ಮಂಗಗಳ ಕೈಯಲ್ಲಿ ಮೊಬೈಲ್ – ಹೇಗಿದೆ ಕೋತಿಗಳ ಡಿಜಿಟಲ್ ಯುಗ?

ಮಂಗಗಳ ಕೈಯಲ್ಲಿ ಮೊಬೈಲ್ – ಹೇಗಿದೆ ಕೋತಿಗಳ ಡಿಜಿಟಲ್ ಯುಗ?

ಮೊಬೈಲ್ ಅನ್ನೋ ಮಾಯಾಜಾಲ ಎಂತವರನ್ನೂ ತನ್ನತ್ತ ಸೆಳೆಯುತ್ತೆ. ಪುಟಾಣಿ ಮಕ್ಕಳಿಂದ ಹಿಡಿದು ವೃದ್ದರೆಲ್ಲರೂ ಮೊಬೈಲ್ ಗೆ ಅಡಿಕ್ಟ್ ಆಗಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ, ತಾವು ಧರಿಸೋ ಬಟ್ಟೆ, ತಿನ್ನೋ ಆಹಾರ ಎಲ್ಲವನ್ನೂ ಮೊಬೈಲ್ ಆಪ್ ನಲ್ಲಿ ಬುಕ್ ಮಾಡಿ ಖರೀದಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಮಾತ್ರ ಮೊಬೈಲ್ ಗೆ ಅಡಿಕ್ಟ್ ಆಗಿಲ್ಲ. ಮನುಷ್ಯ ಜೊತೆ ಪ್ರಾಣಿಗಳು ಮೊಬೈಲ್ ಗೆ ಅವಲಂಭಿತವಾಗಿದೆ. ಪ್ರಾಣಿಗಳು ಮೊಬೈಲ್ ನಲ್ಲಿ ವಿಡಿಯೋ ನೋಡುವುದು, ಮೊಬೈಲ್ ಸ್ಕ್ರಾಲ್ ಮಾಡುವ ಸಾಕಷ್ಟು ವಿಡಿಯೋಗಳನ್ನು ನೋಡಿರುತ್ತೇವೆ. ಈಗ ಮಂಗಗಳು ಮೊಬೈಲ್ ಬಳಸುವ ದೃಶ್ಯ ವೈರಲ್ ಆಗುತ್ತಿದೆ.

ಇದನ್ನೂಓದಿ: ಪ್ರಿಯಕರನ ಮೇಲೆ ಸಿಟ್ಟಿದೆಯೇ? – ಜಿರಳೆಗೆ ಆತನ ಹೆಸರಿಟ್ಟು ಕೋಪ ತೀರಿಸಿಕೊಳ್ಳಿ!

ಕೇಂದ್ರ ಸಚಿವ ಕಿರಣ ರಿಜಿಜು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ‘ಡಿಜಿಟಲ್​ ಕ್ರಾಂತಿಯ ಅಭೂತಪೂರ್ವ ಯಶಸ್ಸನ್ನು ನೋಡಿ ಎಂದು ಬರೆದುಕೊಂಡಿದ್ದಾರೆ. ಈ ದೃಶ್ಯದಲ್ಲಿ ವ್ಯಕ್ತಿಯೊಬ್ಬರು ಮಂಗಗಳಿಗೆ ಮೊಬೈಲ್ ತೋರಿಸಿದ್ದಾರೆ. ಮೂರು ಮಂಗಗಳು ಕುತೂಹಲದಿಂದ ಮೊಬೈಲ್ ಅನ್ನು ಸ್ಕ್ರಾಲ್ ಮಾಡಿ ಏನನ್ನೋ ಹುಡುಕುತ್ತಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋ ಅನ್ನು ಈವರೆಗೆ 1.23 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ. ‘ಅಬ್ಬಾ! ಎಂಥ ಅದ್ಭುತವಾದ ವಿಡಿಯೋ. ಇವರೆಲ್ಲರ ಕುತೂಹಲ ಮತ್ತು ಚಕಚಕನೆ ಸ್ಕ್ರಾಲ್​​ ಮಾಡುವುದನ್ನು ನೋಡಿ ಎಂದು ಒಬ್ಬರು ಹೇಳಿದ್ದಾರೆ.  ಮತ್ತೊಬ್ಬರು ಎಷ್ಟು ಆಸ್ಥೆ, ಸಮಾಧಾನದಿಂದ ಒಬ್ಬೊಬ್ಬರೇ ನೋಡುತ್ತಿದ್ದಾರೆ. ಕಲ್ಪಿಸಿಕೊಳ್ಳಿ ಮಂಗಗಳ ಮೊಬೈಲ್​ ಇಟ್ಟುಕೊಂಡು ಓಡಾಡಲು ಶುರು ಮಾಡಿದರೆ ಹೇಗೆ ಅಂತ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

suddiyaana