ನಟಿ ಜೊತೆ ವಿಜಯ್ ಅನೈತಿಕ ಸಂಬಂಧ!‌ – ಡಿವೋರ್ಸ್‌ ಅರ್ಜಿಯಲ್ಲಿ ಸಂಗೀತಾ ಸಾಲು ಸಾಲು ಆರೋಪ!

ನಟಿ ಜೊತೆ ವಿಜಯ್ ಅನೈತಿಕ ಸಂಬಂಧ!‌ – ಡಿವೋರ್ಸ್‌ ಅರ್ಜಿಯಲ್ಲಿ ಸಂಗೀತಾ ಸಾಲು ಸಾಲು ಆರೋಪ!

ನಟ ದಳಪತಿ ವಿಜಯ್ ನಟನೆಗೆ ಬ್ರೇಕ್ ಕೊಟ್ಟು ಪೂರ್ತಿಯಾಗಿ ರಾಜಕೀಯದಲ್ಲಿ ತಮ್ಮನು ತಾವು ತೊಡಗಿಸಿಕೊಂಡಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಸಾಲು ಸಾಲು ಸಂಕಷ್ಟ ಎದುರಾಗ್ತಿದೆ. ಇದೀಗ ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸೋರ್ನಲಿಂಗಂ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಡಿವೋರ್ಸ್‌ ಬೆನ್ನಲ್ಲೇ ವಿಜಯ್‌ ಜೊತೆ ನಟಿಯೊಬ್ಬರ ಹೆಸರು ತಳುಕುಹಾಕಿಕೊಂಡಿದೆ.

ಇದನ್ನೂ ಓದಿ: ವಿಜಯ್‌ ದಳಪತಿ ದಾಂಪತ್ಯದಲ್ಲಿ ಬಿರುಕು! – ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ!

ವಿಜಯ್‌ ದಳಪತಿ ಹಾಗೂ ಸಂಗೀತ ಮದುವೆಯಾಗಿ 27 ವರ್ಷಗಳಾಗಿವೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಷ್ಟು ವರ್ಷಗಳ ಕಾಲ ಒಟ್ಟಿಗೆ ಇದ್ದ ಜೋಡಿ ಈಗ ದೂರವಾಗ್ತಿದ್ದಾರೆ. ಇದಕ್ಕೆ ಕಾರಣ ಈ ನಟಿ ಎಂಬ ಸುದ್ದಿ ಸದ್ದು ಮಾಡ್ತಿದೆ.

ಕಳೆದ ಎರಡು ವರ್ಷಗಳಿಂದ ವಿಜಯ್‌ ಹಾಗೂ ಸಂಗೀತಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು, ಆದರೆ ವಿಜಯ್ ಅಥವಾ ಸಂಗೀತಾ ಇಬ್ಬರೂ ದೂರವಾಗಿರುವುದನ್ನು ಎಲ್ಲೂ ತೋರಿಸಿಕೊಂಡಿರಲಿಲ್ಲ. ಆದ್ರೀಗ ಸಂಗೀತಾ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ವಿಜಯ್ ನಟಿಯೊಬ್ಬರ ಜೊತೆ ಸಂಬಂಧದಲ್ಲಿದ್ದಾರೆ ಎಂದು ಅರ್ಜಿಯಲ್ಲಿ ಆರೋಪ ಮಾಡಿದ್ದಾರೆ.

ಈ ಹಿಂದಿನಿಂದಲೂ ಕೂಡ ವಿಜಯ್‌ ಅವರು ನಟಿಯೋರ್ವರ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಗಾಸಿಪ್‌ ಇತ್ತು. ಕೆಲ ದಿನಗಳ ಹಿಂದೆ‌ ತಮಿಳುನಾಡು ಬಿಜೆಪಿ ಮುಖ್ಯಸ್ಥ ಎನ್‌ ನಾಗೇಂದ್ರನ್ ಅವರು ಕೂಡ ನಟಿ ತ್ರಿಶಾ ಮನೆಯಿಂದ ವಿಜಯ್‌ ಅವರು ಹೊರಗಡೆ ಬಂದು, ಸಮಸ್ಯೆ ನೋಡಲಿ ಎಂದು ಕಾಮೆಂಟ್‌ ಮಾಡಿದ್ದರು.

Shwetha M