ಹರಿಣಗಳ ಕಿವಿ ಹಿಂಡಿದ ಕಿವೀಸ್ – ಮತ್ತೆ ಚೋಕರ್ಸ್ ಆದ ಸೌತ್ ಆಫ್ರಿಕಾ!
ಚೊಚ್ಚಲ ಟ್ರೋಫಿ ಗೆಲ್ಲುತ್ತಾ NZ?

ಅನ್ಬೀಟನ್, ಹಾಟ್ ಫೇವರೆಟ್ ಟೀಂ ಆಗಿ ಸೆಮೀಸ್ಗೆ ಕಾಲಿಟ್ಟಿದ್ದ ಸೌತ್ ಆಫ್ರಿಕಾಗೆ ಒನ್ಸ್ ಅಗೇನ್ ಹಾರ್ಟ್ ಬ್ರೇಕ್. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಮ್ಯಾಚಲ್ಲಿ ಸೋತು ಹರಿಣಗಳ ಪಡೆ ಟೂರ್ನಿಗೆ ಗುಡ್ ಬೈ ಹೇಳಿದೆ. ಕೊನೇ ಕ್ಷಣದವರೆಗೂ ಸೆಮೀಸ್ ಟಿಕೆಟ್ ಸಿಗುತ್ತೋ ಇಲ್ವೋ ಅನ್ನೋ ಟೆನ್ಷನ್ನಲ್ಲೇ ಇದ್ದ ನ್ಯೂಜಿಲೆಂಡ್ ನಿರಾಯಾಸವಾಗಿ ಗೆದ್ದು ಫೈನಲ್ಗೇರಿದೆ.
ಇದನ್ನೂ ಓದಿ : ಪಾಕ್ ಹೀರೋ ಬಾಬರ್ ಅಜಮ್‌ಗೆ ಪಿಸಿಬಿ ಶಾಕ್ – ಪಾಕಿಸ್ತಾನ ತಂಡದಿಂದಲೇ ಬಾಬರ್‌ಗೆ ಗೇಟ್‌ಪಾಸ್
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ ಕಾಳಗ ದಾಖಲೆಯ ಚೇಸಿಂಗ್ಗೆ ಸಾಕ್ಷಿಯಾಗಿದೆ. ಟೂರ್ನಿಯಲ್ಲಿ ಒಂದೇ ಒಂದು ಮ್ಯಾಚ್ನೂ ಸೋಲದೆ ಸೆಮೀಸ್ಗೆ ಬಂದಿದ್ದ ಸೌತ್ ಆಫ್ರಿಕಾ ಈಗ ಮೊದಲ ಸೋಲಿನಲ್ಲೇ ಟೂರ್ನಿಗೆ ಗುಡ್ ಬೈ ಹೇಳಿದೆ. ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಕಂಪ್ಲೀಟ್ ಸರೆಂಡರ್ ಆಗಿ ಹೀನಾಯವಾಗಿ ಸೋಲೊಪ್ಪಿಕೊಂಡಿದ್ದಾರೆ. ಸದಾ ಚೋಕರ್ಸ್ ಹಣೆಪಡೆಯೊಂದಿಗೆ ಐಸಿಸಿ ಟೂರ್ನಿಗೆ ಕಾಲಿಡೋ ಹರಿಣಪಡೆಗೆ ಈ ಸಲವೂ ಅದೇ ನಿಜವಾಗಿದೆ.
ಹರಿಣಪಡೆಯನ್ನ ಸೋಲಿಸಿ ಫೈನಲ್ ಗೆ ನುಗ್ಗಿದ ಕಿವೀಸ್!
ಮಸ್ಟ್ ವಿನ್ ಮ್ಯಾಚಲ್ಲಿ ಟಾಸ್ ಗೆದ್ದ ಕಿವೀಸ್ ಕೊನೆಗೆ ಮ್ಯಾಚ್ನೂ ಗೆದ್ದಿದೆ. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾಗೆ 2ನೇ ಓವರ್ನಲ್ಲೇ ಬ್ಯಾಕ್ ಟು ಬ್ಯಾಕ್ ವಿಕೆಟ್ ಬಿದ್ದಿದ್ರಿಂದ ಕೊನೇವರೆಗೂ ಚೇತರಿಸಿಕೊಳ್ಳೋಕೆ ಆಗ್ಲೇ ಇಲ್ಲ. ಕ್ಯಾಪ್ಟನ್ ಮಾರ್ಕ್ರಾಮ್ 18 ರನ್‌ಗಳಿಗೆ ಔಟಾದರೆ, ಡಿ ಕಾಕ್ 10 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ರಿಕಲ್ಟನ್ ಅಂತೂ ಫಸ್ಟ್ ಬಾಲಲ್ಲೇ ಔಟ್. ಡೆವಾಲ್ಡ್ ಬ್ರೆವಿಸ್ 34 ರನ್ ಗಳಿಸಿದರೆ, ಮಾರ್ಕೊ ಯಾನ್ಸೆನ್ ಅಜೇಯ 55 ರನ್ ಗಳಿಸಿ ತಂಡವನ್ನು 169 ರನ್ ಮುಟ್ಟಿಸಿದ್ರು. ಈ ಟಾರ್ಗೆಟ್ ಬೆನ್ನಟ್ಟಿದ್ದ ನ್ಯೂಜಿಲೆಂಡ್ ಇದು ಟಾರ್ಗೆಟ್ಟೇ ಅಲ್ಲ ಅನ್ನೋ ಥರ ಚೇಸ್ ಮಾಡಿದ್ರು. ಫಿನ್ ಅಲೆನ್ ಮತ್ತು ಟಿಮ್ ಸೀಫರ್ಟ್ ಮೊದಲ ವಿಕೆಟ್‌ಗೆ 117 ರನ್‌ಗಳ ಪಾರ್ಟ್ನರ್ಶಿಪ್ ನೀಡಿದ್ರು. ಸೀಫರ್ಟ್ 33 ಎಸೆತಗಳಲ್ಲಿ 58 ರನ್ ಗಳಿಸಿದರೆ, ಫಿನ್ ಅಲೆನ್ ಕೇವಲ 33 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ರು. ಟಿ-20 ವಿಶ್ವಕಪ್ನಲ್ಲಿ ಇದು ಫಾಸ್ಟೆಸ್ಟ್ ಫಿಫ್ಟಿ. ಈ ಶತಕದ ಮೂಲಕ ಈ ಬಾರಿ ಟೂರ್ನಿಯ ಐದನೇ ಶತಕವಾಯ್ತು. ಇಂಟ್ರೆಸ್ಟಿಂಗ್ ಅಂದ್ರೆ ಈ ಬಾರಿ ಬಂದಿರೋ ಶತಕಗಳೆಲ್ಲಾ 100 ರನ್ಗಳೇ ಆಗಿವೆ. ಈ ಮೂಲಕ ಇನ್ನೂ 43 ಎಸೆತಗಳು ಬಾಕಿ ಇದ್ದಾಗ್ಲೇ ನ್ಯೂಜಿಲೆಂಡ್ ಗೆದ್ದು ಫೈನಲ್ಗೆ ಡೇಂಜರಸ್ ಆಗಿ ಎಂಟ್ರಿ ಕೊಟ್ಟಿದೆ. ಇನ್ನು ಈ ಪಂದ್ಯದಲ್ಲಿ ಏಡನ್ ಮಾರ್ಕ್ರಂ ಔಟ್ ಆಗಿರೋ ಬಗ್ಗೆ ಕಾಂಟ್ರವರ್ಸಿಯಾಗಿದೆ. ಚೆಂಡು ನೆಲಕ್ಕೆ ತಾಗಿದೆ. ಹೀಗಿದ್ರೂ ಥರ್ಡ್ ಅಂಪೈರ್ ಕೊಟ್ಟಿದ್ದಾರೆ. ಇದು ಔಟ್ ಇರ್ಲಿಲ್ಲ ಅಂತಾ ಕೆಲವರು ಆರೋಪ ಮಾಡಿದ್ದಾರೆ.
ಟ್ರೋಫಿ ಹೊಸ್ತಿಲಿನಲ್ಲೇ ಎಡವುತ್ತಿದೆ ಸೌತ್ ಆಫ್ರಿಕಾ!
ಸೌತ್ ಆಫ್ರಿಕಾ ಒನ್ ಆಫ್ ದಿ ಬೆಸ್ಟ್ ಟೀಂ ಆಗಿದ್ರೂ ಐಸಿಸಿ ಟೂರ್ನಮೆಂಟ್ಗಳಲ್ಲಿ ಸೆಮೀಸ್, ಫೈನಲ್ನಲ್ಲೇ ಪದೆಪದೆ ಮುಗ್ಗರಿಸ್ತಿದೆ. ಐಸಿಸಿ ವಿಶ್ವಕಪ್ಗಳಲ್ಲಿ ಬರೋಬ್ಬರಿ 8 ಸಲ ಸೆಮಿಫೈನಲ್ನಲ್ಲೇ ಹೊರನಡೆದಿದೆ. ಕಳೆದ 3 ವರ್ಷಗಳಲ್ಲಿ 4ಸಲ ಹಾರ್ಟ್ ಬ್ರೇಕ್ ಆಗಿದೆ. 2023ರ ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲೇ ಔಟ್ ಆಗಿದ್ರು. 2024ರಲ್ಲಿ ಭಾರತದ ವಿರುದ್ಧ ಫೈನಲ್ನಲ್ಲಿ ಟಿ-20 ವಿಶ್ವಕಪ್ ಸೋತಿದ್ರು. ಆ ಬಳಿಕ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್ನಲ್ಲಿ ಸೋತು. ಈಗ 2026ರಲ್ಲಿ ಮತ್ತೆ ಟಿ-20 ವಿಶ್ವಕಪ್ನಲ್ಲಿ ಸೆಮೀಸ್ ಸೋಲು. ಒಂದು ಖುಷಿ ವಿಚಾರ ಏನಂದ್ರೆ ಕಳೆದ ವರ್ಷ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಚಾಂಪಿಯನ್ ಆಗಿದ್ರು. ಒಟ್ನಲ್ಲಿ ಈ ಟೂರ್ನಿಯಲ್ಲಿ ರೆಡ್ ಹಾಟ್ ಫಾರ್ಮ್ನಲ್ಲಿದ್ದ ಸೌತ್ ಆಫ್ರಿಕಾ ಫೈನಲ್ ಹೊಸ್ತಿಲಲ್ಲಿ ಎಡವಿದೆ. ಒಂದು ಸೋಲು ಟೂರ್ನಿಯಿಂದಲೇ ಹೊರದಬ್ಬಿದೆ.

ನೋಡಿರಿ

