ಬೆಂಗಳೂರಿನಲ್ಲಿ ಉಸಿರಾಡುವುದು ಕಷ್ಟ.. ಕಷ್ಟ! – ಬೆಂಗಳೂರು, ಬೆಳಗಾವಿಯ ವಾಯುಗುಣಮಟ್ಟ ಕಳಪೆ!

ಬೆಂಗಳೂರಿನಲ್ಲಿ ಉಸಿರಾಡುವುದು ಕಷ್ಟ.. ಕಷ್ಟ! – ಬೆಂಗಳೂರು, ಬೆಳಗಾವಿಯ ವಾಯುಗುಣಮಟ್ಟ ಕಳಪೆ!

ರಾಜ್ಯದಲ್ಲಿ ಹಲವು ಭಾಗಗಳಲ್ಲಿ ದಿನದಿಂದ ದಿನಕ್ಕೆ ವಾಯುಗುಣಮಟ್ಟ ತೀರಾ ಕಳಪೆಯಾಗ್ತಿದೆ. ಇನ್ಮುಂದೆ ಉಸಿರಾಡುವುದು ಕಷ್ಟ ಕಷ್ಟ ಅನ್ನುವಂತಾಗಿದೆ. ಇದೀಗ ಬೆಂಗಳೂರು, ಬೆಳಗಾವಿ, ಕಲಬುರ್ಗಿ ಸೇರಿದಂತೆ ವಿವಿಧೆಡೆ ಗಾಳಿಯ ಗುಣಮಟ್ಟ ನೆಲಕಚ್ಚಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣ ಹಿಂದಕ್ಕೆ ಪಡೆಯಲು ಒತ್ತಾಯ! –  ಚಿತ್ತಾಪುರದಲ್ಲಿ ಪ್ರತಿಭಟನೆ

ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಬೆಳಗಾವಿ, ಕಲಬುರ್ಗಿ ಸೇರಿದಂತೆ ವಿವಿಧೆಡೆ ಗಾಳಿಯ ಗುಣಮಟ್ಟ ನೆಲಕಚ್ಚಿದೆ. ಇಂದು ಬೆಂಗಳೂರಿನ ಏರ್ ಕ್ವಾಲಿಟಿ 172ಕ್ಕೆ ತಲುಪಿದೆ. ಹಲವು ದಿನಗಳಿಂದ ವಿಪರೀತ ಏರಿಕೆ ಕಾಣುತ್ತಿರುವ ಬೆಳಗಾವಿಯ ಏರ್ ಕ್ವಾಲಿಟಿ ಇಂದು 156 ಆಗಿದ್ದು, 200ರ ಗಡಿ ತಲುಪಿರುವುದು ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ

ಬೆಂಗಳೂರು –172

ಮಂಗಳೂರು-106

ಮೈಸೂರು –143

ಬೆಳಗಾವಿ – 156

ಕಲಬುರ್ಗಿ-126

ಶಿವಮೊಗ್ಗ – 85

ಬಳ್ಳಾರಿ – 154

ಹುಬ್ಬಳ್ಳಿ- 132

ಉಡುಪಿ –100

ವಿಜಯಪುರ –126

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

Shwetha M

Leave a Reply

Your email address will not be published. Required fields are marked *