ಫೀಲ್ಡಿಂಗ್ ಮರೆತ ಟೀಂ ಇಂಡಿಯಾ – ಕ್ಯಾಚ್ ಜೊತೆ ಟ್ರೋಫಿನೂ ಬಿಡ್ತಾರಾ?
ನಂಬರ್ 1 ಟೀಂ ಇಷ್ಟು ಕಳಪೆನಾ?

ಟಿ-20 ವಿಶ್ವಕಪ್ನಲ್ಲಿ ಭಾರತ ದಾಖಲೆಯ ಚೇಸಿಂಗ್ನೊಂದಿಗೆ ಸೆಮೀಸ್ಗೆ ಕ್ವಾಲಿಫೈ ಆಗಿದೆ. ಗುರುವಾರ ಇಂಗ್ಲೆಂಡ್ ವಿರುದ್ಧ ಹೈವೋಲ್ಟೇಜ್ ಮ್ಯಾಚ್ ಕೂಡ ಫಿಕ್ಸ್ ಆಗಿದೆ. ಆದ್ರೆ ಹಾಲಿ ಚಾಂಪಿಯನ್ ಆಗಿರೋ ಭಾರತಕ್ಕೆ ಟ್ರೋಫಿ ಡಿಫೆನ್ಸ್ ಮಾಡಿಕೊಳ್ಳೋದು ಅಷ್ಟು ಈಸಿ ಇಲ್ಲ. ಯಾಕಂದ್ರೆ ಇವ್ರ ಮೇನ್ ಪ್ರಾಬ್ಲಂ ಕಳಪೆ ಫೀಲ್ಡಿಂಗ್.. ಕಳಪೆ ಅನ್ನೋದಕ್ಕಿಂತ ತೀರಾ ಅಂದ್ರೆ ತೀರಾ ಕೆಟ್ಟದಾಗಿದೆ. ಌಂಡ್ ಈ ಟೂರ್ನಿಯಲ್ಲಿ ದಿ ವರ್ಸ್ಟ್ ಫೀಲ್ಡಿಂಗ್ ಅನ್ನೋ ಹಣೆಪಟ್ಟಿಯನ್ನೂ ಅಂಟಿಸಿಕೊಂಡಿದ್ದಾರೆ.
ಇದನ್ನೂ ಓದಿ : ಸತತ 3ನೇ ಬಾರಿ IND Vs ENG – ಸೆಮೀಸ್ ಗೆದ್ದವ್ರೇ ಚಾಂಪಿಯನ್ಸ್?
ಬ್ಯಾಟಿಂಗ್ ಚೆನ್ನಾಗಿದ್ರೆ ಬೌಲಿಂಗ್ ಚೆನ್ನಾಗಿರಲ್ಲ. ಬೌಲಿಂಗ್ ಓಕೆ ಇದ್ರೆ ಬ್ಯಾಟಿಂಗ್ ಇರಲ್ಲ. ಎರಡೂ ಸೂಪರ್ ಅಂದ್ರೆ ಫೀಲ್ಡಿಂಗ್ ಅಟ್ಟರ್ ಫ್ಲ್ಯಾಪ್. ಸದ್ಯ ಟೀಂ ಇಂಡಿಯಾ ಟಿ-20ಐ ಟೀಮ್ನ ಕಥೆ ಇದು. ಅದ್ರಲ್ಲೂ ಕ್ರೂಶಿಯಲ್ ಟೈಮಲ್ಲಿ ಫೀಲ್ಡಿಂಗ್ ಅಂತೂ ತೀರಾ ಹೀನಾಯವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ಡು ಆರ್ ಡೈ ಮ್ಯಾಚಲ್ಲೂ ಇದು ರಿಪೀಟ್ ಆಯ್ತು. ವಿಂಡೀಸ್ ಪಡೆಯ ಬ್ಯಾಟರ್ಗಳಿಗೆ 3 ಸಲ ಜೀವದಾನ ನೀಡಿದ್ರು. ಅಭಿಷೇಕ್ ಶರ್ಮಾ ಈಸಿಯಾದ 2 ಕ್ಯಾಚ್ಗಳನ್ನ ಕೈಚೆಲ್ಲಿದ್ರು. ಇದ್ರ ಎಫೆಕ್ಟ್ನಿಂದಲೇ ಕೆರೆಬಿಯನ್ ಕಲಿಗಳು ಫಸ್ಟ್ ಇನ್ನಿಂಗ್ಸ್ನಲ್ಲಿ 195 ರನ್ ಸ್ಕೋರ್ ಮಾಡೋಕೆ ಕಾರಣ ಆಯ್ತು. ಹಾಗಂತ ಇದೊಂದೇ ಪಂದ್ಯ ಅಲ್ಲ. ಇಡೀ ಟೂರ್ನಿಯುದ್ದಕ್ಕೂ ಇದೇ ಗೋಳು. ಇನ್ನೊಂದು ಅಚ್ಚರಿ ಅನ್ಸಿದ್ರೂ ಸತ್ಯ ಏನಂದ್ರೆ ನಮ್ಮ ಫೀಲ್ಡಿಂಗ್ ಆ ಪಾಕಿಸ್ತಾನಕ್ಕಿಂತಲೂ ಕಡೆಯಾಗಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟಿತು. ಇದು ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ದಾಖಲೆಯೂ ಆಗಿದೆ.
7 ಪಂದ್ಯಗಳಿಂದ 13 ಕ್ಯಾಚ್ ಬಿಟ್ಟಿರೋ ಟೀಂ ಇಂಡಿಯಾ!
10ನೇ ಆವೃತ್ತಿಯ ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಫೀಲ್ಡಿಂಗ್ನಲ್ಲಿ ತೀರಾ ಕೆಟ್ಟದಾಗಿ ಆಡ್ತಿದೆ. ಗ್ರೂಪ್ ಸ್ಟೇಜ್ನ 4 ಪಂದ್ಯಗಳು ಹಾಗೇ ಸೂಪರ್ 8 ಹಂತದ ಮೂರು ಪಂದ್ಯಗಳು ಸೇರಿ ಒಟ್ಟಾರೆ ಈವರೆಗಿನ 7 ಪಂದ್ಯಗಳಲ್ಲಿ ಒಟ್ಟು 13 ಕ್ಯಾಚ್ಗಳನ್ನ ಡ್ರಾಪ್ ಮಾಡಿದ್ದಾರೆ. ಇದೇ ಮಿಸ್ ಫೀಲ್ಡ್ ಹಾಗೇ ಕ್ಯಾಚ್ ಡ್ರಾಪ್ಗಳೊಂದಿಗೆ ಟೀಂ ಇಂಡಿಯಾದ ಕ್ಯಾಚಿಂಗ್ ದಕ್ಷತೆಯು ಟೂರ್ನಮೆಂಟ್‌ನಲ್ಲಿ ಕನಿಷ್ಠ 72.7% ಕ್ಕೆ ಇಳಿದಿದೆ. ಌಂಡ್ ಪ್ರತೀ ಬಾರಿ ಫೀಲ್ಡಿಂಗ್‌ಗಾಗಿಯೇ ಆಗಾಗ್ಗೆ ಟ್ರೋಲ್ ಆಗೋ ಪಾಕಿಸ್ತಾನವೇ ಶೇಕಡಾ 83.3 ಪರ್ಸೆಂಡ್ನೊಂದಿಗೆ ಫೀಲ್ಡಿಂಗ್ ಮಾಡಿದೆ. ಸೋ ಈ ಟೂರ್ನಮೆಂಟ್‌ನಲ್ಲಿ ಸೂಪರ್ 8ಗೆ ಕ್ವಾಲಿಫೈ ಆಗಿದ್ದ ಟೀಮ್ಗಳ ಕ್ಯಾಚಿಂಗ್ ಎಫಿಶಿಯನ್ಸಿ ಎಷ್ಟಿದೆ ಅನ್ನೋದನ್ನ ನೋಡೋಣ.
8 ತಂಡಗಳ ಕ್ಯಾಚ್ ದಕ್ಷತೆ!
ತಂಡ ಕ್ಯಾಚಿಂಗ್ ಸಕ್ಸಸ್ ರೇಟ್
ಇಂಗ್ಲೆಂಡ್ 87.2%
ಜಿಂಬಾಬ್ವೆ 85.4%
ವೆಸ್ಟ್ ಇಂಡೀಸ್ 84.6%
ನ್ಯೂಜಿಲೆಂಡ್ 83.9%
ಪಾಕಿಸ್ತಾನ 83.3%
ದಕ್ಷಿಣ ಆಫ್ರಿಕಾ 81.1%
ಶ್ರೀಲಂಕಾ 77.8%
ಭಾರತ 72.7%
ನೋಡಿ ಈ 8 ತಂಡಗಳ ಪೈಕಿ ಆಲ್ರೆಡಿ 4 ಟೀಮ್ ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಸೋ ಭಾರತ ಅವ್ರಿಗಿಂತಲೂ ಕಡೆಯಾಗಿ ಫೀಲ್ಡಿಂಗ್ ಮಾಡಿದ್ದಾರೆ. ಌಂಡ್ ಕ್ಯಾಚಿಂಗ್ ಎಫೆಶಿಯನ್ಸಿಯಲ್ಲಿ ಇಂಗ್ಲೆಂಡ್ ಟೀಂ ನಂಬರ್ 1 ಪೊಸಿಷನ್ನಲ್ಲಿದೆ. ನಾವೇನಾದ್ರೂ ಈಗ ಸೆಮಿಫೈನಲ್ ಮ್ಯಾಚಲ್ಲೂ ಆಂಗ್ಲರ ಎದುರು ಇದೇ ಥರ ಫೀಲ್ಡಿಂಗ್ ಮಾಡಿದ್ರೆ ಪಕ್ಕಾ ಅವ್ರು ನುಂಗಿ ಬಿಡ್ತಾರೆ. ಅವ್ರ ಕಡೆಯಿಂದ ಬೆಸ್ಟ್ ಫೀಲ್ಡಿಂಗ್ ಇರೋದ್ರಿಂದ ನಾವು ಅವ್ರಿಗೆ ಠಕ್ಕರ್ ಕೊಡ್ಬೇಕು ಅಂದ್ರೆ ನಮ್ಮ ಕಡೆಯಿಂದಲೇ ಅಂತದ್ದೇ ಎಫರ್ಟ್ ಬೇಕಿದೆ. ಯಾಕಂದ್ರೆ ಇತ್ತೀಚಿನ ಪಂದ್ಯಗಳಲ್ಲಿ ಅವ್ರ ಬ್ಯಾಟಿಂಗ್ ಎಬಿಲಿಟಿ ತುಂಬಾನೇ ಅಗ್ರೆಸ್ಸಿವ್ ಆಗಿದೆ. ಅಲ್ಲಿನ ಪವರ್ ಹಿಟ್ಟರ್ ಬ್ಯಾಟರ್ಗಳಿಗೆ ಒಂದೇ ಒಂದು ಜೀವದಾನ ಸಿಕ್ರೂ ಭಾರತದ ಬೌಲರ್ಗಳನ್ನ ಚೆಂಡಾಡಿಬಿಡ್ತಾರೆ. ಹೀಗಾಗಿ ಕೈಬಿಟ್ಟ ಕ್ಯಾಚ್‌ನ ಬೆಲೆ ವಿಶ್ವಕಪ್ ಟ್ರೋಫಿಯೇ ಆದ್ರೂ ಅಚ್ಚರಿ ಪಡ್ಬೇಕಿಲ್ಲ. ಸೋ ಭಾರತ ಮುಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಹಾಗೇ ಬೌಲಿಂಗ್ನಲ್ಲಿ ಎಷ್ಟು ಎಫರ್ಟ್ ಹಾಕ್ತಾರೋ ಅದಕ್ಕಿಂತ ಜಾಸ್ತಿ ಫೀಲ್ಡಿಂಗ್ನಲ್ಲಿ ಇಂಪ್ರೂವ್ ಆಗ್ಲೇಬೇಕು. ಇಲ್ಲದೇ ಇದ್ರೆ ಒಂದು ಕ್ಯಾಚ್ ಟೂರ್ನಿಯ ಜರ್ನಿಯನ್ನೇ ಮುಗಿಸಬಹುದು.

ನೋಡಿರಿ

