ದೇವರ ಕೋಣೆಯಲ್ಲಿ ಯಾವೆಲ್ಲಾ ವಸ್ತುಗಳನ್ನ ಇಡಬೇಕು? , ಇಡಬಾರದು ಗೊತ್ತಾ?

ದೇವರ ಕೋಣೆಯಲ್ಲಿ ಯಾವೆಲ್ಲಾ  ವಸ್ತುಗಳನ್ನ ಇಡಬೇಕು? ,  ಇಡಬಾರದು ಗೊತ್ತಾ?

ಭಾರತೀಯ ಸಂಸ್ಕೃತಿಯಲ್ಲಿ ದೇವರ ಕೋಣೆ ಮನೆಯ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ.  ದೇವರಕೋಣೆಯನ್ನ ಸ್ವಚ್ಛವಾಗಿ ಇಡಬೇಕು.  ದೇವರ ಕೋಣೆಯಲ್ಲಿ ವಸ್ತುಗಳನ್ನು ಎಲ್ಲಿ ಇಡಬೇಕು? ಯಾವ ನಿಯಮಗಳನ್ನು ಪಾಲಿಸಬೇಕು?  ಅನ್ನೋದ್ದನ್ನ ನೋಡೋಣ.

ದೀಪ

ದೇವರಿಗೆ ಹಚ್ಚುವ ದೀಪವನ್ನು ಯಾವಾಗಲೂ ವಿಗ್ರಹದ ಮುಂಭಾಗದಲ್ಲೇ ಇಡಬೇಕು ಎಂದು ಪರಂಪರೆಯಲ್ಲಿ ಹೇಳಲಾಗಿದೆ. ದೀಪದ ಬೆಳಕು ದೇವರ ಮುಖದ ಮೇಲೆ ಬೀಳುವುದರಿಂದ ಆರಾಧನೆಯ ಸಮಯದಲ್ಲಿ ಆಧ್ಯಾತ್ಮಿಕ ಭಾವನೆ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ಪೂಜಾ ಸಾಮಗ್ರಿ

ಪೂಜಾ ಸಾಮಗ್ರಿಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದು ಸೂಕ್ತವೆಂದು ವಾಸ್ತು ಶಾಸ್ತ್ರ ಸೂಚಿಸುತ್ತದೆ. ಈಶಾನ್ಯ ಮತ್ತು ಪೂರ್ವ ದಿಕ್ಕುಗಳನ್ನು ತೆರೆಯಾಗಿ ಇಡುವುದರಿಂದ ಬೆಳಗಿನ ಸೂರ್ಯನ ಕಿರಣಗಳು ದೇವರ ವಿಗ್ರಹಗಳ ಮೇಲೆ ನೇರವಾಗಿ ಬೀಳುತ್ತವೆ ಎಂದು ನಂಬಲಾಗುತ್ತದೆ.

ಮೃತರ ಫೋಟೋ

ಪೂಜಾ ಕೋಣೆಯಲ್ಲಿ ಮೃತರ ಫೋಟೋ ಇಡುವುದನ್ನು ತಪ್ಪಿಸುವುದು ಒಳಿತು ಎಂದು ಹಿರಿಯರು ಸಲಹೆ ನೀಡುತ್ತಾರೆ. ಪೂಜೆ ವೇಳೆ ಮನಸ್ಸು ದೇವರ ಮೇಲೆ ಕೇಂದ್ರೀಕೃತವಾಗಿರಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ.

ನೈವೇದ್ಯ  

ದೇವರಿಗೆ ಅರ್ಪಿಸುವ ನೈವೇದ್ಯವನ್ನು ವಿಗ್ರಹದ ಮುಂಭಾಗದಲ್ಲೇ ಇಡಬೇಕು. ಇದು ಗೌರವ ಮತ್ತು ಭಕ್ತಿಯ ಸಂಕೇತವಾಗಿದೆ.

ಹಣ

ಪೂಜಾ ಕೋಣೆಯನ್ನು ಹಣ ಅಥವಾ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸುವ ಸ್ಥಳವಾಗಿ ಬಳಸಬಾರದು. ದೇವರ ಕೋಣೆಯ ಪವಿತ್ರತೆಯನ್ನು ಕಾಪಾಡುವುದು ಮುಖ್ಯವೆಂದು ನಂಬಲಾಗಿದೆ.

Kishor KV

Leave a Reply

Your email address will not be published. Required fields are marked *