BPL ಕಾರ್ಡ್ ಫಲಾನುಭವಿಗಳಿಗೆ ಶಾಕ್ ಕೊಟ್ಟ ಸರ್ಕಾರ – 20 ಲಕ್ಷ ಕಾರ್ಡ್‌ಗಳು ರದ್ದು!

ಆಹಾರ ಇಲಾಖೆಯಿಂದ BPL ಕಾರ್ಡ್ಗಳ ಪರಿಷ್ಕರಣೆ ಕಾರ್ಯಾಚರಣೆ ನಡೆಯುತ್ತಿದೆ. ಯಾಕೆಂದರೆ, ರಾಜ್ಯ ಸರ್ಕಾರ ಇತ್ತೀಚೆಗೆ ಬಿಪಿಎಲ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಒಂದಷ್ಟು ಕಠಿಣ ನಿಯಮಗಳನ್ನ ಬಿಗಿ ಮಾಡಿದೆ. ಅರ್ಹ ಕುಟುಂಬಗಳು ಮಾತ್ರ ರೇಷನ್ ಮತ್ತು ಕಲ್ಯಾಣ ಸೌಲಭ್ಯ ಪಡೆಯಬೇಕು ಎನ್ನುವ ಉದ್ದೇಶದಿಂದ ಸರ್ಕಾರವು ಬಿಪಿಎಲ್ ಕಾರ್ಡ್ ಪರಿಷ್ಕರಣೆ ಕಾರ್ಯಾಚರಣೆ ನಡೆದಿದೆ. ಆದರೆ, ಈ ಕಾರ್ಯಾಚರಣೆಯ ಪರಿಣಾಮ ನಿಜವಾಗಲೂ ಶಾಕಿಂಗ್ ಆಗಿದೆ.
ಇದನ್ನೂ ಓದಿ:ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್! – ಇನ್ಮೇಲೆ ಪರ್ಪಲ್, ಗ್ರೀನ್ ಲೈನ್‌ನಲ್ಲಿ ಪ್ರಯಾಣ ಮತ್ತಷ್ಟು ಸುಲಭ!
ಆಹಾರ ಇಲಾಖೆಯಿಂದ BPL ಕಾರ್ಡ್ಗಳ ಭರ್ಜರಿ ಪರಿಷ್ಕರಣೆ ಕಾರ್ಯಾಚರಣೆ ನಡೆದಿದೆ. ಕೇಂದ್ರ ಸರ್ಕಾರ 13 ಲಕ್ಷ ಕಾರ್ಡ್ ಪರಿಷ್ಕರಣೆ ಪಟ್ಟಿ ಮಾಡಿತ್ತು. ಅದರಲ್ಲಿ ರಾಜ್ಯ ಸರ್ಕಾರ 8 ಲಕ್ಷ ಕಾರ್ಡ್ ರದ್ದು ಮಾಡಲು ಪ್ರತ್ಯೇಕ ಪಟ್ಟಿ ಮಾಡಿತ್ತು. ಇಲ್ಲಿಯವರೆಗೆ ಬರೋಬ್ಬರಿ 20 ಲಕ್ಷ ಬಿಪಿಎಲ್ ಕಾರ್ಡ್ ರದ್ದಾಗಿದೆ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕಳೆದ ಎಂಟು ತಿಂಗಳಿನಲ್ಲಿ ಬರೋಬ್ಬರಿ 20 ಲಕ್ಷ ಕಾರ್ಡ್ಗಳನ್ನ ಆರೋಗ್ಯ ಇಲಾಖೆ ರದ್ದು ಮಾಡಿದ್ದು, ಜೊತೆ BPL ನಿಂದ APLಗೆ 14.5 ಲಕ್ಷ ಕಾರ್ಡ್ಗಳನ್ನ ವರ್ಗಾವಣೆ ಮಾಡಿದೆ. 34,617 ಬಿಪಿಎಲ್ ಕಾರ್ಡ್ ರದ್ದು ಇದರಲ್ಲಿ 9,826 BPL ಕಾರ್ಡ್ ಅಮಾನತುಗೊಂಡಿದ್ರೆ, 34,617 ಬಿಪಿಎಲ್ ಕಾರ್ಡ್ ರದ್ದಾಗಿದೆ. ಇನ್ನುಳಿದ ನಾಲ್ಕು ಲಕ್ಷ ಕಾರ್ಡ್‌ಗಳು ಮರು ಪರಿಶೀಲನೆಯಲ್ಲಿ ರದ್ದುಗೊಂಡಿದೆ. ಮರು ಪರಿಶೀಲನೆಯಲ್ಲಿಯೂ 4 ಲಕ್ಷ ಕಾರ್ಡ್ಗಳನ್ನ BPL ನಿಂದ APL ಕಾರ್ಡ್ ಆಗಿ ವರ್ಗಾವಣೆ ಮಾಡಲಾಗಿದೆ.
ಬಿಪಿಎಲ್ ಕಾರ್ಡ್ ಪರಿಶೀಲನೆಯಲ್ಲಿ ಬಳ್ಳಾರಿ ಜಿಲ್ಲೆ ನಂಬರ್ 1 ಆಗಿದೆ. 1 ಲಕ್ಷ 91 ಸಾವಿರ BPL ಕಾರ್ಡ್ ರದ್ದು ಹಾಗೂ APLಗೆ ಶಿಫ್ಟ್ ಆಗಿದೆ. ವಿಜಯಪುರ ಜಿಲ್ಲೆ – 95,037 ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಎಪಿಎಲ್ಗೆ ಶಿಫ್ಟ್ ಮಾಡಲಾಗಿದೆ. ಕೊಡಗು ಜಿಲ್ಲೆ – 94,423 ಹಾಗೂ ಬೆಂಗಳೂರಿನಲ್ಲಿ ಎರಡು ಲಕ್ಷ BPL ಕಾರ್ಡ್ ರದ್ದುಗೊಳಿಸಲಾಗಿದೆ.

ನೋಡಿರಿ

