ನೀವು ಡೈಲಿ ಜೀನ್ಸ್ ಪ್ಯಾಂಟ್ ಧರಿಸುತ್ತೀರಾ? – ಎಚ್ಚರ ನಿಮ್ಮನ ಈ ಸಮಸ್ಯೆ ಕಾಡಬಹುದು!

ನೀವೇನಾದ್ರೂ ಜೀನ್ಸ್ ಪ್ಯಾಂಟ್ ಧರಿಸುತ್ತೀರಾ? ಅಯ್ಯೋ ಇದೇನಪ್ಪಾ ಇಂಥಾ ಪ್ರಶ್ನೆ ಕೇಳ್ತಾರೆ. ದಿನಬೆಳಗಾದ್ರೆ ನಾವು ಹಾಕೋದೇ ಜೀನ್ಸ್ ಪ್ಯಾಂಟ್ ಅಂತೀರಾ. ಹಾಗಾದ್ರೆ ಮಿಸ್ ಮಾಡದೆ ಈ ಮಾಹಿತಿಯನ್ನು ತಿಳಿದುಕೊಳ್ಳಿ.
ಇದನ್ನೂ ಓದಿ : ಲಕ್ಷ್ಮೀ ನಿವಾಸ ಸೀರಿಯಲ್‌ಗೆ ನಟಿ ಗುಡ್‌ಬೈ! – ನೀಲು ಪಾತ್ರಕ್ಕೆ ಹೊಸ ನಟಿ ಎಂಟ್ರಿ!
ಮಕ್ಕಳಿಂದ ಹಿಡಿದು ವೃದ್ಧರವರೆಗೂ, ಹೆಣ್ಮಕ್ಕಳು, ಗಂಡು ಮಕ್ಕಳೆಲ್ಲಾ ಜೀನ್ಸ್ ಪ್ಯಾಂಟ್ ಧರಿಸ್ತಾರೆ. ಆದರೆ, ಅನೇಕ ಮಂದಿಗೆ ಬಿಗಿಯಾದ ಜೀನ್ಸ್ ಧರಿಸುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಒಂದು ವೇಳೆ ಈ ಬಗ್ಗೆ ತಿಳಿದರೂ ಈ ವಿಚಾರಗಳನ್ನು ನಿರ್ಲಕ್ಷಿಸುತ್ತಾರೆ. ಆದ್ರೆ ಬಿಗಿಯಾದ ಜೀನ್ಸ್ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಬಿಗಿಯಾದ ಉಡುಪುಗಳು ದೇಹಕ್ಕೆ ತುಂಬಾನೇ ಅಪಾಯಕಾರಿ. ಬೆನ್ನು ನೋವು, ಕಾಲುಗಳಲ್ಲಿ ನೋವು, ರಕ್ತನಾಳಗಳಲ್ಲಿ ಹಿಡಿತದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನುಷ್ಯನ ದೇಹದಲ್ಲಿ ಸೊಂಟದ ಭಾಗದಿಂದ ತೊಡೆಯ ಭಾಗಕ್ಕೆ ಸಂವೇದನಾ ನರಗಳು ಸಕ್ರಿಯತೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ನೀವು ಸತತವಾಗಿ ಜೀನ್ಸ್ ಪ್ಯಾಂಟ್ ಧರಿಸಿದ್ದೇ ಆದಲ್ಲಿ ಈ ನರಗಳು ತಮ್ಮ ಕಾರ್ಯ ನಿಲ್ಲಿಸುತ್ತವೆ. ಇದ್ರಿಂದ ಭಾರ ಎತ್ತುವಾಗ, ಬಗ್ಗುವಾಗ, ಮೇಲೇಳುವಾಗ ಮತ್ತು ನಿಮ್ಮ ಪ್ರತಿದಿನದ ಕಾರ್ಯ ಚಟುವಟಿಕೆಗಳಲ್ಲಿ ನಿಶ್ಯಕ್ತಿ ಕಾಡಲಾರಂಭಿಸುತ್ತದೆ. ಹಾಗೂ ಮೂತ್ರನಾಳದ ಸೋಂಕಿಗೂ ಕೂಡ ಕಾರಣವಾಗಬಹುದು. ಸೊಂಟ ಮತ್ತು ತೊಡೆಯ ಭಾಗದಲ್ಲಿ ಚರ್ಮದ ಮೇಲೆ ನೋವು ಅಥವಾ ಕೆರೆತ ಉಂಟಾಗಿ ಅಲರ್ಜಿ ಉಂಟಾಗಬಹುದು. ಹೀಗಾಗಿ ಆದಷ್ಟು ಸ್ವಲ್ಪ ಫ್ರೀ ಎನಿಸುವ ಜೀನ್ಸ್ ಪ್ತಾಂಟ್ ಗಳನ್ನ ಧರಿಸಿ.
ಒಟ್ಟಾರೆ, ಬಿಗಿಯಾದ ಜೀನ್ಸ್ ಸ್ಟೈಲಿಶ್ ಲುಕ್ ನೀಡಬಹುದು. ಆದರೆ ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಆದ್ದರಿಂದ, ಜೀನ್ಸ್ ಪ್ಯಾಂಟ್ ಅನ್ನು ಆಯ್ಕೆ ಮಾಡುವಾಗ ದೇಹಕ್ಕೆ ಸರಿಹೊಂದುವ ಗಾತ್ರದಲ್ಲಿ ಮತ್ತು ಉಸಿರಾಡುವ, ಸುಕ್ಕುಗಳಿಲ್ಲದ ವಸ್ತುವಿನಿಂದ ಮಾಡಲ್ಪಟ್ಟ ಜೀನ್ಸ್ ಅನ್ನು ಬಳಸುವುದು ಉತ್ತಮ. ಫ್ಯಾಷನ್ ಜೊತೆಗೆ ಆರೋಗ್ಯವನ್ನು ಸಮಾನವಾಗಿ ಪರಿಗಣಿಸಬೇಕು.

ನೋಡಿರಿ

