ಅಡುಗೆ ಮಾಡುವ ವಿಚಾರಕ್ಕೆ ಅತ್ತೆ ಸೊಸೆ ನಡುವೆ ಜಗಳ – ಇಂಜಿನಿಯರ್ ಸೊಸೆ ಸೂ*ಸೈಡ್‌

ಅಡುಗೆ ಮಾಡುವ ವಿಚಾರಕ್ಕೆ ಅತ್ತೆ ಸೊಸೆ ನಡುವೆ ಜಗಳ – ಇಂಜಿನಿಯರ್ ಸೊಸೆ ಸೂ*ಸೈಡ್‌

ಬೆಂಗಳೂರಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ.   ಅಡುಗೆ ಮಾಡುವ ವಿಚಾರಕ್ಕೆ ಅತ್ತೆ ಸೊಸೆ ನಡುವೆ ಜಗಳ ನಡೆದು ಸೊಸೆ ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಮಹಿಳೆಯನ್ನು 35 ವರ್ಷದ ಸುಷ್ಮಾ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಸುಷ್ಮಾ ಅರಿಗೆ 5 ವರ್ಷದ ಹಿಂದೆ ಪುನೀತ್ ಕುಮಾರ್ ಎಂಬುವವರ ಜತೆ ಮದುವೆಯಾಗಿತ್ತು.

ಇದನ್ನೂ ಓದಿ: SA Vs NZ ಸೆಮೀಸ್ ಸಮರ – ಸೋಲಿಲ್ಲದೆ ಫೈನಲ್ ಗೆ ಹರಿಣಪಡೆ?

ದಂಪತಿಗೆ 4 ವರ್ಷದ ಮಗನೂ ಇದ್ದಾನೆ. ಈ ಹಿಂದೆ ಸುಷ್ಮಾ ಅವರು ಡೆಲ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಅತ್ತೆ ಸೊಸೆ ಮಧ್ಯೆ ಆಗಾಗ ಸಣ್ಣ ಪುಟ್ಟ ವಿಚಾರಗಳಿಗೆ ಸಂಬಂಧಿಸಿದಂತೆ ಗಲಾಟೆ ನಡೆಯುತ್ತಿತ್ತು. ಅಡುಗೆ ವಿಚಾರವಾಗಿ ಸೊಸೆ ಸುಷ್ಮಾ ಹಾಗು ಅತ್ತೆ ಕಲ್ಪನಾ ಮಧ್ಯೆ ಕಿತ್ತಾಟಗಳಾಗುತ್ತಿದ್ದವು. ಮಂಗಳವಾರ ಸಂಜೆ ಇದೇ ವಿಚಾರವಾಗಿ ಆರಂಭವಾದ ಜಗಳ ವಿಕೋಪಕ್ಕೆ ಹೋಗಿದ್ದು, ಸುಷ್ಮಾ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ. ಸುಷ್ಮಾ ಅವರ ಕುಟುಂಬದವರ ಪ್ರಕಾರ ಅತ್ತೆ ಕಲ್ಪನಾ ಸೊಸೆ ಸುಷ್ಮಾ ಅವರಿಗೆ ಅಡುಗೆ ಮಾಡುವುದಕ್ಕೆ ಬಿಡುತ್ತಿರಲಿಲ್ಲ, ಪ್ರತಿದಿನವೂ ಏನಾದರೊಂದು ಕಾರಣ ಹೇಳಿ ಆಕೆಗೆ ಕಿರುಕುಳ ನೀಡುತ್ತಿದ್ದರು. ಇದೇ ಕಾರಣಕ್ಕೆ ಸುಷ್ಮಾ ಅವರು ನೇಣು ಹಾಕಿಕೊಳ್ಳುವ ಮೂಲಕ ಸಾವಿಗೆ ಶರಣಾಗಿದ್ದಾರೆ ಎಂದು ಸುಷ್ಮಾ ಪೋಷಕರು ಆರೋಪಿಸಿದ್ದಾರೆ.

ಘಟನೆಯ ಬಳಿಕ ಸುಷ್ಮಾ ಅವರ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಸುಷ್ಮಾ ಪತಿಯ ವಿರುದ್ಧ ವರದಕ್ಷಿಣೆ ಆರೋಪ ಮಾಡಿದ್ದಾರೆ. ಸುಷ್ಮಾ ಕುಟುಂಬದವರು ನೀಡಿದ ದೂರಿನ ಬಳಿಕ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಳಿಕ ಅತ್ತೆ ಕಲ್ಪನಾ ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ.

Kishor KV

Leave a Reply

Your email address will not be published. Required fields are marked *