ಸೆಮಿಫೈನಲ್‌ಗೂ ಮೊದಲು ವಿಘ್ನ ವಿನಾಯಕನಿಗೆ ಮೊರೆ – ಸಿದ್ದಿ ವಿನಾಯಕನಿಗೆ ಪೂಜೆ ಸಲ್ಲಿಸಿದ ಟೀಮ್ ಇಂಡಿಯಾ ಆಟಗಾರರು

ಟೀಮ್ ಇಂಡಿಯಾ ಓಪನರ್ ಅಭಿಷೇಕ್ ಶರ್ಮಾ ಸೆಮಿಫೈನಲ್‌ಗೆ ರೆಡಿಯಾಗುತ್ತಿದ್ದಾರೆ. ಅದಕ್ಕೂ ಮೊದಲು ಅಭಿಷೇಕ್ ಶರ್ಮಾ ತನ್ನ ಸ್ನೇಹಿತರಾದ ಇಶಾನ್ ಕಿಶನ್ ಮತ್ತು ಅಕ್ಷರ್ ಪಟೇಲ್ ಜೊತೆ ಸಿದ್ಧಿವಿನಾಯಕನ ದರ್ಶನ ಮಾಡಿದರು.
ಇದನ್ನೂ ಓದಿ:ಸಂಜು-ಅಭಿ ಜೊತೆಯಾಟವೇ ಪ್ಲಸ್ – ವರುಣ್ ಬದಲು ಕುಲ್ದೀಪ್ ಗೆ ಚಾನ್ಸ್?
ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಈ ನಿರ್ಣಾಯಕ ಪಂದ್ಯಕ್ಕೂ ಮೊದಲೇ ಟೀಂ ಇಂಡಿಯಾದ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಮತ್ತು ಅಕ್ಷರ್ ಪಟೇಲ್ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ. ಪ್ರಮುಖ ಪಂದ್ಯಗಳಿಗೂ ಮೊದಲು ಭಾರತೀಯ ಆಟಗಾರರು ದೇವಾಲಯಗಳಿಗೆ ಭೇಟಿ ನೀಡುವುದು ವಾಡಿಕೆ. ಅದರಂತೆ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಮತ್ತು ಅಕ್ಷರ್ ಪಟೇಲ್ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಸಾಂಪ್ರದಾಯಿಕವಾಗಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.
ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಅಭಿಷೇಕ್ ಶರ್ಮಾ ಅವರು ಸಿದ್ದಿವಿನಾಯಕನ ದರ್ಶನದಿಂದ ರಿಲ್ಯಾಕ್ಸ್ ಆದಂತೆ ಕಂಡು ಬಂದರು. ಇವರ ಜೊತೆಗೆ ಉತ್ತಮ ಫಾರ್ಮ್‌ನಲ್ಲಿರುವ ಇಶಾನ್ ಕಿಶನ್ ಮತ್ತು ಆಲ್‌ರೌಂಡರ್ ಆಗಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಅಕ್ಷರ್ ಪಟೇಲ್ ಕೂಡ ಗಣಪತಿ ದರ್ಶನ ಪಡೆದು, ಆಶೀರ್ವಾದ ಪಡೆದರು.

ನೋಡಿರಿ

