ಒಂದೇ ಕೊಠಡಿಯಿಂದ 15 ಜನ ಪಾಸ್ ಆಗಿದ್ದು ಹೇಗೆ? – ಕೆಎಎಸ್ ಪರೀಕ್ಷಾ ಫಲಿತಾಂಶದ ಕುರಿತು ಆರೋಪಕ್ಕೆ ಸಿಕ್ತಾ ಉತ್ತರ?

ಒಂದೇ ಕೊಠಡಿಯಿಂದ 15 ಜನ ಪಾಸ್ ಆಗಿದ್ದು ಹೇಗೆ? – ಕೆಎಎಸ್ ಪರೀಕ್ಷಾ ಫಲಿತಾಂಶದ ಕುರಿತು ಆರೋಪಕ್ಕೆ ಸಿಕ್ತಾ ಉತ್ತರ?

ಕೆಎಎಸ್​ ಪರೀಕ್ಷಾ ಫಲಿತಾಂಶದ ಕುರಿತು ಈಗ ಆರೋಪಗಳ ಸುರಿಮಳೆಯೇ ಸುರಿಯುತ್ತಿದೆ. ಈ ಬಗ್ಗೆ ಸರ್ಕಾರ ಕೂಡಾ ಅಲರ್ಟ್ ಆಗಿದೆ. ಇನ್ನುಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯದರ್ಶಿ ಕೂಡಾ ಆರೋಪ ನಡೆದಿಲ್ಲ ಎಂದು ಸರ್ಕಾರಕ್ಕೆ ಮನದಟ್ಟು ಮಾಡುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬಿಸಿ ಗಾಳಿ ಬೀಸುತ್ತಿದೆ ಎಚ್ಚರ – 11 ಗಂಟೆ ನಂತರ ಹೊರಗೆ ಓಡಾಡುವವರಿಗೆ ಕಾದಿದೆ ಅಪಾಯ..!

KAS ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪಗಳು ಕೇಳಿಬಂದಿದೆ. ಆರೋಪ ಬಂದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡುವಂತೆ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದೆ. ಇದಾದ ನಂತಕ ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯದರ್ಶಿ ಜ್ಯೋತಿ 24 ಗಂಟೆಗಳೊಳಗೆ ಸರ್ಕಾರಕ್ಕೆ ವಿವರವಾದ ವರದಿ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇತ್ತೀಚೆಗೆ ಕೆಎಎಸ್​ ಫಲಿತಾಂಶ ಪ್ರಕಟವಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಅನುಮಾನಗಳು  ವ್ಯಕ್ತವಾಗಿದ್ದವು. ವಿಶೇಷವಾಗಿ ಒಂದೇ ಪರೀಕ್ಷಾ ಕೇಂದ್ರದ ಒಂದೇ ಕೊಠಡಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಕೆಲವು ಮಂದಿ ಒಂದೇ ಕೊಠಡಿಯಿಂದ 15 ಜನ ಪಾಸ್ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸ್ಪಷ್ಟನೆ ಕೇಳಿದ ಬಳಿಕ KPSC ತಕ್ಷಣವೇ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದೆ. ವರದಿಯಲ್ಲಿ ಪ್ರಮುಖವಾಗಿ ಮೂರು ವಿಷಯಗಳನ್ನು ಸ್ಪಷ್ಟಪಡಿಸಲಾಗಿದೆ. ಮೊದಲನೆಯದಾಗಿ, ಒಂದೇ ಕೊಠಡಿಯಿಂದ 15 ಜನ ಪಾಸ್ ಆಗಿದ್ದಾರೆ ಎಂಬ ಆರೋಪ ಸತ್ಯವಲ್ಲ ಎಂದು KPSC ಹೇಳಿದೆ. ವರದಿಯ ಪ್ರಕಾರ ಆ ಕೊಠಡಿಯಿಂದ 15 ಜನ ಅಲ್ಲ, 11 ಜನ ಮಾತ್ರ ಉತ್ತೀರ್ಣರಾಗಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಹಲವು ಪ್ರತಿಭಾವಂತ ಅಭ್ಯರ್ಥಿಗಳು ಇದ್ದರೆ ಒಂದೇ ಸ್ಥಳದಿಂದ ಹೆಚ್ಚು ಮಂದಿ ಪಾಸ್ ಆಗುವುದು ಅಸಾಧಾರಣ ವಿಷಯವಲ್ಲ ಎಂದು ಹೇಳಲಾಗಿದೆ. ಎರಡನೆಯದಾಗಿ, ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂಬುದನ್ನು ದೃಢಪಡಿಸಲು CCTV ದೃಶ್ಯಗಳನ್ನು ಪರಿಶೀಲಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅನುಮಾನ ವ್ಯಕ್ತವಾದ ಪರೀಕ್ಷಾ ಕೊಠಡಿಗಳ ದೃಶ್ಯಗಳನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಲಾಗಿದ್ದು, ಪರೀಕ್ಷೆಯ ವೇಳೆ ಯಾವುದೇ ಅಕ್ರಮ ಅಥವಾ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಿಲ್ಲ ಎಂದು ತಿಳಿಸಲಾಗಿದೆ.

Sulekha

Leave a Reply

Your email address will not be published. Required fields are marked *