ಮಗನ ಯಶಸ್ಸು ನೋಡುವ ಮೊದಲೇ ಅನಾರೋಗ್ಯಕ್ಕೆ ಬಲಿಯಾದ ತಂದೆ – ಅಪ್ಪನ ಅಂತ್ಯಕ್ರಿಯೆ ಮುಗಿಸಿ ತಂಡಕ್ಕೆ ಮರಳಿದ ರಿಂಕು ಸಿಂಗ್

ಟೀಮ್ ಇಂಡಿಯಾ ಆಟಗಾರ ರಿಂಕು ಸಿಂಗ್ ತಂದೆಯ ಸಾವಿನ ನೋವಲ್ಲಿದ್ದಾರೆ. ರಿಂಕು ಸಿಂಗ್ ಈಗಷ್ಟೇ ಭಾರತದ ತಂಡದಲ್ಲಿ ಯಶಸ್ವೀ ಪ್ರದರ್ಶನ ನೀಡುತ್ತಿದ್ದರು. ಮಗ ಯಶಸ್ಸು ಸಾಧಿಸುವುದನ್ನು ಕಣ್ಣಾರೆ ಕಂಡು ಖುಷಿ ಪಡುವ ಸಮಯದಲ್ಲಿ ರಿಂಕು ತಂದೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು. ಇದೀಗ ರಿಂಕು ಸಿಂಗ್ ತಂದೆಯ ಅಂತಿಮ ವಿಧಿ ವಿಧಾನ ಮುಗಿಸಿ ಭಾರತ ತಂಡಕ್ಕೆ ವಾಪಸ್ ಆಗಿದ್ದಾರೆ.
ಇದನ್ನೂ ಓದಿ:ವೈಶಾಕ್ ವಿಜಯ್‌ಕುಮಾರ್ ಬೌಲಿಂಗ್‌ಗೆ ಜಮ್ಮು ಬ್ಯಾಟರ್ ಲೇವಡಿ – ಕನ್ನಡಿಗನ ಕೆಣಕಿ ದರ್ಪ ತೋರಿದ ಖಮ್ರಾನ್ ಇಕ್ಬಾಲ್
ಒಂದು ಕಡೆ ಟಿ20 ವಿಶ್ವಕಪ್‌ನಲ್ಲಿ ಆಡಲು ಸಿಕ್ಕಿರುವ ಅವಕಾಶ. ಮತ್ತೊಂದೆಡೆ ತಂದೆಯ ಸಾವಿನ ಶೋಕ. ಹೌದು ರಿಂಕು ಸಿಂಗ್ ಅವರ ಪರಿಸ್ಥಿತಿ ನಿಜಕ್ಕೂ ಮನಕಲಕುವಂತಿದೆ. ಆದರೂ ರಿಂಕು ಸಿಂಗ್ ಕರ್ತವ್ಯ ಪ್ರಜ್ಞೆಯಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ರಿಂಕು ಸಿಂಗ್ ಅವರ ತಂದೆ ಖಾನ್‌ಚಂದ್ ಸಿಂಗ್ (54 ವರ್ಷ) ಅವರು ಲಿವರ್ ಕ್ಯಾನ್ಸರ್‌ನಿಂದಾಗಿ ಫೆಬ್ರವರಿ 27, ಶುಕ್ರವಾರ ನಿಧನರಾದರು. ಹೀಗಾಗಿ ಶುಕ್ರವಾರವೇ ಅಲಿಗಢಕ್ಕೆ ತೆರಳಿದ ರಿಂಕು ಸಿಂಗ್ ತಮ್ಮ ತಂದೆಯ ಅಂತಿಮ ವಿಧಿವಿಧಾನಗಳನ್ನು ಪೂರೈಸಿದ್ದರು. ಫೆಬ್ರವರಿ 28 ಶನಿವಾರ ರಿಂಕು ಸಿಂಗ್ ತನ್ನ ತಂಡಕ್ಕೆ ಮರಳಿದ್ದಾರೆ.
ರಿಂಕು ಸಿಂಗ್ ಕೋಲ್ಕೊತ್ತಾ ಈಡನ್ ಗಾರ್ಡನ್ಸ್‌ನಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ. ಜೊತೆಗೆ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ರಿಂಕು ಸಿಂಗ್ ಅವರ ವೈಯಕ್ತಿಕ ನಷ್ಟದ ಹೊರತಾಗಿಯೂ, ಟೂರ್ನಿಯ ಅಂತಿಮ ಹಂತದಲ್ಲಿ ಅವರ ಫಿನಿಶಿಂಗ್ ಸಾಮರ್ಥ್ಯವು ಭಾರತ ತಂಡಕ್ಕೆ ಬಹಳ ಮುಖ್ಯವಾಗಿದೆ. ಅದರಲ್ಲೂ ಭಾರತ ತಂಡವು ಕೊಲ್ಕತ್ತಾದಲ್ಲಿ ಪಂದ್ಯವಾಡುತ್ತಿರುವುದರಿಂದ ರಿಂಕು ಸಿಂಗ್ ಆಗಮನವು ಟೀಮ್ ಇಂಡಿಯಾ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ.

ನೋಡಿರಿ

