ರಂಗು ರಂಗಿನ ಬಣ್ಣದೋಕುಳಿ ಸಂಭ್ರಮ – ಹೋಳಿ ಹಬ್ಬದಂದು ಬಿಳಿಯ ಬಟ್ಟೆಯನ್ನೇ ಧರಿಸಲು ಕಾರಣ ಗೊತ್ತಾ?

ಎಲ್ಲೆಲ್ಲೂ ರಂಗು ರಂಗಿನ ಹೋಳಿ ಸಂಭ್ರಮ. ಬಗೆ ಬಗೆಯ ಬಣ್ಣಗಳನ್ನು ಎರಚುತ್ತಾ ಎಲ್ಲರೂ ರಂಗಿನಾಟದಲ್ಲಿ ಮಿಂದೇಳುತ್ತಿದ್ದಾರೆ. ಈ ಬಾರಿ ಹೋಳಿ ಹಬ್ಬದಂದೇ ಚಂದ್ರಗ್ರಹಣ ಬಂದಿದ್ರೂ ಕೂಡ ಯಾವುದೇ ರೀತಿಯ ಅಡ್ಡಿ ಪಡಿಸಿಲ್ಲ. ಇನ್ನು ಈ ರಂಗಿನಾಟದಲ್ಲಿ ಬಹುತೇಕ ಮಂದಿ ಬಿಳಿ ಬಟ್ಟೆಯನ್ನೇ ತೊಟ್ಟು ಹೋಳಿ ಆಡುತ್ತಾರೆ. ಬಣ್ಣದಾಟ ಆಡುವಾಗ ಈ ಬಿಳಿ ಬಟ್ಟೆಯನ್ನೇ ಯಾಕೆ ಧರಿಸುತ್ತಾರೆ ಅನ್ನೋದನ್ನ ನೀವು ತಿಳಿಯಲೇಬೇಕು.
ಇದನ್ನೂ ಓದಿ : ಸತತ 3ನೇ ಬಾರಿ IND Vs ENG – ಸೆಮೀಸ್ ಗೆದ್ದವ್ರೇ ಚಾಂಪಿಯನ್ಸ್?
ಭಾರತದಲ್ಲಿ ಅತ್ಯಂತ ಸಂಭ್ರಮ ಮತ್ತು ಕಲರ್ ಫುಲ್ ಆಗಿ ಆಚರಿಸೋ ಹಬ್ಬ ಹೋಳಿ ಹಬ್ಬ. ಬಣ್ಣಗಳ ಹಬ್ಬ ಎಂದೂ ಕರೆಯುತ್ತಾರೆ. ದೇಶಾದ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಸಂಭ್ರಮದ ಹಬ್ಬದಲ್ಲಿ ಸಾಮಾನ್ಯವಾಗಿ ಎಲ್ಲರೂ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ. ಹೋಳಿ ಹಬ್ಬದ ವಿಶೇಷವೆಂದರೆ ಕೆಟ್ಟದರ ವಿರುದ್ಧ ವಿಜಯದ ಸಂಕೇತವಾಗಿ ಆಚರಿಸಲಾಗುವ ಈ ಹಬ್ಬದಲ್ಲಿ ಜನರು ತಮ್ಮ ದುಃಖ ನೋವುಗಳನ್ನು ಮರೆತು ಎಲ್ಲರೂ ಒಗ್ಗೂಡಿ ಬಣ್ಣಗಳಿಂದ ಓಕುಳಿಯಾಡಿ ನ್ನು ಸಂಭ್ರಮಿಸುತ್ತಾರೆ. ಈ ಓಕುಳಿಯಾಟದ ಸಂದರ್ಭದಲ್ಲಿ ಹೆಚ್ಚಿನ ಜನರು ಬಿಳಿ ಬಣ್ಣದ ಬಟ್ಟೆಗಳನ್ನೇ ಧರಿಸುತ್ತಾರೆ. ಬಿಳಿ ಬಟ್ಟೆಗಳ ಮೇಲೆ ಯಾವುದೇ ಬಣ್ಣ ಬಿದ್ದರು ಕೂಡ ತುಂಬಾ ಸುಂದರವಾಗಿ ಕಾಣುತ್ತದೆ. ಅದು ಬಿಳಿಯ ಬಣ್ಣದ ಜೊತೆಗೆ ಬಹುಬೇಗ ಹೊಂದಿಕೊಳ್ಳುತ್ತದೆ. ಇದು ಎಲ್ಲಾ ಬಣ್ಣಗಳಲ್ಲಿಯೂ ಆಗುವುದಿಲ್ಲ. ಇದರಿಂದಾಗಿ ನಿಮ್ಮ ಬಟ್ಟೆಯ ಜೊತೆಗೆ ನೀವು ಕೂಡ ಸುಂದರವಾಗಿ ಕಾಣುತ್ತೀರಿ. ಅದೂ ಅಲ್ಲದೆ ನೀವು ಎಷ್ಟು ಹೋಳಿ ಆಡಿದ್ದೀರಾ ಎಂದು ಕೂಡ ಈ ಬಣ್ಣ ಹೇಳುತ್ತವೆ. ಏಕೆಂದರೆ ಜಾಸ್ತಿ ಓಕುಳಿ ಆಡಿದ್ದರೆ ಬಿಳಿ ಬಟ್ಟೆಗಳು ಸಂಪೂರ್ಣವಾಗಿ ವಿಭಿನ್ನ ಬಣ್ಣಗಳಿಂದ ಕೂಡಿರುತ್ತವೆ.
ಹೋಳಿ ಹಬ್ಬವು ಬೇಸಿಗೆ ಕಾಲದಲ್ಲಿ ಬರುವುದರಿಂದ ಬಿಳಿ ಬಣ್ಣದ ಬಟ್ಟೆಗಳು ಪರಿಸರದಿಂದ ಕಡಿಮೆ ಶಾಖವನ್ನು ಹೀರಿಕೊಳ್ಳುತ್ತದೆ, ಹಾಗಾಗಿ ಹೆಚ್ಚು ಬಿಸಿಯ ಅನುಭವ ಆಗುವುದಿಲ್ಲ. ಈ ಹಬ್ಬದಂದು ದಿನ ಪೂರ್ತಿ ಬಿಸಿಲಿನಲ್ಲಿ ಬಣ್ಣಗಳೊಂದಿಗೆ ಆಟವಾಡಿದರೂ ಕೂಡ ನಿಮಗೆ ಶಾಖದ ಅನುಭವ ಆಗುವುದಿಲ್ಲ. ಹಾಗಾಗಿ ಹಿಂದಿನಿಂದಲೂ ಬಿಳಿ ಬಣ್ಣದ ಬಟ್ಟೆಯನ್ನು ಹೋಳಿ ಹಬ್ಬದ ದಿನ ತಪ್ಪದೆ ಧರಿಸುವುದು ಸೂಕ್ತ ಎನ್ನಲಾಗುತ್ತದೆ.
ಹೋಳಿ ಪ್ರೀತಿ ಹಂಚುವ ಹಬ್ಬವಾಗಿದೆ. ಹೋಳಿಯ ದಿನ ಜನರು ಪರಸ್ಪರ ದ್ವೇಷವನ್ನು ಮರೆತು ಪ್ರೀತಿಯಿಂದ, ಸಂತೋಷ ಹಂಚುತ್ತಾ ಈ ಹಬ್ಬವನ್ನು ಒಟ್ಟಿಗೆ ಆಚರಿಸುತ್ತಾರೆ. ಅಲ್ಲದೆ ಬಿಳಿ ಬಣ್ಣವನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಜನರು ಹೋಳಿ ಆಡುವಾಗ ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ.
ಹೋಳಿ ಹಬ್ಬದಂದು ಬಿಳಿ ಬಟ್ಟೆಗಳನ್ನು ಧರಿಸುವುದರ ಹಿಂದೆ ಮತ್ತೊಂದು ಕಾರಣವಿದೆ. ಬಿಳಿ ಬಣ್ಣವನ್ನು ಸಕಾರಾತ್ಮಕ ಶಕ್ತಿಯನ್ನು ಬೇಗ ಸೆಳೆಯುವ ಮತ್ತು ಶಾಂತಿಯ ಸಂದೇಶವನ್ನು ನೀಡುವ ಬಣ್ಣವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಹೋಳಿ ಹಬ್ಬವು ಕೂಡ ಶಾಂತಿಯ ಸಂದೇಶವನ್ನು ನೀಡುವುದರಿಂದ ಈ ಹಬ್ಬದಲ್ಲಿ ತಪ್ಪದೆ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವ ಪ್ರವೃತ್ತಿ ಇದೆ. ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು, ಸಂಪ್ರದಾಯದ ಹೊರತಾಗಿ ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾ ಒಳ್ಳೆಯ ಆಯ್ಕೆಯಾಗಿದೆ.

ನೋಡಿರಿ

