ಸಂಜು ಕೈಯಲ್ಲಿ ಬ್ಯಾಟಿಂಗ್ ಬಲ – ಅತಿ ಆತ್ಮವಿಶ್ವಾಸ ಬಿಡ್ತಾರಾ ಸೂರ್ಯ?
ಭಾರತಕ್ಕೆ ಕಾಡುತ್ತಾ ಈಡನ್ ಗಾರ್ಡನ್?

ಸಂಜು ಕೈಯಲ್ಲಿ ಬ್ಯಾಟಿಂಗ್ ಬಲ – ಅತಿ ಆತ್ಮವಿಶ್ವಾಸ ಬಿಡ್ತಾರಾ ಸೂರ್ಯ?ಭಾರತಕ್ಕೆ ಕಾಡುತ್ತಾ ಈಡನ್ ಗಾರ್ಡನ್?

ಟಿ-20 ವಿಶ್ವಕಪ್​ನಲ್ಲಿ ಸದ್ಯ ಸೂಪರ್ 8 ಕ್ಲ್ಯಾಶಸ್ ನಡೀತಿದ್ರೂ ಭಾರತಕ್ಕೆ ಭಾನುವಾರದ ಪಂದ್ಯ ಒಂಥರಾ ಫೈನಲ್ ಮ್ಯಾಚ್ ಇದ್ದಂಗೇ. ಯಾಕಂದ್ರೆ ಈ ಪಂದ್ಯ ಗೆದ್ರಷ್ಟೇ ಸೆಮೀಸ್​ಗೆ ಕಾಲಿಡೋದು. ಇಲ್ದಿದ್ರೆ ಟಾಟಾ ಬೈಬೈ ಅಂತೂ ಟೂರ್ನಿಗೆ ಗುಡ್ ಬೈ ಹೇಳ್ಬೇಕು. ಮಾಡು ಇಲ್ಲವೇ ಮಡಿ. ಭಾರತಕ್ಕಾದ್ರೂ ಅಷ್ಟೇ.. ವಿಂಡೀಸ್ ತಂಡಕ್ಕಾದ್ರೂ ಅಷ್ಟೇ. ಮಸ್ಟ್ ಌಂಡ್ ಶುಡ್ ಗೆಲ್ಬೇಕು ಅಷ್ಟೇ. ಹೀಗಾಗಿ ವಿಶ್ವಕಪ್ ಟೂರ್ನಿಯ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ಈಗಾಗ್ಲೇ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನ ಸಿದ್ಧವಾಗಿದೆ. ವಿಂಡೀಸ್ ವಿರುದ್ಧ ಗೆಲ್ಲೋಕೆ ಭಾರತ ಕೂಡ ಗ್ರೌಂಡ್ ವರ್ಕ್ ಮಾಡ್ತಿದೆ. ಌಂಡ್ ಪ್ಲೇಯಿಂಗ್ 11 ಬಗ್ಗೆಯೂ ಕುತೂಹಲ ಇದೆ. ಬಟ್ ಇಲ್ಲಿ ಕಳೆದ ಪಂದ್ಯದ ಆಟಗಾರರನ್ನೇ ಅಖಾಡಕ್ಕಿಳಿಸೋದು ಪಕ್ಕಾ ಇದೆ. ಜಿಂಬಾಬ್ವೆ ವಿರುದ್ಧದ ಕಾಂಬಿನೇಷನ್ ವರ್ಕ್ ಆಗಿದ್ದು ಅದೇ ಟೀಂ ಇಲ್ಲೂ ಮೈದಾನಕ್ಕಿಳಿತಾರೆ.

ಇದನ್ನೂ ಓದಿ :ಬ್ಯಾಟಿಂಗ್ ಕಷ್ಟ.. ಚೇಸಿಂಗ್ ಇನ್ನೂ ಕಷ್ಟ.. ಫೇಲ್ ಆಗುತ್ತಾ ಪಾಕಿಸ್ತಾನ? – ಲಂಕಾ ಜೊತೆ ಅಘಾ ಟೀಂ ಔಟ್?

ಭಾರತದ ಪ್ಲೇಯಿಂಗ್ 11

ಸಂಜು ಸ್ಯಾಮ್ಸನ್

ಅಭಿಷೇಕ್ ಶರ್ಮಾ

ಇಶಾನ್ ಕಿಶನ್

ಸೂರ್ಯಕುಮಾರ್ ಯಾದವ್

ಹಾರ್ದಿಕ್ ಪಾಂಡ್ಯ

ತಿಲಕ್ ವರ್ಮಾ

ಶಿವಂ ದುಬೆ

ಅಕ್ಷರ್ ಪಟೇಲ್

ವರುಣ್ ಚಕ್ರವರ್ತಿ

ಅರ್ಶದೀಪ್ ಸಿಂಗ್

ಜಸ್ಪ್ರೀತ್ ಬುಮ್ರಾ

ಇದು ಸೇಮ್ ಸ್ಕ್ರಾಡ್ ಕಂಟಿನ್ಯೂ ಆಗುತ್ತೆ. ಇನ್ನು ರಿಂಕು ತಮ್ಮ ತಂದೆಯ ಅಂತ್ಯಕ್ರಿಯೆ ಎಲ್ಲಾ ಮುಗ್ಸಿ ಭಾರತ ತಂಡಕ್ಕೆ ರಿ ಜಾಯ್ನ್ ಆಗಿದ್ರೂ ಅವ್ರನ್ನ ಬ್ಯಾಟಿಂಗ್​ಗೆ ಸೇರಿಸಲ್ಲ. ಬಟ್ ಫೀಲ್ಡಿಂಗ್​ನಲ್ಲಿ ಯಾರನ್ನಾದ್ರೂ ಕೂರಿಸಿ ರಿಂಕುಗೆ ಚಾನ್ಸ್ ಕೊಡ್ತಾರೆ. ಌಂಡ್ ರಿಂಕು ಫೀಲ್ಡಿಂಗ್​ನಲ್ಲಿ ಬೆಸ್ಟ್ ಇದ್ದಾರೆ. ಕ್ಯಾಚ್​ಗಳನ್ನೂ ಅಷ್ಟೇ ಚೆನ್ನಾಗಿ ಹಿಡೀತಾರೆ. ಜೊತೆಗೆ ಬೌಂಡರಿ ಲೈನ್ ಬಳಿ ಸಾಕಷ್ಟು ರನ್ಸ್ ಸೇವ್ ಮಾಡ್ತಾರೆ. ಸೋ ಇದಿಷ್ಟು ಭಾರತದ ಪ್ಲೇಯಿಂಗ್ 11. ಟೀಂ ಏನೋ ಸೂಪರ್ ಸಾಲಿಡ್ ಆಗಿಯೇ ಇದೆ. ಬಟ್ ವಿಂಡೀಸ್ ಕೂಡ ಅಷ್ಟೇ ಡೇಂಜರಸ್ ಅನ್ನೋದನ್ನ ಇಲ್ಲಿ ಮರೆಯೋಕೆ ಆಗಲ್ಲ. ಇನ್ನು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡದಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಪಾಯಿಂಟ್ ಅಂದ್ರೆ ಭಾರತ ತಂಡದಲ್ಲಿ ಲೆಫ್ಟ್ ಹ್ಯಾಂಡ್ ಬ್ಯಾಟರ್ಸ್ ಜಾಸ್ತಿ ಇದ್ದಾರೆ. ಅತ್ತ ವಿಂಡೀಸ್​ನಲ್ಲಿ ರೈಟ್ ಹ್ಯಾಂಡ್ ಬ್ಯಾಟರ್ಸ್ ಜಾಸ್ತಿ ಇದ್ದಾರೆ. ಸೋ ಕೆರೆಬಿಯನ್ ಕಲಿಗಳನ್ನ ಬೇಗ ಔಟ್ ಮಾಡ್ಬೇಕು ಅಂದ್ರೆ ಭಾರತದ ಪರ ಲೆಫ್ಟ್ ಆರ್ಮ್ ಬೌಲರ್ಸ್ ಮುಖ್ಯ ಆಗ್ತಾರೆ.

ಟೀಮ್ ಇಂಡಿಯಾದಲ್ಲಿ ಲೆಫ್ಟ್ ಆರ್ಮ್ ಬೌಲರ್ಸ್ ಪ್ಲಸ್!

ವೆಸ್ಟ್ ಇಂಡೀಸ್ ತಂಡದಲ್ಲಿ ರೈಟ್ ಹ್ಯಾಂಡ್ ಬ್ಯಾಟ್ಸ್​ಮನ್ಸ್ ಜಾಸ್ತಿ ಇದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಪಂದ್ಯ 7 ಜನ ರೈಟ್ಸ್ ಹ್ಯಾಂಡ್ ಬ್ಯಾಟ್ಸ್​ಮನ್ಸ್ ಇದ್ರು. ಸೋ ಭಾರತದ ಪರ ಲೆಫ್ಟ್ ಆರ್ಮ್ ಬೌಲರ್ಸ್ ತುಂಬಾನೇ ಮುಖ್ಯ. ರೈಟ್ ಹ್ಯಾಂಡ್ ಬ್ಯಾಟ್ಸ್​ಮನ್​ಗಳನ್ನ ಟಾಪ್ ಎಡ್ಜ್ ಮಾಡ್ಬೋದು. ಬ್ಯಾಕ್ ಕ್ಯಾಚಸ್ ಆಗೋ ಚಾನ್ಸಸ್ ಜಾಸ್ತಿ ಇರುತ್ತೆ. ಸ್ಲಿಪ್ ಮತ್ತು ಎಲ್​​ಬಿಡಬ್ಲ್ಯೂ ಅವಕಾಶ ಜಾಸ್ತಿ ಇರುತ್ತೆ. ಭಾರತದ ಪರ ಅಕ್ಷರ್ ಪಟೇಲ್ ಇದ್ದಾರೆ. ಇವ್ರು ಲೆಫ್ಟ್ ಆರ್ಮ್ ಸ್ಪಿನ್ ಬೌಲರ್. ಕ್ರೂಶಿಯಲ್ ಟೈಮಲ್ಲಿ ಗೇಮ್ ಚೇಂಜಿಂಗ್ ವಿಕೆಟ್ ಎಗರಿಸ್ತಾರೆ. ಜಿಂಬಾಬ್ವೆ ವಿರುದ್ಧ ಫಸ್ಟ್ ವಿಕೆಟ್ ತೆಗೆದಿದ್ದೂ ಇವ್ರೇ. ಇನ್ನು ಕುಲ್ದೀಪ್ ಯಾದವ್ ಲೆಫ್ಟ್ ಆರ್ಮ್ ಲೆಗ್ ಸ್ಪಿನ್ ಬೌಲರ್. ಬಟ್ ಇವ್ರನ್ನ ಪ್ಲೇಯಿಂಗ್ 11ನಲ್ಲಿ ಆಡ್ಸಲ್ಲ. ಇನ್ನು ಅಭಿಷೇಕ್ ಶರ್ಮಾ ಲೆಫ್ಟ್ ಆರ್ಮ್ ಆಫ್ ಸ್ಪಿನ್ ಬೌಲರ್ ಆಗಿದ್ರೂ ಬೌಲಿಂಗ್​ನಲ್ಲಿ ಅಷ್ಟೊಂದು ಎಫೆಕ್ಟಿವ್ ಇಲ್ಲ. ಌಂಡ್ ಅರ್ಶದೀಪ್ ಸಿಂಗ್ ಲೆಫ್ಟ್ ಆರ್ಮ್ ಫಾಸ್ಟ್ ಬೌಲರ್ ಆಗಿದ್ದು ಪವರ್ ಪ್ಲೇ ಹಾಗೇ ಡೆತ್ ಓವರ್​ನಲ್ಲಿ ಬಿಗ್ ಬ್ರೇಕ್ ಥ್ರೂ ತಂದುಕೊಡ್ತಾರೆ. ಇನ್ನು ವಿಂಡೀಸ್ ಪಡೆಯಲ್ಲಿ ಅಕೀಲ್ ಹೊಸೈನ್ ಲೆಫ್ಟ್ ಆರ್ಮ್ ಆಫ್ ಸ್ಪಿನ್ ಬೌಲರ್ ಇದ್ದಾರೆ. ಬಟ್ ಇವ್ರನ್ನ ಲಾಸ್ಟ್ ಮ್ಯಾಚಲ್ಲಿ ಆಡ್ಸಿಲ್ಲ. ಇಲ್ಲಿ ಆಡಿಸ್ತಾರಾ ನೋಡ್ಬೇಕು. ಹಾಗೇ ಗುಡಕೇಶ್ ಮೋಟಿ ಕೂಡ ಲೆಫ್ಟ್ ಆರ್ಮ್ ಆಫ್ ಸ್ಪಿನ್ ಬೌಲರ್ ಆಗಿದ್ದು ಆಲ್ರೆಡಿ 6 ಪಂದ್ಯಗಳಿಂದ 10 ವಿಕೆಟ್ ತಗೊಂಡಿದ್ದಾರೆ. ಸ್ವಲ್ಪ ಡೇಂಜರಸ್ ಆಗಿದ್ದಾರೆ. ಉಳಿದಂತೆ ಎಲ್ರೂ ರೈಟ್ ಹ್ಯಾಂಡ್ ಬೌಲರ್ಸ್ ಇದ್ದಾರೆ. ಹೀಗಾಗಿ ಈ ಪಂದ್ಯ ಬಾರೀ ಮಜಾ ಇರುತ್ತೆ. ಆದ್ರೆ ಸೂರ್ಯಕುಮಾರ್ ಯಾದವ್ ಬೌಲಿಂಗ್​ನಲ್ಲಿ ಓವರ್ ಕಾನ್ಫಿಡೆನ್ಸ್ ಬಿಡ್ಬೇಕು. ಪ್ಲಸ್ ಯಾರ ಕೈಗೆ ಬಾಲ್ ಕೊಡ್ತಿದ್ದೇನೆ ಅನ್ನೋ ಕಾಮನ್​ಸೆನ್ಸ್ ಇರ್ಬೇಕಾಗುತ್ತೆ. ಹಾಗೇ ಈ ಪಂದ್ಯ ನಡೆಯಲಿರೋ ಈಡನ್ ಗಾರ್ಡನ್ ಮೈದಾನ ಕೂಡ ಬಾರೀ ಕುತೂಹಲ ಮೂಡಿಸಿದೆ.

ಟೀಂ ಇಂಡಿಯಾ ಟಿ-20ಐನಲ್ಲಿ ಭಾರತದ ಭದ್ರಕೋಟೆ!

ಈಡನ್ ಗಾರ್ಡನ್ ಮೈದಾನ ಅಂತಾ ಬಂದಾಗ ಭಾರತದ ಪಾಲಿಗೆ ಟಿ-20ಐನಲ್ಲಿ ಭದ್ರಕೋಟೆಯೇ ಆಗಿದೆ. ಇಲ್ಲಿ ಒಟ್ಟು 8 ಟಿ20ಐಗಳಲ್ಲಿ ಭಾರತ ತಂಡವು 7 ಪಂದ್ಯಗಳಲ್ಲಿ ಗೆದ್ದಿದೆ. 2011ರಲ್ಲಿ ಇಂಗ್ಲೆಂಡ್ ವಿರುದ್ಧ ಮಾತ್ರವೇ ಸೋತಿದ್ದಾರೆ. ಹಾಗೇ ವಿಂಡೀಸ್ ವಿರುದ್ಧವೂ ಭಾರತ ಟಿ-20ಐನಲ್ಲಿ 2022ರಲ್ಲಿ ಇದೇ ಮೈದಾನದಲ್ಲಿ 3 ಪಂದ್ಯಗಳನ್ನ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿ ಗೆದ್ದಿತ್ತು. ಇನ್ನು ಈ ಮೈದಾನದಲ್ಲಿ ಭಾರತದ ಪರ ಸೂರ್ಯಕುಮಾರ್ ಯಾದವ್ ಮತ್ತು ಅಕ್ಷರ್ ಪಟೇಲ್ ರೆಕಾರ್ಡ್ಸ್​ ಕೂಡ ಅತ್ಯದ್ಭುತವಾಗಿದೆ. ಆದ್ರೆ ಈಡನ್ ಗಾರ್ಡನ್ ಮೈದಾನ ಅಂತಾ ಬಂದ್ರೆ 1996ರ ವಿಶ್ವಕಪ್​ ಸೆಮಿಫೈನಲ್ ಪಂದ್ಯ ಇಂದಿಗೂ ಭಾರತೀಯ ಕ್ರಿಕೆಟ್ ಪಾಲಿಗೆ ಮರೆಯಲಾಗದ ದಿನವಾಗಿದೆ. ಇದೇ ಮೈದಾನದಲ್ಲಿ ಆವತ್ತು ಅಭಿಮಾನಿಗಳ ತಾಳ್ಮೆಯ ಕಟ್ಟೆ ಒಡೆದಿತ್ತು. ಬೆಂಕಿ ಹೊತ್ತಿ ಉರಿದಿತ್ತು.

ಭಾರತ ಕಳಪೆ ಪ್ರದರ್ಶನ.. ಅಭಿಮಾನಿಗಳ ಆಕ್ರೋಶ.. ಕಾಂಬ್ಳೆ ಕಣ್ಣೀರು!

1996ರ ವಿಲ್ಸ್ ವಿಶ್ವಕಪ್​ ಸೆಮಿಫೈನಲ್ ಪಂದ್ಯಕ್ಕಾಗಿ ಈಡನ್ ಗಾರ್ಡನ್ಸ್​​ನಲ್ಲಿ ಭಾರತ ಮತ್ತು ಲಂಕಾ ತಂಡಗಳು ಮುಖಾಮುಖಿಯಾಗಿದ್ವು. ಈ ಪಂದ್ಯಕ್ಕಾಗಿ ಅಭಿಮಾನಿಗಳ ಸಾಗರವೇ ಸೇರಿತ್ತು. ದುಬಾರಿ ಟಿಕೆಟ್ ಖರೀದಿಸಿ ಬಂದಿದ್ರು. 1 ಲಕ್ಷದ 10 ಸಾವಿರ ಜನ ಸೇರಿದ್ರು. ಭಾರತೀಯರ ಬೌಲಿಂಗ್ ವೇಳೆ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.  ಮೊದಲ ಬ್ಯಾಟಿಂಗ್ ಮಾಡಿದ ಲಂಕಾ 50 ಓವರ್​ಗಳಲ್ಲಿ 85 ವಿಕೆಟ್ ನಷ್ಟಕ್ಕೆ 251 ರನ್ ಸ್ಕೋರ್ ಮಾಡಿತ್ತು. ಆದ್ರೆ ಟಾರ್ಗೆಟ್ ಬೆನ್ನತ್ತಿದ ಭಾರತದ ಪರ ಸಚಿನ್ ಮಾತ್ರವೇ ಏಕಾಂಗಿಯಾಗಿ ಹೋರಾಡಿದ್ರು. ಓಪನರ್ ಆಗಿ ಕಣಕ್ಕಿಳಿದು 65 ರನ್ಸ್ ಗಳಿಸಿದ್ರು. ಸಂಜಯ್ ಮಂಜ್ರೇಕಪ್ 25, ವಿನೋದ್ ಕಾಂಬ್ಲಿ 10 ರನ್ ಅಷ್ಟೇ ಗಳಿಸಿದ್ದು. ನವಜೋತ್ ಸಿಧು 3, ಅಝರುದ್ದೀನ್ 0, ಜಾವಗಲ್ ಶ್ರೀನಾಥ್ 6 ರನ್ಸ್ ಅಷ್ಟೇ.. ಸಚಿನ್ ವಿಕೆಟ್ ಬಿದ್ಮೇಲೆ ಕಂಪ್ಳೀಟ್ ಕೊಲ್ಯಾಪ್ಸ್. 34ನೇ ಓವರ್ ವೇಳೆಗೆಲ್ಲಾ 120 ರನ್​ಗಳಿಗೆ 8 ವಿಕೆಟ್ ಬಿದ್ದಿತ್ತು. ಭಾರತ ತಂಡದ ಈ ಹೀನಾಯ ಪ್ರದರ್ಶನಕ್ಕೆ ಭಾರತೀಯ ಅಭಿಮಾನಿಗಳು ರೊಚ್ಚಿಗೆದ್ದಿದ್ರು. ಬಾಟಲಿಗಳನ್ನ ತೆಗೆದು ಕ್ರೀಡಾಂಗಣಕ್ಕೆ ಬಿಸಾಡ್ತಾರೆ. ಸ್ಟ್ಯಾಂಡ್​ಗಳಿಗೆ ಬೆಂಕಿ ಹಚ್ತಾರೆ. ಕ್ರೀಡಾಂಗಣ ರಣಾಂಗಣದಂತೆ ಆಗಿತ್ತು. ಈ ವೇಳೆ ಆಟಗಾರರ ಜೀವಕ್ಕೂ ಅಪಾಯ ಇದ್ದ ಕಾರಣ ಆ ಪಂದ್ಯದ ರೆಫರಿ ಕ್ಲೈವ್ ಲಾಯ್ಡ್ ಪಂದ್ಯವನ್ನೇ ರದ್ದುಗೊಳಿಸಿದ್ರು. ಲಂಕಾ ವಿನ್ನರ್ ಅಂತಾ ಘೋಷಿಸಿದ್ರು. ಈ ವೇಳೆ ವಿನೋದ್ ಕಾಂಬ್ಳೆ ಕಣ್ಣೀರಿಟ್ಟಿದ್ರು. ಇದಾದ ನಂತ್ರವೇ ಪಂದ್ಯಗಳಿಗೆ ಬರೋ ಪ್ರೇಕ್ಷಕರಿಗೆ ಕಟ್ಟುನಿಟ್ಟಿನ ರೂಲ್ಸ್ ಮಾಡಲಾಯ್ತು. ಈಗ್ಲೂ ಕೂಡ ಈಡನ್ ಗಾರ್ಡನ್ ಮೈದಾನ ಅಂದ್ರೆ ಈ ಕರಾಳ ದಿನ ಅದೆಷ್ಟೋ ಅಭಿಮಾನಿಗಳನ್ನ ಕಾಡುತ್ತೆ. ಹೀಗಿದ್ರೂ ಇದೇ ಕ್ರೀಡಾಂಗಣದಲ್ಲಿ 1993ರಲ್ಲಿ ಹೀರೋ ಕಪ್ ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಸಚಿನ್ ತೆಂಡೂಲ್ಕರ್ ಕೊನೇ ಓವರ್​ನಲ್ಲಿ ಭಾರತವನ್ನ ಗೆಲ್ಲಿಸಿದ್ದೂ ಮರೆಯೋಕೆ ಆಗಲ್ಲ. ಈ ಪಂದ್ಯದಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಭಾರತ 195 ರನ್ಸ್ ಕಲೆ ಹಾಕ್ತಾರೆ. ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ ಆಲ್ಮೊಸ್ಟ್ ವಿನ್ನಿಂಗ್ ಹತ್ರ ಬಂದಿದ್ರು. 50ನೇ ಓವರ್​ನಲ್ಲಿ ಗೆಲುವಿಗೆ 5 ರನ್ ಬೇಕಿತ್ತು. ಅಚ್ಚರಿ ಏನಂದ್ರೆ ಆ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಕೈಗೆ ಕೊನೇ ಓವರ್ ಬೌಲಿಂಗ್​ಗೆ ಬಾಲ್ ಕೊಡ್ತಾರೆ. ಅಲ್ಲೀವರೆಗೂ ಆ ಮ್ಯಾಚಲ್ಲಿ ಒಂದೇ ಒಂದು ಎಸೆತ ಕೂಡ ಹಾಕಿರಲಿಲ್ಲ. ಹೀಗಿದ್ರೂ ಕೊನೇ ಓವರ್​ನಲ್ಲಿ ಜಸ್ಟ್ 3 ರನ್ ಕೊಟ್ಟು 2 ರನ್​ನಿಂದ ಸೆಮಿಫೈನಲ್ ಗೆಲ್ತಾರೆ. ಸಚಿನ್ ಈಗ್ಲೂ ಕೂಡ ಈ ಪಂದ್ಯವನ್ನ ಅನ್ ಬಿಲಿವಬಲ್ ಹೈಲೆಟ್ಸ್ ಎಂದಿದ್ದಾರೆ. ಹೀಗೆ ಈಡನ್ ಗಾರ್ಡನ್ಸ್ ಮೈದಾನ ಭಾರತೀಯರ ಪಾಲಿಗೆ ತೀರಾ ಎಮೋಷನಲ್ ಮೈದಾನವೂ ಆಗಿದೆ. ಈಗ ಇಂಥದ್ದೇ ಒಂದು ಸಿಚುಯೇಷನ್ ಕ್ರಿಯೇಟ್ ಆಗಿದೆ. ಭಾರತ ಗೆದ್ರೆ ಸೆಮೀಸ್ ಟಿಕೆಟ್ ಇಲ್ದಿದ್ರೆ ಔಟ್ ಅನ್ನೋ ಸ್ಟೇಜಲ್ಲಿದೆ. ಅತ್ತ ವಿಂಡೀಸ್ ಪಡೆ ಆಡಿದ್ರೆ ಬೆಸ್ಟ್ ಇಲ್ದಿದ್ರೆ ವರ್ಸ್ಟ್ ಅನ್ನೋ ಥರ ಇದ್ದಾರೆ. ಅವ್ರ ಫೀಲ್ಡಿಂಗ್ ಕೂಡ ಚೆನ್ನಾಗಿದೆ. ಹೀಗಾಗಿ ಈಡನ್ ಗಾರ್ಡನ್ಸ್ ಮೈದಾನದ ಲಕ್ ಯಾರಿಗೆ ಅನ್ನೋದು ಭಾನುವಾರ ಗೊತ್ತಾಗುತ್ತೆ.

Shantha Kumari

Leave a Reply

Your email address will not be published. Required fields are marked *