ಸಂಜು ವಿರುದ್ಧ BAN ಟ್ರೆಂಡ್ – ENG ವಿರುದ್ಧ ಆಡಲ್ವಾ ಚೇಟಾ?
ಕರನ್ ಸೊಕ್ಕಿಳಿಸ್ತಾರಾ ಇಂಡಿಯನ್ಸ್?

ವೆಸ್ಟ್ ಇಂಡೀಸ್ ವಿರುದ್ಧದ ಮಸ್ಟ್ ವಿನ್ ಮ್ಯಾಚಲ್ಲಿ ಅಬ್ಬರಿಸಿ ಭಾರತಕ್ಕೆ ಸೆಮೀಸ್ ಟಿಕೆಟ್ ಗೆಲ್ಲಿಸಿದ್ದ ಸಂಜು ಸ್ಯಾಮ್ಸನ್ ಈಗ ಇಂಗ್ಲೆಂಡ್ ವಿರುದ್ಧದ ಮ್ಯಾಚಲ್ಲಿ ಆಡ್ತಾರೋ ಇಲ್ವೋ ಅನ್ನೋ ಟೆನ್ಷನ್ ಶುರುವಾಗಿದೆ. ಯಾಕಂದ್ರೆ ಸಂಜು ಸ್ಯಾಮ್ಸನ್ ವಿರುದ್ಧ ಬ್ಯಾನ್ ಟ್ರೆಂಡ್ ಸ್ಟಾರ್ಟ್ ಆಗಿದೆ. ವಿಂಡೀಸ್ ಎದುರಿನ ಮ್ಯಾಚಲ್ಲಿ ಸಂಜು ಮಾಡಿದ ಆ ತಪ್ಪು ನಿಷೇಧದ ಭೀತಿ ಹುಟ್ಟಿಸಿದೆ. ಮತ್ತೊಂದ್ಕಡೆ ಆಂಗ್ಲರು ಬಾಲ ಬಿಚ್ಚೋಕೆ ಸ್ಟಾರ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಒಂದೇ ಕೊಠಡಿಯಿಂದ 15 ಜನ ಪಾಸ್ ಆಗಿದ್ದು ಹೇಗೆ? – ಕೆಎಎಸ್ ಪರೀಕ್ಷಾ ಫಲಿತಾಂಶದ ಕುರಿತು ಆರೋಪಕ್ಕೆ ಸಿಕ್ತಾ ಉತ್ತರ?
ಸಂಜು ಸ್ಯಾಮ್ಸನ್. ಟೀಂ ಇಂಡಿಯಾದ ಅನುಭವಿ ಆಟಗಾರ. ಬಟ್ ಇತ್ತೀಚೆಗೆ ಅವ್ರ ಫಾರ್ಮ್ನಲ್ಲಿ ಸಾಕಷ್ಟು ಅಪ್ಸ್ ಌಂಡ್ ಡೌನ್ಸ್ ಆಗಿದೆ. ಈಗ ವಿಂಡೀಸ್ ವಿರುದ್ಧದ ಕೊನೇ ಮ್ಯಾಚಲ್ಲಿ ಅದ್ಭುತ ಇನ್ನಿಂಗ್ಸ್ ಬಂದ್ಮೇಲೆ ಮುಂದಿನ ಪಂದ್ಯಗಳಲ್ಲೂ ಅವ್ರ ಮೇಲೆ ಹೋಪ್ಸ್ ಇಡ್ಬೋದಾಗಿದೆ. ಬಟ್ ಇಂಥಾ ಟೈಮಲ್ಲಿ ಸಂಜುಗೆ ಬ್ಯಾನ್ ಭೀತಿ ಎದುರಾಗಿದೆ.
ಇಂಗ್ಲೆಂಡ್ ವಿರುದ್ಧದ ಪಂದ್ಯ ಆಡಲ್ವಾ ಸಂಜು ಸ್ಯಾಮ್ಸನ್?
ವಿಂಡೀಸ್ ವಿರುದ್ಧದ ಪಂದ್ಯದ ಬಳಿಕ ಸಂಜು ಸ್ಯಾಮ್ಸನ್ ಮಾಡಿದ ಸೆಲೆಬ್ರೇಷನ್ ರೀತಿಯೇ ಇಂಥಾದ್ದೊಂದು ಪ್ರಶ್ನೆ ಹುಟ್ಟು ಹಾಕಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 97 ರನ್ ಗಳಿಸಿದ್ದ ಸಂಜು ಭಾರತದ ಪರ ವಿನ್ನಿಂಗ್ ಫೋರ್ ಸಿಡಿಸಿದ್ರು. ಭಾರತ ಸೆಮೀಸ್ಗೆ ಕಾಲಿಟ್ಟಿದ್ದು ಕನ್ಫರ್ಮ್ ಆಗ್ತಿದ್ದಂತೆ ಫುಲ್ ಜೋಶ್ನಲ್ಲೇ ತಮ್ಮ ಹೆಲ್ಮೆಟ್ ಅನ್ನು ನೆಲಕ್ಕೆ ಎಸೆದಿದ್ದರು. ಈ ಸಂಭ್ರಮವೇ ಈಗ ಸ್ಯಾಮ್ಸನ್ ಪಾಲಿಗೆ ಟೆನ್ನನ್ ತಂದಿಟ್ಟಿದೆ. ಯಾಕಂದ್ರೆ ಐಪಿಎ ನೀತಿ ಸಂಹಿತೆಯ ಅಡಿಯಲ್ಲಿ ಆಟಗಾರನು ಯಾವುದೇ ವಸ್ತುವನ್ನು ಮೈದಾನದಲ್ಲಿ ಎಸೆದರೆ ಅದನ್ನ ಅಶಿಸ್ತು ಅಂತಾನೇ ಹೇಳಲಾಗುತ್ತೆ. ವಿನ್ನಿಂಗ್ ಶಾಟ್ ಬಳಿಕ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಸ್ಯಾಮ್ಸನ್ ತನ್ನ ಹೆಲ್ಮೆಟ್ ತೆಗೆದು ನೆಲಕ್ಕೆ ಬಿಸಾಕಿದ್ರು. ಬಳಿಕ ಮೊಣಕಾಲೂರಿ ತಮ್ಮ ದೇವರಿಗೆ ಧನ್ಯವಾದ ಅರ್ಪಿಸಿದರು. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಪ್ರಕಾರ ಬ್ಯಾಟ್, ಹೆಲ್ಮೆಟ್ ಅಥವಾ ವಿಕೆಟ್ ಗಳನ್ನ ಡಿಸ್ ರೆಸ್ಪೆಕ್ಟ್ ಮಾಡಿದ್ರೆ ಅದನ್ನ ಅಪರಾಧ ಅಂತಾನೇ ಕನ್ಸಿಡರ್ ಮಾಡ್ತಾರೆ. ಲೆವೆಲ್ 1 ಉಲ್ಲಂಘನೆಯಾಗುತ್ತೆ. ಈ ರೀತಿಯ ವರ್ತನೆಗೆ ಪಂದ್ಯದ ಸಂಭಾವನೆಯ ಶೇ.50ರಷ್ಟು ದಂಡ ಅಥವಾ ವಾರ್ನಿಂಗ್ ಜೊತೆ ಒಂದು ಅಥವಾ ಎರಡು ಡಿಮೆರಿಟ್ ಪಾಯಿಂಟ್ಸ್ ಕೊಡ್ಬೋದು. ಅಥವಾ ಒಂದು ಪಂದ್ಯದಿಂದ ನಿಷೇಧವನ್ನೂ ಮಾಡಬಹುದು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸೆಮೀಸ್ನಲ್ಲಿ ಸಂಜು ಆಡ್ತಾರೋ ಇಲ್ಬೋ ಅನ್ನೋ ಅನುಮಾನ ಶುರುವಾಗಿದೆ. ಇನ್ನೊಂದು ಌಂಗಲ್ನಲ್ಲಿ ನೋಡಿದ್ರೆ ಸಂಜು ಈ ಟೂರ್ನಿಯಲ್ಲಿ ಮಾಡಿರೋ ಮೊದಲ ಮಿಸ್ಟೇಕ್ ಆಗಿರೋದ್ರಿಂದ ಜಸ್ಟ್ ಫೈನ್ ಹಾಕೋ ಚಾನ್ಸಸ್ ಇದೆ. ಹೀಗೆ ಒಂದ್ಕಡೆ ಸಂಜು ಸ್ಯಾಮ್ಸನ್ ತಮ್ಮದೇ ಸೆಲೆಬ್ರೇಷನ್ನಿಂದ ಟೆನ್ಷನ್ನಲ್ಲಿದ್ರೆ ಅತ್ತ ಇಂಗ್ಲೆಂಡ್ ಪ್ಲೇಯರ್ಸ್ ಆಲ್ರೆಡಿ ಪಂದ್ಯವನ್ನೇ ಗೆದ್ದಿರೋ ಥರ ಬಿಲ್ಡಪ್ ಕೊಡೋಕೆ ಸ್ಟಾರ್ಟ್ ಮಾಡಿದ್ದಾರೆ. ಅಭಿಮಾನಿಗಳ ವಿರುದ್ಧ ಸೊಕ್ಕಿನ ಮಾತನ್ನಾಡಿದ್ದಾರೆ.
ಇಂಡಿಯನ್ಸ್ ಜೋಶ್ ನೋಡಿ ವಿದೇಶಿ ಆಟಗಾರರಿಗೆ ಉರಿ!
ಕ್ರಿಕೆಟ್ ಹುಟ್ಟಿದ್ದು ಇಂಗ್ಲೆಂಡ್ನಲ್ಲೇ ಆದ್ರೂ ಅದನ್ನ ಜೀವಿಸ್ತಿರೋದು ಹಾಗೇ ಎಮೋಷನಲಿ ಕನೆಕ್ಟ್ ಆಗಿರೋದು ಇಂಡಿಯನ್ಸ್ ಫ್ಯಾನ್ಸ್. ಹೀಗಾಗಿ ವಿಶ್ವಕ್ರಿಕೆಟ್ನಲ್ಲಿ ಭಾರತ ಯಾವತ್ತಿದ್ರೂ ಬಾಸ್. ಸೋ ಭಾರತದಲ್ಲಿ ಸರಣಿಗಳು ನಡೆದಾಗ್ಲೇ ಹೌಸ್ಫುಲ್ ಆಗೋ ಮೈದಾನಗಳು ಐಸಿಸಿ ಟೂರ್ನಮೆಂಟ್ಸ್ನಲ್ಲಿ ಭಾರತದ ಪಂದ್ಯ ಇದ್ದಾಗ ಕೇಳ್ಬೇಕಾ. ಇಡೀ ಸ್ಟೇಡಿಯಂ ಬ್ಲ್ಯೂಜೆರ್ಸಿಯಲ್ಲೇ ತುಂಬಿರುತ್ತೆ. ಌಂಡ್ ಫ್ಯಾನ್ಸ್ ಕೂಗಾಟ ನೆಕ್ಸ್ಟ್ ಲೆವೆಲ್ನಲ್ಲಿರುತ್ತೆ. ಭಾರತೀಯ ಅಭಿಮಾನಿಗಳ ಇದೇ ಕ್ರೇಜ್, ಇದೇ ಸಪೋರ್ಟ್ ಕೆಲವು ಸಲ ವಿದೇಶಿ ಆಟಗಾರರಿಗೆ ಡೈಜೆಸ್ಟ್ ಮಾಡಿಕೊಳ್ಳೋಕೆ ಆಗಲ್ಲ. ಈಗ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರ್ರನ್ಗೆ ಆಗಿರೋದೂ ಅದೇ.
ವಾಂಖೆಡೆಯಲ್ಲಿ ಭಾರತೀಯ ಫ್ಯಾನ್ಸ್ ಸೈಲೆಂಟ್ ಮಾಡ್ತೇವೆಂದ ಕರನ್!
ಐಸಿಸಿ ಟೂರ್ನಮೆಂಟ್ಸ್ನಲ್ಲಿ ಬಿಗ್ ಇವೆಂಟ್ಸ್ ಟೈಮಲ್ಲಿ ವಿದೇಶಿ ಆಟಗಾರರು ಬರೀ ಪ್ಲೇಯರ್ಗಳನ್ನ ಟ್ರಿಗರ್ ಮಾಡಲ್ಲ. ಜೊತೆಗೆ ಅಭಿಮಾನಿಗಳನ್ನೂ ಟಾರ್ಗೆಟ್ ಮಾಡ್ತಿದ್ದಾರೆ. ಈಗ ಇಂಡಿಯಾ-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ ಆಲ್ರೌಂಡರ್ ಸ್ಯಾಮ್ ಕರನ್ ಟೀಮ್ ಇಂಡಿಯಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಸೆಮೀಸ್ಗೂ ಮುನ್ನ ನಡೆದ ಪ್ರೆಸ್ಮೀಟ್ನಲ್ಲಿ ಮಾತನಾಡಿರೋ ಸ್ಯಾಮ್ ಕರನ್, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತೀಯ ಅಭಿಮಾನಿಗಳನ್ನು ಸೈಲೆಂಟ್ ಮಾಡ್ತೀವಿ ಎಂದಿದ್ದಾರೆ. ಹಾಗೇ ನಮ್ಮ ತಂಡ ಯಾವುದಕ್ಕೂ ಕೇರ್ ಮಾಡಲ್ಲ. ಮ್ಯಾಚ್ ನೋಡೋಕೆ ಬಂದಿರೋ ಇಂಡಿಯನ್ಸ್ ಸೈಲೆಂಟ್ ಆಗಿದ್ದಾರೆ ಅಂದ್ರೆ ಇಂಗ್ಲೆಂಡ್ ಸೂಪರ್ ಡೂಪರ್ ಆಗಿ ಪರ್ಫಾಮ್ ಮಾಡ್ತಿದೆ ಅಂತಾ ಅರ್ಥ. ಹೀಗಾಗಿ ನಾವು ಪ್ರೇಕ್ಷಕರನ್ನು ಸ್ಥಬ್ಧಗೊಳಿಸುತ್ತೇವೆ ಎಂದು ಸೊಕ್ಕಿನ ಮಾತಾಡಿದ್ದಾರೆ. 2023ರ ಏಕದಿನ ವಿಶ್ವಕಪ್ ಫೈನಲ್ಗೂ ಮುನ್ನ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಕೂಡ ಇಂಥದ್ದೇ ಹೇಳಿಕೆ ನೀಡಿದ್ರು. ಇನ್ನು ಸೂಪರ್ 8 ಸುತ್ತಿನಲ್ಲಿ ಭಾರತ ವರ್ಸಸ್ ಸೌತ್ ಆಫ್ರಿಕಾ ನಡುವಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರ ಬಗ್ಗೆ ಸೌತ್ ಆಫ್ರಿಕಾ ತಂಡದ ಕೋಚ್ ಶುಕ್ರಿ ಕಾನ್ರಾಡ್ ಇಂಥದ್ದೇ ದರ್ಪದ ಮಾತುಗಳನ್ನಾಡಿದ್ರು. ಭಾರತೀಯರ ಬಂಡವಾಳ ಬಿಚ್ಚಿಡ್ತೀವಿ ಅಂದಿದ್ರು. ಈಗ ಕರನ್ ಕೂಡ ಇದೇ ರೀತಿಯಲ್ಲೇ ಮಾತನಾಡಿದ್ದಾರೆ. ಮೊದಲ ಸೆಮೀಸ್ನಲ್ಲಿ ನ್ಯೂಜಿಲೆಂಡ್ ತಂಡ ಅಬ್ಬರಿಸಿ ಫೈನಲ್ ಟಿಕೆಟ್ ಗಿಟ್ಟಿಸಿಕೊಂಡಿದೆ. ಇತ್ತ ಎರಡನೇ ಟಿಕೆಟ್ಗಾಗಿ ವಾಂಖೆಡೆಯಲ್ಲಿ ಭಾರತ ಇಂಗ್ಲೆಂಡ್ ಮುಖಾಮುಖಿಯಾಗ್ತಾರೆ. ಬಟ್ ಪಂದ್ಯಕ್ಕೂ ಮುನ್ನ ಬಿಸಿ ಜಾಸ್ತಿಯಾಗ್ತಿದ್ದು ಫ್ಯಾನ್ಸ್ ಅಂತೂ ಕ್ಯೂರಿಯಸ್ ಆಗಿ ಕಾಯ್ತಿದ್ದಾರೆ.

ನೋಡಿರಿ

