ಟಾಕ್ಸಿಕ್ ಸಿನಿಮಾದ ಸಾಂಗ್ ರಿಲೀಸ್ – ತಬಾಹಿ ಹಾಡಿನಲ್ಲಿ ರಾಯ ನಾಡಿಯಾ ರೋಮ್ಯಾನ್ಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಇದೀಗ ಟಾಕ್ಸಿಕ್ ಸಿನಿಮಾದ ತಬಾಹಿ ಹಾಡು ಬಿಡುಗಡೆಯಾಗಿದೆ. ಚಿತ್ರದಲ್ಲಿ ರಾಯ ಮತ್ತು ನಾಡಿಯಾ ರೋಮ್ಯಾನ್ಸ್ ಅಭಿಮಾನಿಗಳ ಎದೆಯ ನಾಡಿ ಮಿಡಿತ ಹೆಚ್ಚಿಸಿದೆ.
ಇದನ್ನೂ ಓದಿ:ಆದಿ-ಭಾಗ್ಯ ಕಲ್ಯಾಣ.. ಮದುವೆ ನಿಲ್ಲಿಸ್ತಾನಾ ತಾಂಡವ್? – ಕಟ್ಟಡದಿಂದ ಹಾರಿದ ಶ್ರೇಷ್ಠಾ ಏನಾದ್ಲು?
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ತಬಾಹಿ ಹಾಡು ರಿಲೀಸ್ ಆಗಿದೆ. ಈ ಹಾಡು ಕನ್ನಡ, ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಆಗಿದೆ. ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ವಿಶಾಲ್ ಮಿಶ್ರಾ ಸಂಗೀತ ಸಂಯೋಜನೆ ಮಾಡಿ ಹಾಡನ್ನು ಹಾಡಿದ್ದಾರೆ. ಸದ್ಯ ಲಿರಿಕಲ್ ಸಾಂಗ್ ಮಾತ್ರ ಬಿಡುಗಡೆ ಕಂಡಿದೆ. ಎಲ್ಲ ಮಿತಿ ಮೀರಿ ಹೋಗೋಣ ಬಾ ಅಂತಲೆ ಮೊದಲ ಸಾಲು ಬರೆದಿದ್ದಾರೆ. ಈ ಒಂದೇ ಸಾಲು ಸಾಕು. ಇಡೀ ಹಾಡಿನ ದೃಶ್ಯ ಹೇಗೆ ಇರುತ್ತದೆ ಅಂತ ತಿಳಿಯೋಕೆ. ಈ ಹಾಡಿನ ಮೊದಲ ಸಾಲು ರೋಮ್ಯಾಂಟಿಕ್ ಆಗಿದೆ. ಈ ಹಾಡಿಗೆ ಒಂದೇ ಒಂದು ಫೋಟೋ ಬಳಕೆ ಮಾಡಿದೆ ಚಿತ್ರತಂಡ ಈಗಾಗಲೇ ಬಿಟ್ಟಿರೋ ರಾಯ ಮತ್ತು ನಾಡಿಯಾ ಪಾತ್ರದ ರೋಮ್ಯಾಂಟಿಕ್ ದೃಶ್ಯದ ಅದೇ ಫೋಟೋವನ್ನೆ ಬಳಕೆ ಮಾಡಿದ್ದಾರೆ.
ಈ ಚಿತ್ರದಲ್ಲಿ ಆರು ಹಾಡುಗಳು ಇವೆ ಎನ್ನಲಾಗಿದೆ. ಈ ಸಿನಿಮಾಗಾಗಿ ಐದು ಸಂಗೀತ ಸಂಯೋಜಕರು ಕೆಲಸ ಮಾಡಿದ್ದಾರೆ. ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಅವರು 4 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ತನಿಷ್ಕ್ ಬಾಗ್ಜಿ ಅವರು ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಜೊತೆ ಸೇರಿ ಒಂದು ಹಾಡಿಗೆ ಸಂಗೀತ ನೀಡಿದ್ದಾರೆ. ರವಿ ಬಸ್ರೂರು ಅವರು ಒಂದು ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ನೋಡಿರಿ

