ಲಕ್ಷ್ಮೀ ನಿವಾಸ ಸೀರಿಯಲ್‌ಗೆ ನಟಿ ಗುಡ್‌ಬೈ! – ನೀಲು ಪಾತ್ರಕ್ಕೆ ಹೊಸ ನಟಿ ಎಂಟ್ರಿ!

ಲಕ್ಷ್ಮೀ ನಿವಾಸ ಸೀರಿಯಲ್‌ಗೆ ನಟಿ ಗುಡ್‌ಬೈ! – ನೀಲು ಪಾತ್ರಕ್ಕೆ ಹೊಸ ನಟಿ ಎಂಟ್ರಿ!

ಕಿರುತೆರೆಯಲ್ಲಿ ಒಮ್ಮೊಮ್ಮೆ ಪ್ರೇಕ್ಷಕರ ಹೃದಯಗೆದ್ದ ಪಾತ್ರಗಳು ಏಕಾಏಕಿ ಬದಲಾಗುತ್ತಿರುತ್ತವೆ. ಅದೇ ರೀತಿ ಲಕ್ಷ್ಮೀ ನಿವಾಸ ಸಿರಿಯಲ್‌ನಲ್ಲೂ ಒಂದಾದ ಮೇಲೊಂದು ಪಾತ್ರಗಳು ಬದಲಾಗುತ್ತಿವೆ. ಇತ್ತೀಚೆಗಷ್ಟೇ ನಟಿ ವಿಜಯಲಕ್ಷ್ಮೀ ಅವರ ಪಾತ್ರ ಎಂಡ್‌ ಆಗಿತ್ತು. ಇದೀಗ ನೀಲು ಪಾತ್ರಧಾರಿ ಸೀರಿಯಲ್‌ಗೆ ಗುಡ್‌ಬೈ ಹೇಳಿದ್ದಾರೆ.

ಇದನ್ನೂ ಓದಿ: ರಣಜಿ ಸೋಲಿಗೆ ಕೆ.ಎಲ್ ರಾಹುಲ್ ನೋವು – ವೀರಾಂಜನೇಯ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ಯಾಕೆ ಕೆ.ಎಲ್ ರಾಹುಲ್?

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಒಂದ್ಕಡೆ ಪಾತ್ರಗಳು ಎಂಡ್‌ ಆಗ್ತಿದ್ರೆ, ಮತ್ತೊಂದ್ಕಡೆ ನಟ, ನಟಿಯರು ಬದಲಾಗುತ್ತಿದ್ದಾರೆ. ಇದೀಗ ಮಾನಸ ಮನೋಹರ್ ಅವರು ನೀಲು ಪಾತ್ರಕ್ಕೆ ಗುಡ್‌ಬೈ ಹೇಳಿದಾರೆ.

ಮರೀಗೌಡನ ಮುದ್ದಿನ ಮಡದಿ, ಜವರೇಗೌಡರ ನೆಚ್ಚಿನ ಸೊಸೆ ನೀಲು ಪಾತ್ರದಲ್ಲಿ ಮಾನಸ ನಟಿಸುತ್ತಿದ್ದರು. ಗರ್ಭಿಣಿಯಾಗಿರುವ ಮಾನಸ ಸದ್ಯ ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ. ಈ ಬಗ್ಗೆ ಮಾನಸ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದ್ರಲ್ಲಿ, ಪಾತ್ರದ ಹೆಸರು ನೀಲು ಆಗಿರುವ ಕಾರಣ ಕೊನೆ ದಿನದ ಶೂಟಿಂಗ್ ವೇಳೆ ನೀಲಿ ಬಣ್ಣದ ಸೀರೆಯನ್ನು ಧರಿಸಿದ್ದರು. ಈ ನೀಲಿ ಬಣ್ಣದ ಸೀರೆ ಈ ಹಿಂದೆ ಅತ್ತೆ ಪಾತ್ರದಲ್ಲಿ ನಟಿಸುತ್ತಿದ್ದ ಅಂಜಲಿ ಮತ್ತೊಂದು ಸೀರೆಯನ್ನು ತಮ್ಮ ಮತ್ತೋರ್ವ ಸಹದ್ಯೋಗಿ ನೀಡಿದ್ದರು ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.

ಇನ್ನು ನೀಲು ಪಾತ್ರಕ್ಕೆ ಹೊಸ ನಟಿಯ ಆಯ್ಕೆ ಆಗಿದೆ. ನಟಿ ಅನಿಕಾ ಅವರನ್ನು ನೀಲು ಪಾತ್ರಕ್ಕೆ ಸೆಲೆಕ್ಟ್‌ ಆಗಿದ್ದಾರೆ. ಅನಿಕಾ ಅವರು ಈ ಹಿಂದೆ ಲಕ್ಷ್ಮೀ ಬಾರಮ್ಮಾ ಸೀರಿಯಲ್‌ ಚಿಕ್ಕಿ ಪಾತ್ರಕ್ಕೆ ಜೀವತುಂಬಿದ್ದರು.

Shwetha M

Leave a Reply

Your email address will not be published. Required fields are marked *