ಈ ಸಲ ರಣಜಿ ಕಪ್ ನಮ್ದಲ್ಲ – ಅಂಪೈರ್ ಮೋಸ ಮಾಡಿದ್ರಾ?
ಕಿರಿಕ್ ನಲ್ಲೇ ಗೆದ್ರಾ ಜಮ್ಮು-ಕಾಶ್ಮೀರ?

ಈ ಸಲ ರಣಜಿ ಕಪ್ ನಮ್ದಲ್ಲ – ಅಂಪೈರ್ ಮೋಸ ಮಾಡಿದ್ರಾ?ಕಿರಿಕ್ ನಲ್ಲೇ ಗೆದ್ರಾ ಜಮ್ಮು-ಕಾಶ್ಮೀರ?

9ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟು 11 ವರ್ಷಗಳ ಬಳಿಕ ಫೈನಲ್​ಗೇರಿದ್ದ ಕರ್ನಾಟಕ ತಂಡ ಕೊನೆಗೂ ರಣಜಿ ಟ್ರೋಫಿಯಲ್ಲಿ ಸೋಲು ಕಂಡಿದೆ. ಚೊಚ್ಚಲ ಬಾರಿಗೆ ಟ್ರೋಫಿ ಸುತ್ತಿಗೆ ಸೆಲೆಕ್ಟ್ ಆಗಿದ್ದ ಜಮ್ಮುಕಾಶ್ಮೀರ ಕಂಪ್ಲೀಟ್ ಡಾಮಿನೇಷನ್ ಮಾಡಿ ಚಾಂಪಿಯನ್ ಪಟ್ಟಕ್ಕೇರಿತು. ಮ್ಯಾಚ್ ಡ್ರಾ ಆದ್ರೂ ಕೂಡ ಇನ್ನಿಂಗ್ಸ್ ಆಧಾರದ ಮೇಲೆ ಜೆಕೆ ಟೀಂ ಪ್ರಶಸ್ತಿ ಗೆದ್ದು ಬೀಗಿದೆ. ಸುದೀರ್ಘ 5 ದಿನಗಳ ಪಂದ್ಯದಲ್ಲಿ ಸಾಕಷ್ಟು ಕಿರಿಕ್​ಗಳು ಆಗಿವೆ. ಅಂಪೈರ್ ವಿರುದ್ಧ ಮೋಸದ ಆರೋಪವೂ ಕೇಳಿ ಬಂದಿದೆ. ಌಂಡ್ ಕನ್ನಡಿಗರ ಬೇಜವಾಬ್ದಾರಿಯೂ ಗೊತ್ತಾಗಿದೆ.

ಇದನ್ನೂ ಓದಿ : ಬ್ಯಾಟಿಂಗ್ ಕಷ್ಟ.. ಚೇಸಿಂಗ್ ಇನ್ನೂ ಕಷ್ಟ.. ಫೇಲ್ ಆಗುತ್ತಾ ಪಾಕಿಸ್ತಾನ? – ಲಂಕಾ ಜೊತೆ ಅಘಾ ಟೀಂ ಔಟ್?

ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಪ್ರತಿಷ್ಠಿತ ಟೂರ್ನಿಯಾಗಿರೋ ರಣಜಿ ಫೈನಲ್​ನಲ್ಲಿ ಜಮ್ಮು ಕಾಶ್ಮೀರ ಚಾಂಪಿಯನ್ ಆಗಿದೆ. ಕರ್ನಾಟಕ ಫೈನಲ್​ನಲ್ಲಿ ಇದ್ದಿದ್ರಿಂದ ಹಾಗೇ ಕರ್ನಾಟಕದಲ್ಲೇ ಪಂದ್ಯ ನಡೀತಿದ್ರಿಂದ ಈ ಮ್ಯಾಚ್ ಕನ್ನಡಿಗರಿಗೆ ತುಂಬಾನೇ ಸ್ಪೆಷಲ್ ಆಗಿತ್ತು. ಬಟ್ ಬ್ಯಾಡ್​ಲಕ್ ಯಾವುದೂ ಅಂದುಕೊಂಡಂತೆ ಆಗ್ಲಿಲ್ಲ. ಫೆಬ್ರವರಿ 24 ರಿಂದ ಆರಂಭವಾದ ಈ ಮ್ಯಾಚಲ್ಲಿ ಟಾಸ್ ಗೆದ್ದ ಜೆಕೆ ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್​ನಲ್ಲಿ 584 ರನ್ ಸೇರಿಸಿತ್ತು. ಆದ್ರೆ ಕರ್ನಾಟಕ 293 ರನ್​ಗಳಿಗೆ ಅಲೌಟ್ ಆಗಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಬಿಗ್ ಲೀಡ್ ಇದ್ರೂ ಫಾಲೋ ಆನ್ ಹೇರದ ಜಮ್ಮು ಮತ್ತೆ ಬ್ಯಾಟಿಂಗ್ ಆರಂಭಿಸಿತು. ಐದನೇ ದಿನದ ಆಟ ಆರಂಭಿಸಿದ ಕಮ್ರಾನ್ ಇಕ್ಬಾಲ್ ಶತಕಗಳಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಎರಡೂ ಇನ್ನಿಂಗ್ಸ್ ಸೇರಿ 633 ರನ್ಸ್ ಲೀಡ್ ಪಡೆದ ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ  ಡ್ರಾಗೆ ಕರೆನೀಡಿದರು. ಮೊದಲ ಇನ್ನಿಂಗ್ಸ್ ಲೀಡ್ ಆಧಾರದ ಮೇಲೆ ಜಮ್ಮು ಕಾಶ್ಮೀರ ತಂಡ ವಿಜೇತರಾಗಿ ಘೋಷಣೆಯಾದ್ರು. ಚೊಚ್ಚಲ ಟ್ರೋಫಿ ಗೆದ್ದ ಜಮ್ಮು ಆಟಗಾರರು ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ರು.

ಇನ್ನು ಆರಂಭದಿಂದಲೂ ಈ ಪಂದ್ಯ ಬಾರೀ ಕುತೂಹಲ ಮೂಡಿಸಿತ್ತು. ಯಾಕಂದ್ರೆ ಜಮ್ಮು ಕಾಶ್ಮೀರ ಕೋಚ್ ಪಂದ್ಯಕ್ಕೂ ಆರಂಭಕ್ಕೂ ಮೊದ್ಲೇ ಕರ್ನಾಟಕವನ್ನು ಅವರ ಮನೆಯಲ್ಲೇ ನುಗ್ಗಿ ಹೊಡೀತಿವಿ ಅಂದಿದ್ರು. ಈ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆ ನಂತ್ರ ನಾಯಕ ಡೋಗ್ರಾ ಕರ್ನಾಟಕದ ಆಟಗಾರರನಿಗೆ ಪಂದ್ಯದ ವೇಳೆಯೇ ಡಿಚ್ಚಿ ಹೊಡೆದು ದರ್ಪ ತೋರಿದ್ದ. ಆ ನಂತ್ರ ವೈಶಾಕ್ ವಿಜಯ್​ಕುಮಾರ್​ರನ್ನ ಕೆಣಕಿದ್ದ ಜಮ್ಮು ಬ್ಯಾಟರ್ ಇಕ್ಬಾಲ್ ಬೌಲಿಂಗ್ ಬರಲ್ವಾ ಸ್ಪಿನ್ ಬೌಲರ್ ಥರ ಬೌಲ್ ಮಾಡ್ತೀಯಾ ಅಂತಾ ಟೀಸ್ ಮಾಡಿದ್ದ. ಹೀಗೆ ಪಂದ್ಯದುದ್ದಕ್ಕೂ ಸಾಕಷ್ಟು ಕಿರಿಕ್​ಗಳೇ ಆಗಿದ್ವು. ಇನ್ನು ಇದೆಲ್ಲದ್ರ ನಡುವೆ ಮೊದಲ ಇನ್ನಿಂಗ್ಸ್​ನಲ್ಲಿ ಕೃತಿಕ್ ಕೃಷ್ಣ ಔಟ್ ಆಗಿದ್ದೂ ವಿವಾದಾತ್ಮಕವಾಗಿದೆ. ಚೆಂಡು ಬ್ಯಾಟ್ ನ ಎಡ್ಜ್​ಗೆ ಬಡಿದು ಪ್ಯಾಡ್ ಗೆ ಬಡಿದ್ರೂ ಔಟ್ ಅಂತಾ ಕೊಟ್ಟಿದ್ರು. ರಿವ್ಯೂನಲ್ಲಿ ಬ್ಯಾಟ್​ಗೆ ಬಾಲ್​ ತಾಗಿದ್ರೂ ಕೂಡ ಟಿವಿ ಅಂಪೈರ್ ವೀರೇಂದ್ರ ಶರ್ಮಾ ಔಟ್ ಕೊಟ್ಟಿದ್ರು. ಇದು ಕೆಎಲ್ ರಾಹುಲ್ ಸೇರಿದಂತೆ ಕರ್ನಾಟಕದ ಆಟಗಾರರ ಸಿಟ್ಟಿಗೆ ಕಾರಣ ಆಗಿತ್ತು. ಇದೆಲ್ಲಾ ಕಿರಿಕ್​ಗಳು ಏನೇ ಇದ್ರೂ ಇಲ್ಲಿ ಕರ್ನಾಟಕ ಟೀಂ ಜಮ್ಮು ಆಟಗಾರರ ಥರ ಫೈಟ್ ಕೊಡ್ಲೇ ಇಲ್ಲ. ಬೌಲಿಂಗ್​ ಅಂತೂ ತೀರಾ ಕಳಪೆ. ಲೈನ್ ಌಂಡ್ ಲೆಂಗ್ತ್ ಕಂಪ್ಲೀಟ್ ಮಿಸ್ ಮಾಡಿದ್ರು. ಕರ್ನಾಟಕ ಪರ ಬೌಲರ್​ಗಳು ತಮ್ಮ ಕೋಟಾ ಮುಗಿಸ್ತಿದ್ರು ಬಿಟ್ರೆ ವಿಕೆಟ್ ಮೇಲೆ ಫೋಕಸ್ ಮಾಡಿಲ್ಲ. ವಿಕೆಟ್ ತೆಗೆಯಲೇಬೇಕು ಅನ್ನೋ ಥರ ಇರ್ಲಿಲ್ಲ. ಗೆಲ್ಲೋ ಜಿದ್ದಂತೂ ಚೂರು ಕಾಣ್ತಿರಲಿಲ್ಲ. ಹಿಗಾಗಿಯೇ ಜಮ್ಮು ಕಾಶ್ಮೀರ ಗೆಲ್ಲೋದು ಖಾತ್ರಿಯಾಗ್ತಿದ್ದಂತೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಕರ್ನಾಟಕಕ್ಕೇ ಬಂದು ಅಭಿನಂದನೆ ಸಲ್ಲಿಸಿದ್ರು. ವಿನ್ನಿಂಗ್ ಟೀಂ ಜೊತೆ ನಿಂತು ಸೆಲೆಬ್ರೇಟ್ ಮಾಡಿದ್ರು. ಜೊತೆಗೆ, ತಂಡದ ಎಲ್ಲಾ ಸದಸ್ಯರಿಗೆ ಎರಡು ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ರು.

Shantha Kumari

Leave a Reply

Your email address will not be published. Required fields are marked *