ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ಈ ಮಾರ್ಗದಲ್ಲಿ ಪ್ರಯಾಣ ಮತ್ತಷ್ಟು ಸುಲಭ!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ಈ ಮಾರ್ಗದಲ್ಲಿ ಪ್ರಯಾಣ ಮತ್ತಷ್ಟು ಸುಲಭ!

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆ ಇತ್ತೀಚೆಗೆ ಭಾರೀ ಬೇಡಿಕೆಯಲ್ಲಿದೆ. ಬೆಲೆ ಏರಿಕೆಯಾದರೂ ಬೇಡಿಕೆ ಮಾತ್ರ ಕಮ್ಮಿಯಾಗುತ್ತಿಲ್ಲ. ತನ್ನ ವೇಗ, ಅತ್ಯುತ್ತಮ ಸೇವೆಗಳ ಮೂಲಕ ಮೆಟ್ರೋ ಜಾಲ ಇಂದು ಬೆಂಗಳೂರಿನಾದ್ಯಂತ ವಿಸ್ತರಿಸಲು ಸಜ್ಜಾಗಿದೆ. ಸರ್ಕಾರ ಕೂಡಾ ಬೆಂಗಳೂರು  ನಗರದಾದ್ಯಂತ ಮೆಟ್ರೋ ಜಾಲವನ್ನು ವಿಸ್ತರಿಸಬೇಕೆಂಬ ಗುರಿಯನ್ನೂ ಹೊಂದಿದೆ. ಅದೇ ಕಾರಣದಿಂದ ಮುಂಬರುವ ದಿನಗಳಲ್ಲಿ ಪಿಂಕ್‌ ಮತ್ತು ಬ್ಲೂ ಲೈನ್‌ ಮೆಟ್ರೋಗಳನ್ನು ತರಲು ಯೋಜನೆ ರೂಪಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಇದೀಗ ಬೆಂಗಳೂರಿಗರಿಗೆ ಸಂತಸದ ಸುದ್ದಿಯೊಂದಿದೆ.

ಇದನ್ನೂ ಓದಿ:  ಬಿಗ್‌ಬಾಸ್ ಸ್ಪರ್ಧಿ ವಿರುದ್ಧ ಕೇಸ್ ದಾಖಲು!‌ – ಈ ಸಲ ಡಾಗ್‌ ಸತೀಶ್‌ ಎಡವಟ್ಟೇನು?

ದಿನ ಹೋದಂತೆ ಪರ್ಪಲ್‌ ಮತ್ತು ಗ್ರೀನ್‌ ಲೈನ್‌ಗಳಲ್ಲಿ ಪೀಕ್‌ ಅವರ್‌ನಲ್ಲಿ ಜನದಟ್ಟಣೆ ಹೆಚ್ಚಾಗುತ್ತಲೇ ಇದೆ. ಈ ಜನದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲ್‌ ಕಾರ್ಪೋರೇಷನ್‌ ಲಿಮಿಟೆಡ್‌ ಜೂನ್‌ ತಿಂಗಳೊಳಗೆ ಮೂರು ಹೊಸ ರೈಲುಗಳನ್ನು ತರುವ ಜಾರಿಗೆ ತಂದಿದೆ.

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಇತ್ತೀಚೆಗಷ್ಟೇ ಯೆಲ್ಲೋ ಲೈನ್‌ ಮೆಟ್ರೋ ಆರಂಭವಾಗಿದೆ. ಅಲ್ಲದೇ ಪರ್ಪಲ್‌ ಲೈನ್‌ ಮತ್ತು ಗ್ರೀನ್‌ ಲೈನ್‌ ಎರಡೂ ಕಾರಿಡಾರ್‌ಗಳು ನಗರದ ಅತ್ಯಂತ ಬೇಡಿಕೆಯ ಮಾರ್ಗಗಳಾಗಿದೆ. ಅದರಲ್ಲೂ ಯೆಲ್ಲೋ ಲೈನ್‌ ಆರಂಭವಾದಾಗಿನಿಂದ ಇತರ ಲೈನ್‌ಗಳಲ್ಲು ಜನದಟ್ಟಣೆ ಮತ್ತಷ್ಟು ಹೆಚ್ಚಾಗಿದೆ ಎಂದು ಪ್ರಯಾಣಿಕರು ದೂರು ನೀಡಿದ್ದಾರೆ. ಬೆಳಗ್ಗೆ 8 ರಿಂದ 10 ರವರೆಗೆ ಮತ್ತು ಸಂಜೆ 6 ರಿಂದ 8 ರ ಸಮಯದಲ್ಲಿ ರೈಲುಗಳಲ್ಲಿ ನಿಲ್ಲಲು ಜಾಗವಿಲ್ಲದಷ್ಟು ಜನ ತುಂಬುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಅರಿತ ಬಿಎಂಆರ್‌ಸಿಎಲ್‌ ಇದೀಗ ಹೊಸ ರೈಲುಗಳನ್ನು ಸೇರಿಸಲು ಮುಂದಾಗಿದೆ.

ಡಿಟಿಜಿ ಟೈಪ್‌ನ ಮೂರು ಹೊಸ ರೈಲುಗಳನ್ನು ಮೇ-ಜೂನ್‌ 2026 ರೊಳಗೆ ಸೇರಿಸಲು ಬಿಎಂಆರ್‌ಸಿಎಲ್‌ ಪ್ಲಾನ್‌ ಮಾಡಿದೆ ಎನ್ನಲಾಗಿದೆ. ಪಶ್ಚಿಮ ಬಂಗಾಳದ ಟಿಟಾಗರ್‌ ರೈಲ್‌ ಸಿಸ್ಟಮ್ಸ್‌ ಲಿಮಿಟೆಡ್‌ ಈ ರೈಲುಗಳನ್ನು ತಯಾರಿಸುತ್ತಿದ್ದು, ಈಗಾಗಲೇ ಮೊದಲ ಡಿಟಿಜಿ ರೈಲನ್ನು ಫೆಬ್ರವರಿ 18 ರಂದು ರವಾನಿಸಲಾಗಿದೆ. ಈ ರೈಲು ಫೆಬ್ರವರಿ ಅಂತ್ಯದ ವೇಳೆಗೆ ಪೀಣ್ಯ ಡಿಪೋ ತಲುಪುವ ನಿರೀಕ್ಷೆಯಿದೆ. ಆ ಬಳಿಕ 6 ಕೋಚ್‌ಗಳನ್ನು ಜೋಡಿಸಿ ಸಂಪೂರ್ಣ ರೈಲನ್ನು ಚಾಲನೆ ಮಾಡಲಾಗುತ್ತದೆ. ಇನ್ನು ಹೊಸದಾಗಿ ಬರುವ ರೈಲುಗಳು ಗ್ರೀನ್‌ ಮತ್ತು ಪರ್ಪಲ್‌ ಲೈನ್‌ನಲ್ಲಿ ಕಾರ್ಯಚರಿಸಲಿದೆ. ಇದರಿಂದ ರೈಲುಗಳ ನಡುವಿನ ಅಂತರವೂ ಕಡಿಮೆಯಾಗಲಿದೆ ಮತ್ತು ಪ್ರಯಾಣಿಕರು ಕಾಯುವ ಸಮಯವೂ ಇಳಿಕೆಯಾಗಲಿದೆ.

2019 ರಲ್ಲಿ ಚೀನಾದ ಸರ್ಕಾರಿ ಕಂಪನಿ 1,578 ಕೋಟಿ ರೂ. ಮೌಲ್ಯದ ಒಪ್ಪಂದದೊಂದಿಗೆ 36 ರೈಲುಗಳನ್ನು ಬಿಎಂಆರ್‌ಸಿಎಲ್‌ಗೆ ಪೂರೈಕೆ ಮಾಡುವುದಾಗಿ ಭರವಸೆ ನೀಡಿತ್ತು. ಇದರಲ್ಲಿ 15 ರೈಲುಗಳು ಯೆಲ್ಲೋ ಮಾರ್ಗಕ್ಕೆ ಮತ್ತು 21 ರೈಲುಗಳು ಪರ್ಪಲ್‌ ಮತ್ತು ಗ್ರೀನ್‌ ಲೈನ್‌ಗೆ ನೀಡಲು ಪ್ಲಾನ್‌ ಮಾಡಿತ್ತು. ಈಗಾಗಲೇ ಎರಡು ರೈಲುಗಳನ್ನು ವಿತರಿಸಲಾಗಿದ್ದು, ಇನ್ನುಳಿದ ರೈಲುಗಳನ್ನು ಟಿಆರ್‌ಎಸ್‌ಎಲ್‌ ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ.

Shwetha M