ಗುಟ್ಟಾಗಿದ್ದ ಸಂಬಂಧ ಈಗ ಎಲ್ಲರೆದುರು ರಟ್ಟಾಯಿತು – ತ್ರಿಷಾ ಜೊತೆ ವಿಜಯ್ ಬಿಂದಾಸ್ ಸುತ್ತಾಟ

ಗುಟ್ಟಾಗಿದ್ದ ಸಂಬಂಧ ಈಗ ಎಲ್ಲರೆದುರು ರಟ್ಟಾಯಿತು – ತ್ರಿಷಾ ಜೊತೆ ವಿಜಯ್ ಬಿಂದಾಸ್ ಸುತ್ತಾಟ

ತಮಿಳು ನಟ ದಳಪತಿ ವಿಜಯ್ ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಬೇರೆ ನಟಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ ಅನ್ನೋದನ್ನು ಕೂಡಾ ಅರ್ಜಿ ಸಲ್ಲಿಕೆಯಲ್ಲಿ ದಾಖಲಿಸಿದ್ದರು. ಆದರೆ, ವಿಜಯ್ ತಂದೆ ಮಾತ್ರ ನನ್ನ ಮಗ ಅಂಥವನಲ್ಲ ಎಂದೇ ಹೇಳುತ್ತಿದ್ದರು. ಇದೀಗ ವಿಜಯ್ ತ್ರಿಷಾ ಜೊತೆ ಕೈ ಕೈ ಹಿಡಿದುಕೊಂಡು ಬಂದು ನಾನು ಅನೈತಿಕ ಸಂಬಂಧ ಹೊಂದಿರುವುದು ನಿಜ ಎಂದು ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ:ನಟಿ ಜೊತೆ ವಿಜಯ್ ಅನೈತಿಕ ಸಂಬಂಧ!‌ – ಡಿವೋರ್ಸ್‌ ಅರ್ಜಿಯಲ್ಲಿ ಸಂಗೀತಾ ಸಾಲು ಸಾಲು ಆರೋಪ!

ನಟಿ ತ್ರಿಷಾ ಮತ್ತು ನಟ ವಿಜಯ್ ದಳಪತಿ ಅವರ ಬಗ್ಗೆ ಸಾಕಷ್ಟು ವಿವಾದ ಕೇಳಿಬರುತ್ತಿದೆ. ಇದರ ನಡುವೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಅನೈತಿಕ ಸಂಬಂಧ ಇರುವುದು ನಿಜ ಎಂದು ತೋರಿಸಿಕೊಟ್ಟಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ. ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ, ವಿಜಯ್ ಅವರು ಖ್ಯಾತ ನಟಿ ತ್ರಿಷಾ ಕೃಷ್ಣನ್ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಚೆನ್ನೈನಲ್ಲಿ ನಡೆದ ಎಸ್‌. ಕಲ್ಪತಿ ಸುರೇಶ್ ಮತ್ತು ಮೀನಾಕ್ಷಿ ಸುರೇಶ್ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ವಿಜಯ್ ಹಾಗೂ ತ್ರಿಷಾ ಒಟ್ಟಾಗಿ ಭಾಗವಹಿಸಿದ್ದರು. ವಿಚ್ಛೇದನದ ವದಂತಿಗಳು ಮತ್ತು ಟೀಕೆಗಳು ಜೋರಾಗಿರುವ ಈ ಸಮಯದಲ್ಲಿ, ವಿಜಯ್ ಮತ್ತು ತ್ರಿಷಾ ಅವರು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ವಿಜಯ್ ಅವರ ಪತ್ನಿ ಸಂಗೀತಾ ಸಲ್ಲಿಸಿದ್ದಾರೆ ಎನ್ನಲಾದ ವಿಚ್ಛೇದನ ಅರ್ಜಿಯಲ್ಲಿ, ವಿಜಯ್ ಅವರಿಗೆ ಓರ್ವ ನಟಿಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಲಾಗಿತ್ತು. ಈ ನಟಿ ಬೇರೆ ಯಾರೂ ಅಲ್ಲ, ಅದು ತ್ರಿಷಾ ಕೃಷ್ಣನ್ ಎಂದೇ ನೆಟ್ಟಿಗರು ಊಹಿಸುತ್ತಿದ್ದಾರೆ. ಇವರಿಬ್ಬರೂ ದೀರ್ಘಕಾಲದಿಂದ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬ ಸುದ್ದಿಯೂ ಕೇಳಿಬಂದಿತ್ತು.

Sulekha

Leave a Reply

Your email address will not be published. Required fields are marked *