ಅಮೃತಧಾರೆಯಲ್ಲಿ ಅರಳಿದ ಪ್ರೇಮಕ್ಕೆ ನಿಶ್ಚಿತಾರ್ಥದ ಮುದ್ರೆ – ರಾಣವ್ ರಾಧಾ ಎಂಗೇಜ್ಮೆಂಟ್

ಅಮೃತಧಾರೆಯಲ್ಲಿ ಅರಳಿದ ಪ್ರೇಮಕ್ಕೆ ನಿಶ್ಚಿತಾರ್ಥದ ಮುದ್ರೆ – ರಾಣವ್ ರಾಧಾ ಎಂಗೇಜ್ಮೆಂಟ್

ಅಮೃತಧಾರೆ ಖ್ಯಾತಿಯ ನಟ ಜೈದೇವ್ ಅಂದರೆ ರಾಣವ್ ಗೌಡ ಮತ್ತು ಭಾರ್ಗವಿ ಎಲ್ಎಲ್ ಬಿ ನಟಿ ಭಾರ್ಗವಿ ಅಂದರೆ ರಾಧಾ ಭಗವತಿ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ತಿಳಿಸಿದ್ದಾರೆ. ರಾಣವ್ ಮತ್ತು ರಾಧಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಪ್ರೀತಿ ಕಲಿಸಿದ ವಿಜಯ್ ಬಗ್ಗೆ ಪುಸ್ತಕ ಬರೆಯಬಲ್ಲೆ – ಬೆಸ್ಟ್ ಫ್ರೆಂಡ್ ಈಗ ಹೆಂಡತಿ- ಭಾವುಕ ಸಾಲುಗಳನ್ನು ಹಂಚಿಕೊಂಡ ವಿರೋಶ್

ಕಿರುತೆರೆಯ ಸ್ಟಾರ್ ಜೋಡಿ ತಮ್ಮ ಪ್ರೀತಿಯನ್ನು ಅಪ್ಪಿಕೊಂಡು ಒಪ್ಪಿಕೊಂಡು ಈಗ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಹೌದು. ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್ ಪಾತ್ರಧಾರಿ ರಾಣವ್ ಗೌಡ ಮತ್ತು ಅದೇ ಸೀರಿಯಲ್‌ನಲ್ಲಿ ಹಿಂದೆ ಮಲ್ಲಿ ಪಾತ್ರ ಮಾಡುತ್ತಿದ್ದ ರಾಧಾ ಭಗವತಿ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ರಾಧಾ ಭಗವತಿ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನಲ್ಲಿ ನಾಯಕಿ ನಟಿಯಾಗಿ ನಟಿಸುತ್ತಿದ್ದಾರೆ. ಇನ್ನು ರಾಣವ್ ಮತ್ತು ರಾಧಾ ನಡುವೆ ಪ್ರೀತಿ ಚಿಗುರಿದ್ದು ಅಮೃತಧಾರೆ ಧಾರಾವಾಹಿಯ ಚಿತ್ರೀಕರಣದ ಸಮಯದಲ್ಲಿ.  ಧಾರಾವಾಹಿಯ ಸೆಟ್‌ನಲ್ಲಿ ಇವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಆಗ ರಾಧಾ ಅವರು ಮಲ್ಲಿ ಪಾತ್ರ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ರಾಧಾ ಆ ಧಾರಾವಾಹಿಯಿಂದ ಹೊರಬಂದಿದ್ದರು. ಆದರೆ,  ರಾಣವ್ ಮತ್ತು ರಾಧಾ ನಡುವೆ ಪ್ರೀತಿ ಗಟ್ಟಿಯಾಗಿತ್ತು.ಇದೀಗ ರಾಧಾ ಮತ್ತು ರಾಣವ್ ಫೈನಲಿ ಎಂದು ಬರೆದು ನಿಶ್ಚಿತಾರ್ಥದ ಫೋಟೋ ಹಂಚಿಕೊಂಡಿದ್ದಾರೆ.

ರಾಣವ್ ಗೌಡ ಮತ್ತು ರಾಧಾ ಭಗವತಿ ಇಬ್ಬರೂ ಬೇರೆ ಬೇರೆ ಚಾನೆಲ್​ ಅಲ್ಲಿ ಕೆಲಸ ಮಾಡುವವರು. ಝೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಪಾತ್ರ ಫೇಮಸ್ ಆಗಿದೆ.  ಇನ್ನು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾರ್ಗವಿ ಎಲ್​​ಎಲ್​​ಬಿ ಪಾತ್ರದಲ್ಲಿ ರಾಧಾ ಭಗವತಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಇವರು ಹೊಸ ಬಾಳಿಗೆ ಕಾಲಿಡಲು ರೆಡಿ ಆದ ವಿಷಯ ಅಭಿಮಾನಿಗಳಿಗೆ ಖುಷಿ ತಂದಿದೆ. ತೆರೆ ಮೇಲಿನ ಜೋಡಿ ರಿಯಲ್ ಲೈಫ್‌ನಲ್ಲಿ ಒಂದಾಗುತ್ತಿರುವುದು ಖುಷಿಯ ವಿಚಾರವೂ ಹೌದು.

Sulekha