ಪಂದ್ಯಶ್ರೇಷ್ಠ ಪ್ರಶಸ್ತಿ ಸಲ್ಲಬೇಕಾಗಿದ್ದು ನನಗಲ್ಲ.. – ಗೆಲುವಿನ ಕ್ರೆಡಿಟ್ ಬುಮ್ರಾಗೆ ನೀಡಿದ ಸಂಜು ಸ್ಯಾಮ್ಸನ್

ಪಂದ್ಯಶ್ರೇಷ್ಠ ಪ್ರಶಸ್ತಿ ಸಲ್ಲಬೇಕಾಗಿದ್ದು ನನಗಲ್ಲ.. – ಗೆಲುವಿನ ಕ್ರೆಡಿಟ್ ಬುಮ್ರಾಗೆ ನೀಡಿದ ಸಂಜು ಸ್ಯಾಮ್ಸನ್

ಟಿ20 ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಬರೀ ಬೆಂಚ್‌ಗಷ್ಟೇ ಸೀಮಿತರಾಗಿದ್ದರು. ಯಾಕೆಂದರೆ, ಯಂಗ್ ಗನ್ ಅಭಿಷೇಕ್ ಶರ್ಮಾ ಮೇಲೇನೆ ನಂಬಿಕೆ ಜಾಸ್ತಿ ಇತ್ತು. ಕೊನೆಗೂ ತನ್ನ ತಾಕತ್ತು ತೋರಿಸಿದ್ದಾರೆ ಸಂಜು ಸ್ಯಾಮ್ಸನ್. ತನ್ನನ್ನು ಟೀಕೆ ಮಾಡಿದವರಿಗೆ ತನ್ನ ಬ್ಯಾಟಿಂಗ್‌ನಲ್ಲೇ ಉತ್ತರ ನೀಡಿದ್ದಾರೆ. ಜೊತೆಗೆ ಮಹತ್ವದ ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹೀಗಿದ್ದರೂ ಕೂಡಾ ಸಂಜು ಗೆಲುವಿನ ಕ್ರೆಡಿಟ್ ತನ್ನ ಸಹ ಆಟಗಾರನಿಗೆ ನೀಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್ ಸೋಲಿಗೆ ಕಾರಣ ಬುಮ್ರಾ – ಜಸ್‌ಪ್ರೀತ್‌ರನ್ನ ಹಾಡಿ ಹೊಗಳಿದ ಇಂಗ್ಲೆಂಡ್ ಕೋಚ್

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 7 ರನ್‌ಗಳ ರೋಮಾಂಚಕ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ ಅಮೋಘ ಇನ್ನಿಂಗ್ಸ್ ಕಟ್ಟಿದರು. ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 89 ರನ್ ಗಳಿಸಿದರು, ಇದರಲ್ಲಿ 7 ಸಿಕ್ಸರ್‌ಗಳು ಮತ್ತು 8 ಬೌಂಡರಿಗಳು ಸೇರಿವೆ. ಸಂಜು 211.90 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ರು. ಭಾರತ ಇಂಗ್ಲೆಂಡ್‌ಗೆ  254 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಆದರೆ, ಆಂಗ್ಲಪಡೆ ಕೂಡಾ ಕಠಿಣ ಹೋರಾಟ ನಡೆಸಿತ್ತು. ಕೊನೇವರೆಗೂ ಪಂದ್ಯವನ್ನು ತನ್ನ ಪರ ಉಳಿಸಿಕೊಳ್ಳಲು ಬ್ರಿಟಿಷ್ ಪಡೆ ಹರಸಾಹಸ ಪಟ್ಟಿತು. ಕೊನೆಗೂ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 246 ರನ್ ಗಳಿಸಿತು. ಇಲ್ಲೂ ಕೂಡಾ ಟೀಮ್ ಇಂಡಿಯಾ ಬೌಲರ್‌ಗಳು ಭಾರತದ ಪಾಲಿಗೆ ವರವಾದರು. ಅದರಲ್ಲೂ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ಆಟಗಾರರನ್ನು ನಿಯಂತ್ರಿಸುವಲ್ಲಿ ಸಕ್ಸಸ್ ಆಗಿದ್ದರು. ನಂತರ ಪಂದ್ಯ ಮುಗಿದ ಮೇಲೆ ಭಾರತದ ಹೈಸ್ಕೋರ್ ಗೆ ಕಾರಣವಾದ ಸಂಜು ಸ್ಯಾಮ್ಸನ್​​ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ಯಾಮ್ಸನ್. ಕಳೆದ ಪಂದ್ಯದಿಂದ ನನ್ನ ಫಾರ್ಮ್ ಉತ್ತಮವಾಗಿದೆ ಅನಿಸಿತ್ತು, ಆದ್ದರಿಂದ ನಾನು ಸ್ವಲ್ಪ ಹೆಚ್ಚು ಸಮಯ ನೀಡಿದ್ದೇನೆ, ಎಫರ್ಟ್​ ಫಲ ನೀಡಿತು. ನಾವು ವಾಂಖೆಡೆ ಕ್ರೀಡಾಂಗಣದಲ್ಲಿ ಹಲವು ಪಂದ್ಯಗಳನ್ನು ಆಡಿದ್ದೇವೆ, ಆದ್ದರಿಂದ ಇಲ್ಲಿನ ಪಿಚ್​ ನಮಗೆ ಚೆನ್ನಾಗಿ ತಿಳಿದಿದೆ. ಇಂದು ತಂಡ ಆಡಿದ ರೀತಿ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು. ನಂತರ ಮಾತು ಮುಂದುವರೆಸಿದ, ಸಂಜು ಸ್ಯಾಮ್ಸನ್, ಈ ಗೆಲುವಿನ ಕ್ರೆಡಿಟ್​ ನನಗಲ್ಲ ಎಂದಿದ್ದಾರೆ. ಈ ಗೌರವಕ್ಕೆ ಜಸ್​ಪ್ರೀತ್ ಬೂಮ್ರಾ ಹೆಚ್ಚು ಅರ್ಹರು ಎಂದು ಸಂಜು ಸ್ಯಾಮ್ಸನ್​ ಹೇಳಿದ್ದಾರೆ. ಸಂಪೂರ್ಣ ಕ್ರೆಡಿಟ್ ಜಸ್ಪ್ರೀತ್ ಬುಮ್ರಾ ಅವರಿಗೆ ಸಲ್ಲುತ್ತದೆ. ವಾಂಖೆಡೆಯಲ್ಲಿ ಆಡುವುದೇ ಅದ್ಭುತ ಫೀಲಿಂಗ್. ನೀವು ಶತಕ ಗಳಿಸುವ ಬಗ್ಗೆ ಯೋಚಿಸಿ ಆಡಬೇಕಾಗಿಲ್ಲ; ಅದು ಆಟದ ಜೊತೆಯೇ ಬರುತ್ತದೆ. ತಂಡಕ್ಕೆ ಉತ್ತಮವಾಗಿ ಆಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಸಂಜು ಸ್ಯಾಮ್ಸನ್ ಸಂತಸ ವ್ಯಕ್ತಪಡಿಸಿದ್ರು.

ಈ ಪಂದ್ಯದಲ್ಲಿ, ಇಂಗ್ಲೆಡ್​​ ಆಟಗಾರರು ಟೀಮ್ ಇಂಡಿಯಾದ ಇತರ ಬೌಲರ್‌ಗಳ ಮೇಲೆ ದಾಳಿ ನಡೆಸುತ್ತಿದ್ದಾಗ, ಬುಮ್ರಾ ತಮ್ಮ 4 ಓವರ್‌ಗಳಲ್ಲಿ ಕೇವಲ 33 ರನ್‌ಗಳನ್ನು ನೀಡುವ ಮೂಲಕ ಟೀಮ್ ಇಂಡಿಯಾವನ್ನೇ ಕಾಡಿ ಹ್ಯಾರಿ ಬ್ರೂಕ್ ಅವರ ವಿಕೆಟ್ ಪಡೆದ್ರು. ನಿರ್ಣಾಯಕ 18 ನೇ ಓವರ್‌ನಲ್ಲಿ ಕೇವಲ 6 ರನ್‌ಗಳನ್ನು ನೀಡುವ ಮೂಲಕ ಬುಮ್ರಾ ಭಾರತವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದರು. ಹೀಗಾಗಿ ಸಂಜು ಸ್ಯಾಮ್ಸನ್ ತನಗೆ ಸಿಕ್ಕ ಗೌರವಕ್ಕಿಂತೂ ಬುಮ್ರಾರೇ ಇದಕ್ಕೆ ಸೂಕ್ತವ್ಯಕ್ತಿ ಎಂದು ಹೇಳುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.

Sulekha

Leave a Reply

Your email address will not be published. Required fields are marked *