ವಿಂಡೀಸ್ ದೈತ್ಯರು ವೆರಿ ಡೇಂಜರಸ್ – ಬಾಲಂಗೋಚಿಗಳೇ ಮ್ಯಾಚ್ ಗೆಲ್ಲಿಸ್ತಾರಾ?
ಭಾರತಕ್ಕೆ ಇರೋ ಅಡ್ವಾಂಟೇಜಸ್ ಏನು?

ಇಡೀ ಕ್ರಿಕೆಟ್ ಜಗತ್ತೇ ಕಾಯ್ತಿರೋ ಹೈವೋಲ್ಟೇಜ್ ಪಂದ್ಯಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇವತ್ತು ಮುಖಾಮುಖಿ ಆಗ್ತಿದ್ದು ಗೆದ್ದವ್ರು ಟಿ-20 ವಿಶ್ವಕಪ್ ಸೆಮೀಸ್ಗೆ ಸೆಲೆಕ್ಟ್ ಆಗ್ತಾರೆ. ಸೋತವ್ರ ಜರ್ನಿ ಇವತ್ತಿಗೆ ಎಂಡ್ ಆಗುತ್ತೆ. ಇಬ್ಬರೂ ಕೂಡ ಮಸ್ಟ್ ವಿನ್ ಮೈಂಡ್ಸೆಟ್ನಲ್ಲೇ ಕಣಕ್ಕಿಳೀತಾರೆ. ಇಬ್ರೂ ಡೇಂಜರಸ್ ಆಗಿದ್ದು ನೆಕ್ ಟು ನೆಕ್ ಫೈಟ್ ಇರೋದಂತೂ ಪಕ್ಕಾ. ಅದ್ರಲ್ಲೂ ಕೆರೆಬಿಯನ್ ಕಲಿಗಳ ಎದುರು ಭಾರತ ಕೇರ್ಫುಲ್ ಆಗಿ ಆಡ್ಬೇಕಿದೆ. ಹತ್ತನೇ ಆವೃತ್ತಿಯ ಟಿ-20 ವಿಶ್ವಕಪ್ ಈಗ ಸೆಮಿಫೈನಲ್ ಸ್ಟೇಜ್ಗೆ ಬಂದಿದೆ. ಆಲ್ರೆಡಿ ಮೂರು ತಂಡಗಳು ಮುಂದಿನ ಸುತ್ತಿಗೆ ಸೆಲೆಕ್ಟ್ ಆಗಿದ್ದು ಈಗ ನಾಲ್ಕನೇ ಸ್ಥಾನ ಯಾರಿಗೆ ಅನ್ನೋದು ಇವತ್ತು ಡಿಸೈಡ್ ಆಗುತ್ತೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿರೋ ಪಂದ್ಯದಲ್ಲಿ ಭಾರತ-ವೆಸ್ಟ್ ಇಂಡೀಸ್ ನಡುವೆ ಗೆದ್ದವ್ರು ಸೆಮಿಫೈನಲ್ಗೆ ಕ್ವಾಲಿಫೈ ಆಗ್ತಾರೆ. ಈ ಪಂದ್ಯಕ್ಕಾಗಿ ಉಭಯ ತಂಡಗಳ ಆಟಗಾರರು ಭರ್ಜರಿಯಾಗಿ ಪ್ರಿಪೇರ್ ಆಗಿದ್ದಾರೆ.
ಇದನ್ನೂ ಓದಿ : ಬ್ಯಾಟಿಂಗ್ ಕಷ್ಟ.. ಚೇಸಿಂಗ್ ಇನ್ನೂ ಕಷ್ಟ.. ಫೇಲ್ ಆಗುತ್ತಾ ಪಾಕಿಸ್ತಾನ? – ಲಂಕಾ ಜೊತೆ ಅಘಾ ಟೀಂ ಔಟ್?
ಭಾರತ-ವಿಂಡೀಸ್ ನಡುವೆ ಮಾಡು ಇಲ್ಲವೇ ಮಡಿ!
ಸೆಮಿಫೈನಲ್ ಸಿನಾರಿಯೋ ಸಿಂಪಲ್ ಆಗಿದೆ. ಗೆದ್ದವ್ರು ಪಾಸ್ ಸೋತ್ರವೂ ಜೂಟ್ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಇವತ್ತಿನ ಪಂದ್ಯದಲ್ಲಿ ಜಸ್ಟ್ 1 ರನ್ನಿಂದ ಗೆದ್ರೂ ಅವ್ರು ಮುಂದಿನ ಸುತ್ತಿಗೆ ಸೆಲೆಕ್ಟ್ ಆಗ್ತಾರೆ. ಸೋ ಓನ್ಲಿ ಪಾಯಿಂಟ್ಸ್ ಮೇಲೆ ಡಿಪೆಂಡ್ ಆಗುತ್ತೆ. ಹೀಗಿದ್ರೂ ಪಂದ್ಯ ಏನಾದ್ರೂ ಮಳೆಯಿಂದನೋ ಅಥವಾ ಇನ್ಯಾವುದೋ ಕಾರಣಕ್ಕೆ ರದ್ದಾದ್ರೂ ವಿಂಡೀಸ್ ಮುಂದಕ್ಕೆ ಹೋಗ್ತಾರೆ. ಅವ್ರ ನೆಟ್ ರನ್ ರೇಟ್ ಚೆನ್ನಾಗಿದೆ. ಬಟ್ ಕೊಲ್ಕತ್ತಾದಲ್ಲಿ ಸದ್ಯಕ್ಕೆ ಮಳೆ ಕಾಟ ಏನಿಲ್ಲ. ಹೀಗಾಗಿ ಪಂದ್ಯ ಅಂತೂ ಪಕ್ಕಾ ನಡೆಯುತ್ತೆ. ಆಡ್ಲೇಬೇಕು.. ಗೆಲ್ಲಲೇಬೇಕು ಅಷ್ಟೇ. ಈ ಪಂದ್ಯದಲ್ಲಿ ಉಭಯ ತಂಡಗಳ ಸ್ಟ್ರೆಂಥ್ ಮತ್ತು ವೀಕ್ನೆಸ್ನೂ ಕೂಡ ಹೇಳ್ತೇನೆ ನೋಡಿ.
ಭಾರತ-ವಿಂಡೀಸ್ ಪ್ಲಸ್ & ಮೈನಸ್!
ಸೌತ್ ಆಫ್ರಿಕಾ ವಿರುದ್ಧ ಸೋತ್ರೂ ಜಿಂಬಾಬ್ವೆ ವಿರುದ್ಧ ಕಂ ಬ್ಯಾಕ್
ಅಭಿಷೇಕ್ ಶರ್ಮಾ ಕಂ ಬ್ಯಾಕ್ ಮಾಡಿರೋದು ಪಾಸಿಟಿವ್
ಲೆಫ್ಟ್ ರೈಟ್ ಕಾಂಬಿನೇಷನ್ ವರ್ಕ್ ಆಗುತ್ತೆ ಅನ್ನೋ ಐಡಿಯಾ
ಬೌಲಿಂಗ್ ಹಾಗೇ ಫೀಲ್ಡಿಂಗ್ ನಲ್ಲಿ ಸ್ವಲ್ಪ ಎಚ್ಚರಿಕೆಯ ಆಟ
ಮಸ್ಟ್ ವಿನ್ ಮ್ಯಾಚ್ ಆಗಿರೋದ್ರಿಂದ ಭಾರತ ಗೆಲ್ಲಲೇಬೇಕು
ಆಫ್ ಸ್ಪಿನ್ ಬೌಲರ್ ಗಳ ಎದುರು ಸ್ಟ್ರಗಲ್ ಜಾಸ್ತಿ ಇದೆ
ಗ್ರೂಪ್ ಸ್ಟೇಜ್ ನಲ್ಲೂ ಒನ್ ಸೈಡೆಡ್ ಆಗಿ ಗೆದ್ದಿರೋ ವಿಂಡೀಸ್
ಜಿಂಬಾಬ್ವೆ ವಿರುದ್ಧವೂ ಬ್ಯಾಟಿಂಗ್ ಹಾಗೇ ಬೌಲಿಂಗ್ ಸೂಪರ್
ಟಾಪ್ ಆರ್ಡರ್ ಕೈಕೊಟ್ರೂ ಟೇಲ್ ಎಂಡರ್ಸ್ ಫೈಟ್
83ಕ್ಕೆ 7 ವಿಕೆಟ್ ಬಿದ್ರೂ ಗ್ರೇಟ್ ಕಂ ಬ್ಯಾಕ್!
ವೆಸ್ಟ್ ಇಂಡೀಸ್ ತಂಡದ ಪ್ಲಸ್ ಪಾಯಿಂಟೇ ಇದು ನೋಡಿ. ನಮ್ಮಲ್ಲಿ ಟಾಪ್ ಆರ್ಡರ್ ಕೊಲ್ಯಾಪ್ಸ್ ಆಯ್ತು ಅಂದ್ರೆ ಫಿನಿಶರ್ ಆಗ್ಲಿ ಅಥವಾ ಆಲ್ರೌಂಡರ್ಸ್ ಆಗ್ಲಿ ಇನಿಶಿಯೇಟ್ ತಗೊಂಡು ಮ್ಯಾಚ್ ವಿನ್ ಮಾಡ್ಸಲ್ಲ. ಆದ್ರೆ ವಿಂಡೀಸ್ ಪಡೆ ಆಗಲ್ಲ. ಲಾಸ್ಟ್ ಬಾಲ್ವರೆಗೂ ಫೈಟ್ ಕೊಡ್ತಾರೆ. ಸೌತ್ ಆಫ್ರಿಕಾ ವಿರುದ್ಧ ವಿಂಡೀಸ್ಗೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ವಿಂಡೀಸ್ ತಂಡ 7 ವಿಕೆಟ್ ಕಳೆದುಕೊಂಡು 84 ರನ್ ಕಲೆಹಾಕಿತ್ತು. ಆದರೆ, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ರೊಮಾರಿಯೊ ಶೆಫರ್ಡ್ ಹಾಗೂ ಜೇಸನ್ ಹೋಲ್ಡರ್ ಆಫ್ರಿಕಾ ಬೌಲರ್ಗಳನ್ನ ಚೆನ್ನಾಗೇ ಬೆಂಡೆತ್ತಿದ್ರು. 8ನೇ ವಿಕೆಟ್‌ಗೆ ಜೊತೆಯಾದ ಈ ಜೋಡಿ 90 ರನ್‌ಗಳ ಜೊತೆಯಾಟ ಆಡಿದರು. ಜೇಸನ್ ಹೋಲ್ಡರ್ 49 ರನ್ ಶೆಫರ್ಡ್ ಅಜೇಯ 52ರನ್ ಬಾರಿಸಿದ್ರು. ಹರಿಣಪಡೆಗೆ 177 ರನ್ ಗುರಿ ನೀಡಿದರು. ಆ ಮ್ಯಾಚಲ್ಲಿ ಸೌತ್ ಆಫ್ರಿಕಾ ಗೆದ್ರೂ ವಿಂಡೀಸ್ ಲಾಸ್ಟ್ ಮೂಮೆಂಟ್ವರೆಗೂ ಆಡುತ್ತೆ ಅನ್ನೋದು ಗೊತ್ತಾಗ್ತಿದೆ. ಌಂಡ್ ಗ್ರೂಪ್ ಸ್ಟೇನ್ನ 4 ಪಂದ್ಯಗಳಲ್ಲೂ ಒನ್ ಸೈಡೆಡ್ ಆಗಿ ಗೆದ್ದಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ನಲ್ಲಿ ವೆರಿ ವೆರಿ ಡೇಂಜರಸ್ ಆಗಿದೆ.

ನೋಡಿರಿ

