ಶನಿವಾರ ಆಂಜನೇಯ ಪೂಜೆ ಮಾಡಲು ಸೂಕ್ತ ಸಮಯ ಯಾವುದು?

ಶನಿವಾರ ಆಂಜನೇಯ ಪೂಜೆ ಮಾಡಲು ಸೂಕ್ತ ಸಮಯ ಯಾವುದು?

ಶನಿವಾರದಂದು ಆಂಜನೇಯ ಸ್ವಾಮಿ ಆರಾಧನೆ ಮಾಡುವಾಗ, ಕೆಲ ಮಂತ್ರಗಳನ್ನು ಜಪಿಸುವುದು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ. ಕೇವಲ ಪೂಜೆ ಮಾಡುವುದಷ್ಟೇ ಅಲ್ಲ, ಭಕ್ತಿಯಿಂದ ಮಂತ್ರೋಚ್ಚಾರಣೆ ಮಾಡಿದರೆ ಅದರ ಫಲ ಬಹುಪಟ್ಟು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಪೂಜೆ ಮಾಡಲು ಸೂಕ್ತ ಸಮಯ ಯಾವುದು? ಅನ್ನೋದ್ದನ್ನ ನೋಡೋಣ ಬನ್ನಿ.

ಮಹಿಳೆಯರು ಶನಿವಾರ ಹನುಮಂತನ ಪೂಜೆ ಮಾಡಬಹುದಾ? 

ಈ ಪ್ರಶ್ನೆ ಅನೇಕ ಭಕ್ತರ ಮನಸ್ಸಿನಲ್ಲಿ ಮೂಡುತ್ತದೆ. ಮಹಿಳೆಯರು ಹನುಮಂತನನ್ನು ಭಕ್ತಿಯಿಂದ ಪೂಜಿಸಬಹುದು. ಆದರೆ ಕೆಲವು ಆಚರಣೆಗಳ ಪ್ರಕಾರ ವಿಗ್ರಹವನ್ನು ಸ್ಪರ್ಶಿಸದೇ, ದೂರದಿಂದಲೇ ನಮಸ್ಕರಿಸಿ ಮಂತ್ರ–ಸ್ತೋತ್ರಗಳನ್ನು ಪಠಿಸುವುದು ಶ್ರೇಯಸ್ಕರವೆಂದು ಹೇಳಲಾಗುತ್ತದೆ. ಹನುಮಂತನ ಸನ್ನಿಧಿಯಲ್ಲಿ ಕುಳಿತು ಭಜನೆ, ರಾಮನಾಮ ಜಪ ಮಾಡುವುದು ಅತ್ಯಂತ ಶುಭಕರ.

ಪೂಜೆ ಮಾಡಲು ಸೂಕ್ತ ಸಮಯ ಯಾವುದು?

ಹನುಮಂತನ ಆರಾಧನೆಗೆ ಕಟ್ಟುನಿಟ್ಟಾದ ಸಮಯ ನಿಯಮವಿಲ್ಲ. ಆದರೆ ಶನಿವಾರದಂದು ಬ್ರಹ್ಮ ಮುಹೂರ್ತದಲ್ಲಿ ಅಥವಾ ಸೂರ್ಯಾಸ್ತದ ನಂತರ ಪೂಜೆ ಸಲ್ಲಿಸುವುದು ಮಂಗಳಕರವೆಂದು ನಂಬಿಕೆ. ಮಂಗಳವಾರವೂ ಸಹ ಹನುಮಂತನಿಗೆ ಪ್ರಿಯವಾದ ದಿನವಾಗಿದೆ.

ಹನುಮಂತನ ಅನುಗ್ರಹಕ್ಕಾಗಿ ವಿಶೇಷ ಕ್ರಮ

ಶನಿವಾರ 108 ವೀಳ್ಯದೆಲೆಗಳನ್ನು ತೆಗೆದು ಪ್ರತಿಯೊಂದರ ಮೇಲೂ “ರಾಮ” ಎಂಬ ನಾಮ ಬರೆಯಬೇಕು. ನಂತರ ಆ ಎಲೆಗಳನ್ನು ಹಾರವಾಗಿ ಸಿದ್ಧಮಾಡಿ “ಓಂ ಹಂ ಹನುಮತೇ ನಮಃ” ಮಂತ್ರವನ್ನು 108 ಬಾರಿ ಜಪಿಸಿ ಅರ್ಪಿಸಬೇಕು. ಈ ವಿಧಾನ ಭಕ್ತರ ಇಚ್ಛೆಗಳು ಈಡೇರಲು ಸಹಾಯಕವೆಂದು ಪರಿಗಣಿಸಲಾಗಿದೆ.

ಶನಿವಾರ ಪಠಿಸಬೇಕಾದ ಚಾಲೀಸಾ

ಶನಿವಾರ ಮತ್ತು ಮಂಗಳವಾರದಂದು ಹನುಮಾನ್ ಚಾಲೀಸಾ ಪಠಿಸುವುದು ವಿಶೇಷ ಫಲಪ್ರದ. ಚಾಲೀಸಾ ಪಠಿಸುವ ಮೊದಲು ರಾಮನಾಮ ಜಪ ಮಾಡುವುದು ಶ್ರೇಷ್ಠ. ಮಲ್ಲಿಗೆ ಎಣ್ಣೆಯಲ್ಲಿ ಸಿಂಧೂರ ಬೆರೆಸಿ ಹನುಮಂತನಿಗೆ ಅರ್ಪಿಸುವುದೂ ಭಕ್ತಿಪೂರ್ವಕ ಆಚರಣೆಗಳಲ್ಲಿ ಒಂದು.
ಈ ರೀತಿಯಾಗಿ ಶನಿವಾರದಂದು ಮಂತ್ರ ಜಪ, ಚಾಲೀಸಾ ಪಠಣ ಮತ್ತು ಪ್ರಿಯ ವಸ್ತುಗಳ ಅರ್ಪಣೆಯಿಂದ ಹನುಮಂತನು ಭಕ್ತರ ಮೇಲೆ ಕೃಪೆ ತೋರಿ, ಅವರು ಬೇಡುವ ವರಗಳನ್ನು ಅನುಗ್ರಹಿಸುತ್ತಾನೆ ಎಂಬುದು ಭಕ್ತರ ದೃಢ ನಂಬಿಕೆ.

Kishor KV

Leave a Reply

Your email address will not be published. Required fields are marked *