ಮತ್ತೆ ದೇಶದ ಜನರಿಗೆ ಬಿಗ್ ಶಾಕ್ – ಸಿಲಿಂಡರ್ ಬೆಲೆ 115 ರೂ. ಹೆಚ್ಚಳ!

ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ದೇಶಾದ್ಯಂತ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಂದಿನಿಂದ (ಶನಿವಾರ) ದಿಢೀರ್ ಏರಿಕೆಯಾಗಿದೆ. ಗೃಹಬಳಕೆಯ 14.2 ಕೆಜಿ ಸಿಲಿಂಡರ್ ಮೇಲೆ 60 ರೂ. ಹಾಗೂ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಮೇಲೆ 115 ರೂ. ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಗೃಹಿಣಿಯರು ಹಾಗೂ ಹೋಟೆಲ್, ರೆಸ್ಟೋರೆಂಟ್ ಉದ್ಯಮಿಗಳ ಜೇಬಿಗೆ ಕತ್ತರಿ ಬಿದ್ದಿದೆ. ಏಪ್ರಿಲ್ 2025ರ ನಂತರ ದೇಶೀಯ ಎಲ್‌ಪಿಜಿ ಬೆಲೆಯಲ್ಲಿ ಆಗಿರುವ ಮೊದಲ ಏರಿಕೆ ಇದಾಗಿದೆ.
ಇದನ್ನೂ ಓದಿ: ಶನಿವಾರ ಸೂರ್ಯಾಸ್ತದ ನಂತರ ಶನಿ ಪೂಜೆ ಮಾಡಿ.. ಶನಿ ರಕ್ಷಾಕವಚ ಮಂತ್ರ ಓದಿ.. ನಿಮ್ಮದಾಗುತ್ತೆ ಯಶಸ್ಸು
ಗೃಹಬಳಕೆ ಸಿಲಿಂಡರ್ ಬೆಲೆ ಬೆಂಗಳೂರು 855.50ರಿಂದ 915.50 ರೂ.ಗೆ ಏರಿಕೆಯಾದ್ರೆ, ನವದೆಹಲಿಯಲ್ಲಿ 853ರಿಂದ 913 ರೂ., ಮುಂಬೈ 852.50ರಿಂದ 912.50 ರೂ., ಕೋಲ್ಕತ್ತಾ 879.00ರಿಂದ 930.00 ರೂ., ಚೆನ್ನೈ 868.50ರಿಂದ 928.50 ರೂ. ಏರಿಕೆ ದಾಖಲಿಸಿವೆ.
ವಾಣಿಜ್ಯ ಸಿಲಿಂಡರ್ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ. 19 ಕೆಜಿ ಸಿಲಿಂಡರ್‌ಗೆ ಬೆಂಗಳೂರಿನಲ್ಲಿ ₹1,814.00ರಿಂದ 1929.00 ರೂ., ನವದೆಹಲಿ 1,768.50ರಿಂದ 1,883.00 ರೂ., ಮುಂಬೈ 1,720.50ರಿಂದ 1,835.00 ರೂ., ಕೋಲ್ಕತ್ತಾ 1,875.50ರಿಂದ 1,990.00 ರೂ., ಚೆನ್ನೈ 1,929.00ರಿಂದ 2,043.50 ರೂ. ಏರಿಕೆ ಕಂಡಿವೆ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬ ಆತಂಕದ ನಡುವೆಯೇ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ದೇಶದ ಜನತೆಗೆ ಭರವಸೆ ನೀಡಿದ್ದಾರೆ. –

ನೋಡಿರಿ

