ಅಮೆಜಾನ್ ಕಾಡಿನಲ್ಲಿ ಇದ್ದಾರೆ ಬುಡಕಟ್ಟು ಜನ – ಹೊರ ಜಗತ್ತಿನ ಬಗ್ಗೆ ಇವರಿಗೆ ಭಯ ಯಾಕೆ?

ಅಮೆಜಾನ್ ಕಾಡು. ಅದೆಷ್ಟೋ ಅದ್ಭುತ ನೈಸರ್ಗಿಕ ವಿಶಿಷ್ಟತೆಗಳಿಗೆ ಸಾಕ್ಷಿಯಾಗಿರೋ ದಟ್ಟಾರಣ್ಯ. ಇಲ್ಲಿನ ಪ್ರತಿಯೊಂದು ಗಿಡ, ಮರ, ಸಸ್ಯ, ಜೀವ ಸಂಕುಲ ಎಲ್ಲವೂ ಬೆರಗುಗೊಳಿಸುತ್ತೆ. ಹಾಗೇ ಅಮೆಜಾನ್ ಕಾಡಿನಲ್ಲಿ ವಾಸಿಸೋ ಬುಡಕಟ್ಟು ಜನ ಇಂದಿಗೂ ಹೊರ ಜಗತ್ತಿಗೆ ಕೌತುಕವಾಗಿದ್ದಾರೆ. ಅಮೆಜಾನ್ ಕಾಡು ಸುಮಾರು 9 ದೇಶಗಳಲ್ಲಿ ಹರಡಿಕೊಂಡಿದ್ದು ಭೂಮಿಯ ಶ್ವಾಸಕೋಶ ಎಂದೇ ಕರೆಯಲಾಗುತ್ತೆ.
ಇದನ್ನೂ ಓದಿ : ಮೊಟ್ಟೆ ಉದ್ಯಮ ನಂಬಿದವರ ಹೊಟ್ಟೆಗೆ ಬೀಳುತ್ತಾ ತಣ್ಣೀರು ಬಟ್ಟೆ? – ಯುದ್ಧದಿಂದಾಗಿ ಮೊಟ್ಟೆ ರಫ್ತು ಸ್ಥಗಿತ
ಅಮೆಜಾನ್ ಕಾಡುಗಳಲ್ಲಿ ನಾಗರಿಕ ಪ್ರಪಂಚದಿಂದ ದೂರದಲ್ಲಿ ವಾಸಿಸುವ ಕೆಲವು ಬುಡಕಟ್ಟು ಜನಾಂಗಗಳು ಕೂಡ ಇವೆ. ಅವರ ಜೀವನ ಮತ್ತು ಸಂಸ್ಕೃತಿಯ ಬಗ್ಗೆ ಈಗಲೂ ಬಹಳ ಕಡಿಮೆ ಮಾಹಿತಿ ಇದೆ. ಹೀಗಾಗಿಯೇ ಹೊರಜಗತ್ತಿಗೆ ಅವರು ಇನ್ನೂ ನಿಗೂಢವಾಗಿಯೇ ಉಳಿದಿದ್ದಾರೆ. ಅದಕ್ಕೆ ಕಾರಣ ಅಮೆಜಾನ್ ಕಾಡಿನಲ್ಲಿರುವ ಕೆಲವು ಬುಡಕಟ್ಟುಗಳು ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಲು ಬಯಸುವುದಿಲ್ಲ. ಈ ಬುಡಕಟ್ಟು ಜನಾಂಗದವರು ಸಾವಿರಾರು ವರ್ಷಗಳಿಂದ ತಮ್ಮ ಸಂಸ್ಕೃತಿ ಮತ್ತು ಜೀವನ ವಿಧಾನವನ್ನು ಸಂರಕ್ಷಿಸಿದ್ದಾರೆ. ಅವರು ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡುವ ಮೂಲಕ ಮತ್ತು ಕಾಡಿನಿಂದ ಹಣ್ಣುಗಳನ್ನು ಸಂಗ್ರಹಿಸುವ ಮೂಲಕ ಬದುಕುತ್ತಾರೆ. ಈ ಬುಡಕಟ್ಟು ಜನಾಂಗದವರು ಹೊರಗಿನ ಪ್ರಪಂಚಕ್ಕೆ ತಿಳಿದಿಲ್ಲದಿರಲು ಹಲವು ಕಾರಣಗಳಿವೆ. ಹಿಂದೆ, ಅವರು ಹೊರಗಿನವರೊಂದಿಗೆ ಸಂಪರ್ಕಕ್ಕೆ ಬಂದಾಗ, ಅವರು ರೋಗಗಳಿಗೆ ತುತ್ತಾಗುವುದು ಮತ್ತು ತಮ್ಮ ಭೂಮಿಯನ್ನು ಕಳೆದುಕೊಳ್ಳುವಂತಹ ಕಹಿ ಅನುಭವಗಳನ್ನು ಎದುರಿಸುತ್ತಿದ್ದರು. ಅದಕ್ಕಾಗಿಯೇ ಅವರು ಆಧುನಿಕ ನಾಗರಿಕತೆಯನ್ನು ದೂರವಿಟ್ಟು ತಮ್ಮ ಸಂಪ್ರದಾಯಗಳನ್ನು ಮಾತ್ರ ಉಳಿಸಿಕೊಳ್ಳುತ್ತಾರೆ.
ಈ ಬುಡಕಟ್ಟು ಜನಾಂಗಗಳನ್ನು ಗುರುತಿಸುವುದು ಕಷ್ಟ. ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಕೆಲವೊಮ್ಮೆ ಕಾಡುಗಳಲ್ಲಿನ ಅವರ ಆವಾಸಸ್ಥಾನಗಳು ಮತ್ತು ಬೇಟೆಯಾಡುವ ಸ್ಥಳಗಳನ್ನು ಗುರುತಿಸಲು ವೈಮಾನಿಕ ಸಮೀಕ್ಷೆಗಳನ್ನು ನಡೆಸುತ್ತವೆ. ಈ ಸಮೀಕ್ಷೆಗಳಲ್ಲಿ ಕಂಡುಬರುವ ಗುಡಿಸಲುಗಳು ಮತ್ತು ಹೊಲಗಳ ಸಂಖ್ಯೆಯನ್ನು ಅಂದಾಜಿಸಲಾಗಿದೆ. ಆದಾಗ್ಯೂ, ಅವರ ಹೆಸರುಗಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಬಹಳ ಕಡಿಮೆ ತಿಳಿದಿದೆ. ಬ್ರೆಜಿಲ್ನಲ್ಲಿರುವ FUNAI ನಂತಹ ಸಂಸ್ಥೆಗಳು ಈ ಬುಡಕಟ್ಟು ಜನಾಂಗಗಳನ್ನು ರಕ್ಷಿಸಲು ಕೆಲಸ ಮಾಡುತ್ತಿವೆ. ಅಮೆಜಾನ್ನಲ್ಲಿರುವ ಈ ಬುಡಕಟ್ಟು ಜನಾಂಗದವರು ಆಧುನಿಕ ಜಗತ್ತಿಗೆ ಒಂದು ಉತ್ತಮ ಸಂದೇಶವನ್ನು ಹೊಂದಿದ್ದಾರೆ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು ಮತ್ತು ತಮ್ಮ ಸಂಸ್ಕೃತಿಯನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ನಮಗೆ ತೋರಿಸುತ್ತಾರೆ. ಆದರೆ ಇತ್ತೀಚೆಗೆ ಹೊರಗಿನ ಪ್ರಪಂಚದ ಜೊತೆಗೆ ಯಾವುದೇ ಸಂಪರ್ಕವೇ ಇಲ್ಲದ ಅಮೇಜಾನ್ ಕಾಡಿನ ಬುಡಕಟ್ಟು ಸಮುದಾಯದ ಜನರನ್ನು ಬಹಳ ಹತ್ತಿರದಿಂದ ವೀಡಿಯೋ ಮಾಡಿರುವಂತ ದೃಶ್ಯಾವಳಿಯನ್ನು ಸಂರಕ್ಷಣಾವಾದಿ ಪಾಲ್ ರೊಸೋಲಿ ಅವರು ಬಿಡುಗಡೆ ಮಾಡಿದ್ದರು.
ವಿಶ್ವದ ಅತ್ಯಂತ ಪ್ರತ್ಯೇಕವಾದ ಮಾನವ ಸಮುದಾಯಗಳಲ್ಲಿ ಒಂದಾದ ಹಾಗೂ ಹೊರಪ್ರಪಂಚದ ನಾಗರಿಕ ಜನರಿಗೆ ನೋಡುವುದಕ್ಕೆ ತೀರಾ ಅಪರೂಪವೆನಿಸಿದ ಬುಡಕಟ್ಟು ಸಮುದಾಯದಲ್ಲಿ ಅಮೇಜಾನ್ನಲ್ಲಿ ವಾಸವಿರುವ ಅಮೆಜೋನಿಯಯನ್ ಬುಡಕಟ್ಟು ಸಮುದಾಯವೂ ಕೂಡ ಒಂದಾಗಿದೆ ಅವರನ್ನು ಬಹಳ ಹತ್ತಿರದಿಂದ ನೋಡಿದ್ದಾಗಿ ಕನ್ಸರ್ವೇಟಿವ್ ಪಾಲ್ ರೊಸೋಲಿ ಅವರು ಹೇಳಿಕೊಂಡಿದ್ದು, ತಾವು ಹಿಂದೆಂದೂ ನೋಡಿರದ ದೃಶ್ಯಗಳನ್ನು ಅವರು ಈಗ ಹೊರ ಜಗತ್ತಿಗೆ ಬಹಿರಂಗಪಡಿಸಿದ್ದಾರೆ. ಹೀಗಾಗಿ ಈ ಬುಡಕಟ್ಟು ಸಮುದಾಯದ ವಿಭಿನ್ನ ನೋಟವು ಜಾಗತಿಕ ಗಮನ ಸೆಳೆಯುತ್ತಿದೆ. ಪ್ರಪಂಚದಾದ್ಯಂತ ಸುಮಾರು 200ಕ್ಕೂ ಹೆಚ್ಚುಬುಡಕಟ್ಟು ಜನಾಂಗಗಳು ಇನ್ನೂ ಅಸ್ತಿತ್ವದಲ್ಲಿವೆ ಎಂದು ತಜ್ಞರು ಅಂದಾಜಿಸಿದ್ದಾರೆ. , ಅವರಲ್ಲಿ ಹೆಚ್ಚಿನವರು ಬ್ರೆಜಿಲ್ ಮತ್ತು ಪೆರುವಿನಾದ್ಯಂತ ಇರುವ ಅಮೆಜಾನ್ನ ಕಾಡಿನ ನಡುವೆ ವಾಸಿಸುತ್ತಿದ್ದಾರೆ.

ನೋಡಿರಿ

