ಬಿಗ್‌ಬಾಸ್ ಸ್ಪರ್ಧಿ ವಿರುದ್ಧ ಕೇಸ್ ದಾಖಲು!‌ – ಈ ಸಲ ಡಾಗ್‌ ಸತೀಶ್‌ ಎಡವಟ್ಟೇನು?

ಬಿಗ್‌ಬಾಸ್ ಸ್ಪರ್ಧಿ ವಿರುದ್ಧ ಕೇಸ್ ದಾಖಲು!‌ – ಈ ಸಲ ಡಾಗ್‌ ಸತೀಶ್‌ ಎಡವಟ್ಟೇನು?

ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದ ಡಾಗ್‌ ಸತೀಶ್‌ ವಿರುದ್ಧ ದೂರು ದಾಖಲಾಗಿದೆ. ಶ್ವಾನ ಬಗ್ಗೆ ಅಸಭ್ಯ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅನಿಮಲ್​ ವೆಲ್​​ಫೇರ್ ಸಪೋರ್ಟ್​ ಲಕ್ಷ್ಮೀ ಅವರು ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ: ಕನ್ನಡಿಗರಿಗೆ ಖಾಲಿ ಚೊಂಬು – ರಾಜ್ಯ ಬಜೆಟ್‌ ವಿರುದ್ಧ ಬಿಜೆಪಿ ನಾಯಕರ ಪ್ರತಿಭಟನೆ

ಸೋಶಿಯಲ್ ಮೀಡಿಯಾ ಇನ್​​ಫ್ಲುಯೆನ್ಸರ್ ನಕ್ಕನ್​ಲೇ ಸುಭಾಷ್ ಕೇಳಿದ ಪ್ರಶ್ನೆಗೆ ಅಸಭ್ಯ ಉತ್ತರವನ್ನು ಸತೀಶ್‌ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಡಾಗ್ ಸತೀಶ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ಆದ ಈ ವಿಡಿಯೋದಲ್ಲಿ ಕಂಟೆಂಟ್ ಕ್ರಿಯೇಟರ್ ಟಾಟ್ ಸುಭಾಷ್ (ಸುಭಾಷ್ ಪ್ರಜಾಪತ್)ಅವರ ಜೊತೆ ಡಾಗ್ ಸತೀಶ್ ತೀರಾ ಅಸಹ್ಯ ಮತ್ತು ಅಸಭ್ಯವಾಗಿ ನಾಯಿಯ ಬಗ್ಗೆ ಮಾತನಾಡಿದ್ದಾರೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ಸತೀಶ್ ಅವರು ತಮ್ಮನ್ನು ತಾವು ಡಾಗ್ ಬ್ರೀಡರ್ ಎಂದು ಕರೆದುಕೊಂಡಿದ್ದಾರೆ. ನಾಯಿಯ ಮಿಲನದ ಕುರಿತು ಸುಭಾಷ್, ಡಾಗ್ ಸತೀಶ್ ಅವರಲ್ಲಿ ಅಸಹ್ಯಕರವಾಗಿ ಪ್ರಶ್ನೆಯನ್ನು ಕೇಳಿದ್ದರೆ, ಡಾಗ್ ಸತೀಶ್ ಇನ್ನೂ ತೀರಾ ಅಸಹ್ಯವಾಗಿ ಉತ್ತರವನ್ನು ನೀಡಿದ್ದಾರೆ. ಇಂತಹ ಮಾತುಗಳಿಂದ ಸಮಾಜದ ಮೇಲೆ ಪರಿಣಾಮ ಬೀರುತ್ತೆ ಎಂದು ಹೇಳಿರುವ ಲಕ್ಷ್ಮಿ, ಯುವಜನತೆ ಮತ್ತು ಅಪ್ರಾಪ್ತರ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ವೇಳೆ ಆರೋಪಿಗಳಾದ ಟಾಟ್ ಸುಭಾಷ್ ಮತ್ತು ಡಾಗ್ ಸತೀಶ್ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಬೇಕು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲು ಮೆಟಾ/ಫೇಸ್‌ಬುಕ್ ಸಂಸ್ಥೆಗೆ ನೋಟಿಸ್ ನೀಡಬೇಕು ಎಂದು ಕೂಡ ಆಗ್ರಹಿಸಲಾಗಿದೆ. ಒಬ್ಬ ಡಾಗ್ ಬ್ರೀಡರ್. ನಿಮಗಾದರೂ ಪ್ರಾಣಿಗಳ ಮೇಲೆ ಪ್ರೀತಿ ಬೇಡವೇ ಎಂದು ಹಲವರು ಡಾಗ್ ಸತೀಶ್ ವಿರುದ್ಧ ಕಿಡಿ ಕಾರುತ್ತಿದ್ದಾರೆ.

Shwetha M