ಕರ್ಣ ಸೀರಿಯಲ್‌ನಿಂದ ಟಿ ಎಸ್ ನಾಗಾಭರಣ ಹೊರಬಂದಿದ್ಯಾಕೆ? – ಸ್ಯಾಂಡಲ್‌ವುಡ್ ನಟ ಅಭಿಜಿತ್ ವಿಲನ್ ಆಗಿ ಎಂಟ್ರಿ..!

ಕರ್ಣ ಸೀರಿಯಲ್‌ನಿಂದ ಟಿ ಎಸ್ ನಾಗಾಭರಣ ಹೊರಬಂದಿದ್ಯಾಕೆ? – ಸ್ಯಾಂಡಲ್‌ವುಡ್ ನಟ ಅಭಿಜಿತ್ ವಿಲನ್ ಆಗಿ ಎಂಟ್ರಿ..!

ಕನ್ನಡದ ಫೇಮಸ್ ಧಾರಾವಾಹಿಯಾಗಿ ಮೂಡಿ ಬರುತ್ತಿರುವ ಕರ್ಣ ಸೀರಿಯಲ್‌ನಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಹಿರಿಯ ನಟ ಟಿ.ಎಸ್.ನಾಗಾಭರಣ ಸೀರಿಯಲ್‌ನಿಂದ ಹೊರನಡೆದಿದ್ದಾರೆ.

ಇದನ್ನೂ ಓದಿ:ಭಾಗ್ಯಳಿಗೆ ಆದಿ ಮೇಲೆ ಅರಳಿದ ಪ್ರೀತಿ – ತಾಂಡವ್ ಕೈ ತಪ್ಪಿದ ಪ್ರೇಮಭಾಗ್ಯ

ಕರ್ಣ ಸೀರಿಯಲ್‌ನಲ್ಲಿ ನಾಯಕನ ಪಾತ್ರದಷ್ಟೇ ಮೈಲೇಜ್ ಪಡೆದುಕೊಂಡಿರುವುದು ವಿಲನ್ ರೋಲ್. ಇಲ್ಲಿ ಕರ್ಣನ ವಿರುದ್ಧವಾಗಿ ವಿಲನ್ ಆಗಿ ಕಾಣಿಸಿಕೊಂಡಿರುವ ಪಾತ್ರವೇ ರಮೇಶ್. ಈ ಪಾತ್ರದಲ್ಲಿ ಹಿರಿಯ ನಟ ಟಿ.ಎಸ್ ನಾಗಾಭರಣ ನಟಿಸಿದ್ದರು. ನಾಗಾಭರಣ ಅವರ ಮ್ಯಾನರಿಸಂ, ಡೈಲಾಗ್, ವಿಶೇಷ ನಟನೆ ವೀಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ನಾಯಕನಿಗೆ ಸಂಕಷ್ಟಗಳನ್ನು ತಂದೊಡ್ಡುವ ವಿಲನ್ ಆಗಿ ನಾಗಾಭರಣ ಅವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಆದರೆ, ಇದೀಗ ಸೀರಿಯಲ್ ನಲ್ಲಿ ದಿಢೀರ್ ಬದಲಾವಣೆಯಾಗಿದೆ. ಟಿ.ಎಸ್.ನಾಗಾಭರಣ ರಮೇಶ್ ಪಾತ್ರದಿಂದ ಹೊರನಡೆದಿದ್ದಾರೆ. ಇವರ ಸ್ಥಾನಕ್ಕೆ ಮತ್ತೋರ್ವ ಕನ್ನಡದ ಹಿರಿಯ ನಟನನ್ನು ಕರೆದುಕೊಂಡು ಬರಲಾಗಿದೆ. ಇನ್ಮುಂದೆ ಕರ್ಣ ಸೀರಿಯಲ್‌ನಲ್ಲಿ ರಮೇಶ್‌ ಪಾತ್ರದಲ್ಲಿ ಚಂದನವನದ ನಟ ಅಭಿಜಿತ್ ಬಣ್ಣಹಚ್ಚಲಿದ್ದಾರೆ.

ಕರ್ಣ ಮತ್ತು ನಿಧಿ ಫೋಟೋಗೆ ಪೂಜೆ ಮಾಡಿ ಪಿಂಡ ಬಿಡುತ್ತಿರುವ ದೃಶ್ಯವನ್ನು ಸಂಚಿಕೆಯಲ್ಲಿ ತೋರಿಸಲಾಗಿದೆ. ಕರ್ಣನ ವಿರುದ್ಧ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದ್ದರೂ ಕಳೆದ ಎರಡು ಸಂಚಿಕೆಗಳಿಂದ ರಮೇಶ್ ಪಾತ್ರ ತೋರಿಸಿರಲಿಲ್ಲ. ಇದು ವೀಕ್ಷಕರ ಅನುಮಾನಕ್ಕೆ ಕಾರಣವಾಗಿತ್ತು.ಸಂಚಿಕೆಯಲ್ಲಿ ತೋರಿಸಿರುವ ಪ್ರಕಾರ, ರಮೇಶ್‌ನಾಗಿ ನಟ ಅಭಿಜಿತ್ ಬಂದಿದ್ದಾರೆ.

Sulekha

Leave a Reply

Your email address will not be published. Required fields are marked *