆ. ಮಧ್ಯಪ್ರಾಚ್ಯ ದೇಶಗಳಿಂದ ಭಾರತ ಹಲವು ವಸ್ತುಗಳ ಆಮದು ಮಾಡಿಕೊಳ್ಳುತ್ತದೆ. ಅದರಲ್ಲೂ ಮುಖ್ಯವಾಗಿ ಕಚ್ಚಾತೈಲಕ್ಕೆ ಹಾಗೆ ಅನಿಲ ಸಂಬಂಧಿತ ವಿಚಾರದಲ್ಲಿ ಭಾರತಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಹಾಗಾದ್ರೆ ಈ ಮಧ್ಯಪ್ರಾಚ್ಯದಲ್ಲಿನ ಘರ್ಷಣೆಯ ಕಾರಣದಿಂದಾಗಿ ಭಾರತದಲ್ಲಿ ಯಾವೆಲ್ಲಾ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಕಚ್ಚಾ ತೈಲ ಮತ್ತು ತೈಲ ಉತ್ಪನ್ನ
ಕಚ್ಚಾ ತೈಲ ಮತ್ತು ತೈಲ ಉತ್ಪನ್ನಗಳು ಮಧ್ಯಪ್ರಾಚ್ಯ ದೇಶಗಳಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತದೆ. ಈ ಕಚ್ಚಾತೈಲ ದರದಲ್ಲಿ ಏರಿಕೆಯಾಗುವುದು ಹಲವು ಸಂಬಂಧಿತ ದರ ಏರಿಕೆಗೂ ಕಾರಣವಾಗುತ್ತದೆ. ಈಗಾಗಲೇ ಭಾರತದಲ್ಲಿ ತೈಲ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಹೀಗಾಗಿ ಪೆಟ್ರೋಲ್ ಡೀಸೆಲ್ ಸೇರಿದಂತೆ ಅಡುಗೆ ಅನಿಲ ದರ ಕೂಡ ಏರಿಕೆಯಾಗುವ ಸಾಧ್ಯತೆ ಇರಲಿದೆ.
ದ್ವಿದಳ ಧಾನ್ಯ
ಭಾರತದಲ್ಲಿ ದ್ವಿದಳ ಧಾನ್ಯಗಳ ದರ ಏರಿಕೆಯಾಗುವುದು ನೋಡಬಹುದು. ಇದೇ ರೀತಿಯ ಸಂಘರ್ಷ ಇನ್ನೊಂದು ವಾರ ಮುಂದುವರೆದರೆ ಭಾರತದಲ್ಲಿ ಎಲ್ಲಾ ದ್ವಿದಳ ಧಾನ್ಯದ ದರ ಏರಿಕೆಯಾಗಲಿದೆ ಎಂದು ಅಖಿಲ ಭಾರತ ದಾಲ್ ಮಿಲ್ ಅಸೋಸಿಯೇಷನ್ನ ಅಧ್ಯಕ್ಷ ಸುರೇಶ್ ಅಗರ್ವಾಲ್ ಹೇಳಿದ್ದಾರೆ. ಭಾರತವು ತೊಗರಿ, ಉದ್ದು ಸೇರಿದಂತೆ ಹಲವು ದ್ವಿದಳ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತದೆ. ಬರೋಬ್ಬರಿ 5ರಿಂದ 6 ಮಿಲಿಯನ್ ಟನ್ ಧಾನ್ಯ ಆಮದು ಮಾಡಿಕೊಳ್ಳಲಾಗುತ್ತದೆ. ಇದು ಚಿಲ್ಲರೆ ಮಾರುಕಟ್ಟೆಯ ಮೇಲೆ ಪ್ರಭಾವ ಉಂಟು ಮಾಡುವುದರಿಂದ ದರ ಏರಿಕೆಯನ್ನು ನೋಡಬಹುದು.
ರಸಗೊಬ್ಬರ
ಹಾರ್ಮುಜ್ ಜಲಸಂಧಿಯ ಮೂಲಕ ರಸಗೊಬ್ಬರ ಪೂರೈಕೆಯಲ್ಲಿ ಅಡಚಣೆ ಉಂಟಾಗಬಹುದು, ಇದು ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಲಿದೆ. ಜೂನ್ನಲ್ಲಿ ಪ್ರಾರಂಭವಾಗುವ ಭಾರತದ ಖಾರಿಫ್ ಋತುವಿಗೆ ಇರಾನ್ ಯೂರಿಯಾ ಮತ್ತು ಅಮೋನಿಯಾದ ಪ್ರಮುಖ ಉತ್ಪಾದಕ ರಾಷ್ಟ್ರವಾಗಿದೆ. ಹೀಗಾಗಿ ಮುಂದೆ ಈ ರಸಗೊಬ್ಬರ ದರ ಕೂಡ ಏರಿಕೆಯಾಗಬಹುದು. ಇದರಿಂದ ಭಾರತದಲ್ಲಿ ಬೆಳೆಗಳ ಮೇಲೆ ಪ್ರಭಾವ ಉಂಟಾಗುವುದಲ್ಲದೆ ರೈತರಿಗೆ ಸಮಸ್ಯೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.

ನೋಡಿರಿ

