SA Vs NZ ಸೆಮೀಸ್ ಸಮರ – ಸೋಲಿಲ್ಲದೆ ಫೈನಲ್ ಗೆ ಹರಿಣಪಡೆ?
ಯಾರು ಗೆದ್ರೆ ಭಾರತಕ್ಕೆ ಬೆಸ್ಟ್?

ಹತ್ತನೇ ಆವೃತ್ತಿಯ ಟಿ-20 ವಿಶ್ವಕಪ್ನಲ್ಲಿ ಇನ್ನೇನು ಕ್ಲೈಮ್ಯಾಕ್ಸ್ ಸ್ಟೇಜ್ಗೆ ಬಂದಿದ್ದೇವೆ. ಟೂರ್ನಿಯಲ್ಲಿ ಇನ್ನು ಮೂರೇ ಮೂರು ಮ್ಯಾಚ್ಗಳಷ್ಟೇ ಬಾಕಿ. ಇವತ್ತು ಸೌತ್ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ಮೊದಲ ಸೆಮಿಫೈನಲ್ ಫೈಟ್ ನಡೆಯಲಿದೆ. ಈ ಪಂದ್ಯ ಗೆದ್ದವ್ರು ಸೀದಾ ಫೈನಲ್ ಟಿಕೆಟ್ನೊಂದಿಗೆ ಚಾಂಪಿಯನ್ ರೇಸ್ಗೆ ಸೆಲೆಕ್ಟ್ ಆಗ್ತಾರೆ. ಮೊದಲ ಸೆಮಿಫೈನಲ್ ಮ್ಯಾಚಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿ ಆಗ್ತಿವೆ. ಌಂಡ್ ಈ ಎರಡು ತಂಡುಗಳು ಇದುವರೆಗೆ ಈ ಫಾರ್ಮ್ಯಾಟ್ನಲ್ಲಿ ಟ್ರೋಫಿ ಗೆದ್ದಿಲ್ಲ. ಸೋ ಚೊಚ್ಚಲ ಕಪ್ ಆಸೆಯೊಂದಿಗೆ ಕಣಕ್ಕಿಳಿತಿದ್ದು ಗೆದ್ದವ್ರು ಪ್ರಶಸ್ತಿ ಸುತ್ತಿಗೆ ಸೆಲೆಕ್ಟ್ ಆಗ್ತಾರೆ. ಸೋತವ್ರಿಗೆ ಒನ್ಸ್ ಅಗೇನ್ ಹಾರ್ಟ್ ಬ್ರೇಕ್. ಹೈವೋಲ್ಟೇಜ್ ಮ್ಯಾಚ್ಗಾಗಿ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನ ಕೂಡ ಸಿದ್ಧವಾಗಿದೆ. ಇನ್ನು ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಅಜೇಯವಾಗಿ ಸೆಮಿಫೈನಲ್ ತಲುಪಿದೆ. ಕಳೆದ ಆವೃತ್ತಿಯಲ್ಲೂ ಅಜೇಯವಾಗಿ ಫೈನಲ್ಗೆ ಬಂದಿದ್ರು. ಇನ್ನು ನ್ಯೂಜಿಲೆಂಡ್ ತಂಡ ಈ ಬಾರಿಯ ಟೂರ್ನಿಯಲ್ಲಿ ಸಾಕಷ್ಟು ಏರಿಳಿತಗಳನ್ನ ಕಂಡಿದೆ.
ಇದನ್ನೂ ಓದಿ : ಇಸ್ರೇಲ್-ಇರಾನ್ ಯುದ್ಧ ಎಫೆಕ್ಟ್ – ಮಾರ್ಚ್ 19ಕ್ಕೆ ರಿಲೀಸ್ ಆಗಲ್ಲ ಟಾಕ್ಸಿಕ್!, ಮತ್ಯಾವಾಗ ರಿಲೀಸ್?
ನ್ಯೂಜಿಲೆಂಡ್ ಗೆ ಶಾಕ್ ಕೊಡುತ್ತಾ ಹರಿಣಪಡೆ?
ಇನ್ನು ಈ ಹಿಂದಿನ ಸ್ಟಾಟ್ಸ್ ಮತ್ತು ಈ ಬಾರಿ ಟೂರ್ನಿಯ ಪರ್ಫಾಮೆನ್ಸ್ ಕಂಪೇರ್ ಮಾಡಿದ್ರೆ ನ್ಯೂಜಿಲೆಂಡ್ಗಿಂತ ಸೌತ್ ಆಫ್ರಿಕಾ ಬೆಟರ್ ಪರ್ಫಾಮೆನ್ಸ್ ನೀಡಿದೆ. ಸತತ 7 ಮ್ಯಾಚ್ ಗೆದ್ದು ಸೌತ್ ಆಫ್ರಿಕಾ ಸ್ಟ್ರಾಂಗ್ ಆಗಿ ಕಾಣ್ತಿದ್ರೆ ಗ್ರೂಪ್ ಸ್ಟೇಜಲ್ಲಿ 3 ಹಾಗೇ ಸೂಪರ್ 8ನಲ್ಲಿ ಕಿವೀಸ್ ಬಳಗ ಒಂದು ಮ್ಯಾಚ್ ಗೆದ್ದಿದೆ. ಹಾಗೇ ಸೌತ್ ಆಫ್ರಿಕಾ ಪರ 7 ಪಂದ್ಯಗಳಿಂದ 53.60 ಸರಾಸರಿ ಮತ್ತು 175.16 ಸ್ಟ್ರೈಕ್ ರೇಟ್‌ನೊಂದಿಗೆ ಐಡೆನ್ ಮಾರ್ಕ್ರಂ 268 ರನ್ ಗಳಿಸಿದ್ದು ತಂಡದ ಪರ ಹೈಯೆಸ್ಟ್ ಸ್ಕೋರರ್ ಆಗಿದ್ದಾರೆ. ರಯಾನ್ ರಿಕಲ್ಟನ್ ಎರಡನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದು, 38 ಸರಾಸರಿಯೊಂದಿಗೆ 171.42 ಸ್ಟ್ರೈಕ್ ರೇಟ್‌ನೊಂದಿಗೆ 228 ರನ್ ಗಳಿಸಿದ್ದಾರೆ. ಬೌಲಿಂಗ್ ಅಂತಾ ಬಂದಾಗ ಲುಂಗಿ ಎನ್‌ಗಿಡಿ ಆರು ಇನ್ನಿಂಗ್ಸ್‌ಗಳಿಂದ 12 ವಿಕೆಟ್‌ಗಳನ್ನು ಪಡೆದಿದ್ದಾರೆ. ನ್ಯೂಜಿಲೆಂಡ್ ಪರ ಟಿಮ್ ಸೀಫರ್ಟ್ 43.20 ಸರಾಸರಿ ಮತ್ತು 157.66 ಸ್ಟ್ರೈಕ್ ರೇಟ್‌ನೊಂದಿಗೆ 216 ರನ್ ಗಳಿಸಿ ಹೈಯೆಸ್ಟ್ ಸ್ಕೋರರ್ ಆಗಿದ್ದಾರೆ. ರಚಿನ್ ರವೀಂದ್ರ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಎರಡೂ ತಂಡಗಳು ಪರಸ್ಪರ 19 ಟಿ-20ಐ ಪಂದ್ಯಗಳನ್ನು ಆಡಿವೆ. ದಕ್ಷಿಣ ಆಫ್ರಿಕಾ 12 ಪಂದ್ಯಗಳಲ್ಲಿ ಜಯಗಳಿಸಿ ಪ್ರಾಬಲ್ಯ ಸಾಧಿಸಿದ್ದರೆ, ನ್ಯೂಜಿಲೆಂಡ್ 9 ಸಲ ಗೆದ್ದಿದೆ. ಟಿ-20 ವಿಶ್ವಕಪ್ ಅಂತಾ ಬಂದಾಗ ಪರಸ್ಪರ ನಾಲ್ಕು ಪಂದ್ಯಗಳನ್ನು ಆಡಿದ್ದು, ದಕ್ಷಿಣ ಆಫ್ರಿಕಾ ಎಲ್ಲಾ ಪಂದ್ಯಗಳಲ್ಲಿಯೂ ಜಯಗಳಿಸಿದೆ. ಸೋ ಇಲ್ಲಿ ಸೌತ್ ಆಫ್ರಿಕಾ ಕಂಪ್ಲೀಟ್ ಆಗಿ ಡಾಮಿನೇಟ್ ಮಾಡಿರೋದು ಗೊತ್ತಾಗ್ತಿದೆ. ಆಲ್ರೆಡಿ ಇದೇ ಟೂರ್ನಿಯಲ್ಲಿ ಸೋಲಿನ ರುಚಿಯನ್ನೂ ತೋರಿಸಿದ್ದಾರೆ.
ಗ್ರೂಪ್ ಸ್ಟೇಜ್ ನಲ್ಲಿ ನ್ಯೂಜಿಲೆಂಡ್ ಸೋಲಿಸಿರೋ ದಕ್ಷಿಣ ಆಫ್ರಿಕಾ
ಇನ್ನು ಇದೇ ಟೂರ್ನಿಯಲ್ಲಿ ಈಗಾಗ್ಲೇ ಸೌತ್ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿ ಆಗಿದ್ರು. ಇಬ್ಬರೂ ಕೂಡ ಗ್ರೂಪ್ ಸ್ಟೇಜಲ್ಲಿ ಗ್ರೂಪ್ ಡಿನಲ್ಲಿದ್ರು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಆಫ್ರಿಕಾ ಇನ್ನೂ 17 ಎಸೆತ ಬಾಕಿಯಿರುವಂತೆ 17.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಗೆದ್ದು ಬೀಗಿತ್ತು.
ಇನ್ನು ಗೂಗಲ್ ಜೆಮಿನಿ ಕೂಡ ಆಲ್ರೆಡಿ 60 ಪರ್ಸೆಂಟ್ ಸೌತ್ ಆಫ್ರಿಕಾಗೆ ಗೆಲುವಿನ ಚಾನ್ಸಸ್ ಇದೆ ಌಂಡ್ 40 ಪರ್ಸೆಂಟ್ ನ್ಯೂಜಿಲೆಂಡ್ಗೆ ಇದೆ ಅಂತಾ ಪ್ರೆಡಿಕ್ಟ್ ಮಾಡಿದ್ದಾರೆ. ಇನ್ನು ನಾಳೆ ಇಂಗ್ಲೆಂಡ್ ವಿರುದ್ಧ ಭಾರತ ಎರಡನೇ ಸೆಮೀಸ್ನಲ್ಲಿ ಮುಖಾಮುಖಿಯಾಗ್ತಿದೆ. ಈ ಮ್ಯಾಚಲ್ಲಿ ಭಾರತ ಗೆಲ್ಲೋ ಚಾನ್ಸಸ್ ಇದೆ. ಹೀಗಾಗಿ ಮೊದಲ ಸೆಮಿಸ್ನಲ್ಲಿ ನ್ಯೂಜಿಲೆಂಡ್ ಗೆದ್ರೆ ಭಾರತಕ್ಕೆ ಫೈನಲ್ನಲ್ಲಿ ಸ್ವಲ್ಪ ಅಡ್ವಾಂಟೇಜ್ ಆಗ್ಬೋದು. ಇಲ್ಲದೇ ಇದ್ರೆ ನೆಕ್ ಟು ನೆಕ್ ಫೈಟ್ ಇರುತ್ತೆ. ಯಾಕಂದ್ರೆ 2024ರ ವಿಶ್ವಕಪ್ ಫೈನಲ್ನಲ್ಲೇ ಭಾರತ-ಸೌತ್ ಆಫ್ರಿಕಾ ನಡುವೆ ಕ್ಲೋಸ್ ಗೇಮ್ ಆಗಿ ಭಾರತ ಗೆದ್ದಿತ್ತು. ಌಂಡ್ ಈ ಸಲ ಸೂಪರ್ 8ನಲ್ಲಿ ಆಲ್ರೆಡಿ ಸೌತ್ ಆಫ್ರಿಕಾ ಒಮ್ಮೆ ಭಾರತವನ್ನ ಸೋಲಿಸಿದೆ. ಸೋ ಭಾರತ ಮತ್ತು ಸೌತ್ ಆಫ್ರಿಕಾ ಮತ್ತೊಮ್ಮೆ ಫೈನಲ್ ನಲ್ಲಿ ಮುಖಾಮುಖಿ ಆದ್ರೆ ಹೈವೋಲ್ಟೇಜ್ ಮ್ಯಾಚ್ ಆಗೋದ್ರಲ್ಲಿ ಡೌಟೇ ಇಲ್ಲ.

ನೋಡಿರಿ

