ನಾಯಿ ಹೆಸರಿಗೆ ಬಂತು ಮದುವೆ ಆಮಂತ್ರಣ! – ಚಿಕೋರಿಯನ್ನು ಮದುವೆಗೆ ಕರದಿದ್ದು ಯಾರು ಗೊತ್ತಾ?

ನಾಯಿ ಹೆಸರಿಗೆ ಬಂತು ಮದುವೆ ಆಮಂತ್ರಣ! – ಚಿಕೋರಿಯನ್ನು ಮದುವೆಗೆ ಕರದಿದ್ದು ಯಾರು ಗೊತ್ತಾ?

ಸಾಮಾನ್ಯವಾಗಿ ಮದುವೆ ಇದ್ರೆ ಸಂಬಂಧಿಕರಿಗೆ, ಸ್ನೇಹಿತರಿಗೆ ಇನ್ವಿಟೇಷನ್‌ ಕಾರ್ಡ್‌ ಕೊಡುತ್ತಾರೆ. ಇನ್ನೂ ಕೆಲವರು ಮನೆ ಯಜಮಾನನ ಅಡ್ರೆಸ್‌ಗೆ ಪೋಸ್ಟ್‌ ಮಾಡಿ ಬಿಡುತ್ತಾರೆ. ಆದ್ರೆ ಇಲ್ಲೊಂದು ನಾಯಿ ಹೆಸರಿಗೆ ಮದುವೆಯ ಇನ್ವಿಟೇಷನ್‌ ಕಾರ್ಡ್ ಬಂದಿದೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಉಸಿರಾಡುವುದು ಕಷ್ಟ.. ಕಷ್ಟ! – ಬೆಂಗಳೂರು, ಬೆಳಗಾವಿಯ ವಾಯುಗುಣಮಟ್ಟ ಕಳಪೆ!

ಪಶು ವೈದ್ಯರೊಬ್ಬರು ಮಾಲಿಕರ ಹೆಸರಿನ ಬದಲು ನಾಯಿ ಹೆಸರಿನಲ್ಲಿ ಇನ್ವಟೇಶನ್ ಕಾರ್ಡ್ ನೀಡಿದ್ದಾರೆ. ಇದ್ರ ಫೋಟೋವನ್ನು ಮಹಿಳೆಯೊಬ್ಬರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಪಶುವೈದ್ಯರು  ತಮ್ಮ ಮಗಳ ವಿವಾಹ ಆಮಂತ್ರಣ ಪತ್ರಿಕೆಯನ್ನು ನಮ್ಮ ನಾಯಿಯ ಹೆಸರಿನಲ್ಲಿ ಕಳುಹಿಸಿದ್ದಾರೆ. ಇದು ನನಗೆ ಇಷ್ಟವಾಯ್ತು ಅಂತ ಶೀರ್ಷಿಕೆ ಹಾಕಿದ್ದಾರೆ.

@Sunidiee ಹೆಸರಿನ ಎಕ್ಸ್ ಖಾತೆಯಲ್ಲಿ ಇನ್ವಟೇಶನ್ ಕಾರ್ಡ್ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಪಶು ವೈದ್ಯರ ಮಗಳ ಮದುವೆ ಇನ್ವಟೇಶನ್ ಕಾರ್ಡ್ ಇದು. ಇದ್ರಲ್ಲಿ ಮನೆ ಮಾಲಿಕರ ಹೆಸರಿನ ಬದಲು ಮನೆಯಲ್ಲಿರುವ ಸಾಕು ನಾಯಿ ಹೆಸರನ್ನು ಹಾಕಲಾಗಿದೆ. ನಾಯಿ ಹೆಸರು ಎದ್ದು ಕಾಣ್ತಿದೆ. ಕನ್ನಡದಲ್ಲಿ ಇನ್ವಿಟೇಷನ್ ಇದೆ. ಶ್ರೀಮತಿ / ಶ್ರೀ ಮುಂದೆ ಮಿಸ್ಟರ್ ಚಿಕೋರಿ ಮತ್ತು ಕುಟುಂಬದವರು ಎಂದು ಬರೆಯಲಾಗಿದೆ. ಅದ್ರ ಕೆಳಗೆ, ಸ್ನೇಹ ಸಂಬಂಧಗಳಲ್ಲಿ ಪ್ರೀತಿಯ ಮಾತಲ್ಲಿ ಮಮತೆಯ ಮಡಿಲಲ್ಲಿ ಎಲ್ಲಾರೂ ಒಂದಾಗಿ ಸೇರೋಣ ಬನ್ನಿ ಮದುವೆಯ ಮನೆಯಲ್ಲಿ ಅಂತ ಬರೆಯಲಾಗಿದೆ.

ಸದ್ಯ ಈ ಇನ್ವಿಟೇಷನ್‌ ಕಾರ್ಡ್‌ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅನೇಕರು ಈ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ. ಇದು ಮುದ್ದಾದ ಕರೆಯೋಲೆ ಅಂತ ಕಮೆಂಟ್ ಮಾಡಿದ್ದಾರೆ.  ಮತ್ತೊಬ್ಬರು ಪಶುವೈದ್ಯರು ನನ್ನ ಸಾಕುಪ್ರಾಣಿಯನ್ನು ಪಶುವೈದ್ಯಕೀಯ ಚಿಕಿತ್ಸಾಲಯದ ಉದ್ಘಾಟನೆಗೆ ಆಹ್ವಾನಿಸಿದ್ದರು. ಸಾಕುಪ್ರಾಣಿ ಚಲಿಸುತ್ತಿರಲಿಲ್ಲ, ಅದನ್ನು ಒಂಟಿಯಾಗಿ ಬಿಡಲಾಗಲಿಲ್ಲ, ಹಾಗಾಗಿ ಅದಕ್ಕೆ ಪ್ರತ್ಯೇಕ ರೂಮಿನ ವ್ಯವಸ್ಥೆ ಮಾಡಲಾಗಿತ್ತು ಎಂದು ಫೋಟೋ ಹಾಕಿ ತಮ್ಮ ಪ್ರೀತಿ ತೋರಿಸಿದ್ದಾರೆ.

Shwetha M

Leave a Reply

Your email address will not be published. Required fields are marked *