ಜೀವನಾಂಶ ಕೇಳಿದ ಹೆಂಡತಿಗೆ ಸುಪಾರಿ – ಕೊ*ಲೆ ಮಾಡಿ ಆ್ಯ*ಕ್ಸಿಡೆಂಟ್ ಎಂದು ನಂಬಿಸಿದವರು ಲಾಕ್

ಜೀವನಾಂಶ ಕೇಳಿದ ಹೆಂಡತಿಗೆ ಸುಪಾರಿ – ಕೊ*ಲೆ ಮಾಡಿ ಆ್ಯ*ಕ್ಸಿಡೆಂಟ್ ಎಂದು ನಂಬಿಸಿದವರು ಲಾಕ್

ಹೆಂಡತಿಯ ಕೊಲೆಗೆ ಸುಪಾರಿ ನೀಡಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ ಎಂದು ನಂಬಿಸಲು ಹೋದ ಪತಿ ಸೇರಿ ನಾಲ್ವರು ಲಾಕ್ ಆಗಿದ್ದಾರೆ.  ಧಾರವಾಡ ತಾಲೂಕಿನ ಸೋಮಾಪೂರ ಗ್ರಾಮದ ಮಹಿಳೆ ಲಲಿತಾ (43) ಎಂಬವರ ಕೊಲೆಗೆ ಅದೇ ತಾಲೂಕಿನ ನರೇಂದ್ರ ಗ್ರಾಮದ ಆಕೆಯ ಪತಿ ಉದಯ ಹತ್ತರಗಿ ಸುಪಾರಿ ನೀಡಿದ್ದರು. ಉದಯ ಸುಪಾರಿ ನೀಡಿದ್ದ ಆತನ ಗೆಳೆಯ ನಾಗಪ್ಪ ಪಡೇಕಲ್‌, ಅಭಿಷೇಕ್ ವರಗಣ್ಣವರ್, ನಾಗರಾಜ ಉಪ್ಪಿನ್ ಮೂವರು ಸೇರಿಕೊಂಡು ಮಹಿಳೆಯ ಮೇಲೆ ಥಾರ್ ಕಾರು ಹಾಯಿಸಿ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಬಸ್ ಡ್ಯಾಶ್​ ಬೋರ್ಡ್​ನಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಬಳಿಕ ತನಿಖೆ ಆರಂಭಿಸಿ ನಾಲ್ವರನ್ನು ಹೆಡೆಮುರಿ ಕಟ್ಟಿದ್ದಾರೆ. ಫೆ.26ರಂದು ಸವದತ್ತಿ ರಸ್ತೆಯ ದುರ್ಗಾದೇವಿ ದೇವಸ್ಥಾನದ ಬಳಿ ಅಪಘಾತ ನಡೆದಿತ್ತು. ಅದರಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು. ಅಂದು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬಳಿಕ ಡಿಕ್ಕಿ ಹೊಡೆದ ವಾಹನದ ಹಿಂದಿದ್ದ ಬಸ್ ಡ್ಯಾಶ್ ಬೋರ್ಡ್‌ನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾ ಪರಿಶೀಲಿಸಿದ್ದಾರೆ. ಆಗ ಪತಿಯೇ ಪತ್ನಿಯ ಹತ್ಯೆಗೆ ಸುಪಾರಿ ನೀಡಿರುವ ಮಾಹಿತಿ ಬಹಿರಂಗಗೊಂಡಿದೆ.

ಇದನ್ನೂ ಓದಿ: ಸಂಜು ಸಾಮರ್ಥ್ಯಕ್ಕೆ ಸಾಕ್ಷಿ 97 ರನ್- ಕೋಚ್ ಗೌತಮ್ ಗಂಭೀರ್ ಯೂಟರ್ನ್

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್​ಪಿ ಗುಂಜನ್​ ಆರ್ಯ, ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದ ಮಹಿಳೆ ಲಲಿತಾ ಅವರನ್ನು ನರೇಂದ್ರ ಗ್ರಾಮದ ಉದಯ ಹತ್ತರಗಿ 2000ರಲ್ಲಿ ಮದುವೆಯಾಗಿದ್ದರು. ಹತ್ತು ವರ್ಷಗಳಿಂದ ಪತಿ- ಪತ್ನಿ ಸಂಬಂಧ ಹದಗೆಟ್ಟಿತ್ತು. ಇದರಿಂದ ಜೀವನಾಂಶ ನೀಡಬೇಕು ಎಂದು ಲಲಿತಾ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್​ನಲ್ಲಿ ವಿಚಾರಣೆ ಸಹ ನಡೆದಿತ್ತು. ಇದೀಗ ವಿಚಾರಣೆ ಕೊನೆಯ ಹಂತಕ್ಕೆ ಬಂದಿದೆ. ಜೀವನಾಂಶಕ್ಕೆ ಲಲಿತಾ ಎರಡು ಎಕರೆ ಜಮೀನು ಕೇಳಿದ್ದರು. ಜಮೀನು ಕೊಡಲು ಉದಯ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪತಿ ಉದಯ ಕೊಲೆಗೆ ಸುಪಾರಿ ನೀಡಿದ್ದಾನೆ ಎಂದು ತಿಳಿಸಿದರು.

Kishor KV

Leave a Reply

Your email address will not be published. Required fields are marked *