ವಿಜಯ್‌ ದಳಪತಿ ದಾಂಪತ್ಯದಲ್ಲಿ ಬಿರುಕು! – ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ!

ವಿಜಯ್‌ ದಳಪತಿ ದಾಂಪತ್ಯದಲ್ಲಿ ಬಿರುಕು! – ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ!

ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್‌ ದಳಪತಿ ಚುನಾವಣೆಗೆ ಸ್ಪರ್ಧಿಸಲು ಸಿದ್ದವಾಗ್ತಿದ್ದಂತೆ ಸಾಲು ಸಾಲು ಸಂಕಷ್ಟ ಎದುರಾಗ್ತಿದೆ. ವಿಜಯ್‌ಗೆ ಪತ್ನಿ ಸಂಗೀತಾ ಶಾಕ್ ಕೊಟ್ಟಿದ್ದಾರೆ. ವಿಜಯ್‌ ಪತ್ನಿ ಸಂಗೀತಾ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: 66 ಪೈಸೆ ಮರುಪಾವತಿಸದೆ ಉಳಿಸಿಕೊಂಡ ಬ್ಯಾಂಕ್! – ಕಾಟಕೊಟ್ಟ ಸಿಬ್ಬಂದಿ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ ಗ್ರಾಹಕ!

ವಿಜಯ್‌ ದಳಪತಿಗೆ ಅವರ ಪತ್ನಿ ಶಾಕ್‌ ಕೊಟ್ಟಿದ್ದಾರೆ. ವಿಚ್ಛೇದನಕ್ಕಾಗಿ ಪತ್ನಿ ಸಂಗೀತಾ ಕೋರ್ಟ್‌ ಮೊರೆ ಹೋಗಿದ್ದಾರೆ. ಈಗಾಗಲೇ ಸಂಗೀತಾ ಚೆಂಗಲ್ಪಟ್ಟು ನ್ಯಾಯಾಲಯದ ಮೆಟ್ಟಿಲೇರಿದ್ದು, ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಡಿವೋರ್ಸ್‌ ನೀಡುತ್ತಿರೋದೇಕೆ?

ವಿಜಯ್ ನಟಿಯೊಬ್ಬರ ಜೊತೆ ಸಂಬಂಧದಲ್ಲಿದ್ದಾರೆ ಎಂದು ಅರ್ಜಿಯಲ್ಲಿ ಆರೋಪ ಮಾಡಲಾಗಿದೆ. ಈ ಹಿಂದಿನಿಂದಲೂ ಕೂಡ ವಿಜಯ್‌ ಅವರು ನಟಿಯೋರ್ವರ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಗಾಸಿಪ್‌ ಇತ್ತು. ಕೆಲ ದಿನಗಳ ಹಿಂದೆ‌ ತಮಿಳುನಾಡು ಬಿಜೆಪಿ ಮುಖ್ಯಸ್ಥ ಎನ್‌ ನಾಗೇಂದ್ರನ್ ಅವರು ಕೂಡ ನಟಿ ತ್ರಿಶಾ ಮನೆಯಿಂದ ವಿಜಯ್‌ ಅವರು ಹೊರಗಡೆ ಬಂದು, ಸಮಸ್ಯೆ ನೋಡಲಿ ಎಂದು ಕಾಮೆಂಟ್‌ ಮಾಡಿದ್ದರು. ಆಮೇಲೆ ಪಶ್ಚಾತ್ತಾಪಪಟ್ಟಿದ್ದರು.

ವಿಜಯ್‌ ಪತ್ನಿ ಸಂಗೀತಾ ಯಾರು?

ಸಂಗೀತಾ ಲಂಡನ್ ಮೂಲದ ತಮಿಳು ಮಹಿಳೆ. ಮೂಲತಃ ಶ್ರೀಲಂಕಾದವರಾದ, ಲಂಡನ್‌ನಲ್ಲಿ ನೆಲೆಸಿದ್ದರು. ಅವರು ವಿಜಯ್ ಅವರ ಅಪಾರ ಅಭಿಮಾನಿಯಾಗಿದ್ದರು ಮತ್ತು ನಂತರ ಅವರ ಜೀವನ ಸಂಗಾತಿಯಾದರು. ಅವರ ಪ್ರೀತಿ ಮತ್ತು ವೈವಾಹಿಕ ಜೀವನವು ಸಿನಿಮೀಯ ಕಥೆಯಷ್ಟೇ ಆಸಕ್ತಿದಾಯಕವಾಗಿತ್ತು.

ಸಂಗೀತಾ ಲಂಡನ್‌ನಲ್ಲಿ ಹುಟ್ಟಿ ಬೆಳೆದರು. ಅವರ ತಂದೆ ಸೊನ್ನಲಿಂಗಂ ಲಂಡನ್‌ನಲ್ಲಿ ದೊಡ್ಡ ಉದ್ಯಮಿಯಾಗಿದ್ದರು. 1996 ರಲ್ಲಿ, ‘ಪೂವೆ ಉನಕ್ಕ’ ಚಿತ್ರವು ಭಾರಿ ಯಶಸ್ಸನ್ನು ಕಂಡಿತು. ಆ ಸಮಯದಲ್ಲಿ, ಸಂಗೀತಾ ವಿಜಯ್ ಅವರನ್ನು ಮೆಚ್ಚಿಸಲು ಲಂಡನ್‌ನಿಂದ ಚೆನ್ನೈಗೆ ಬಂದಿದ್ದರು. ಸಂಗೀತಾ ಸೆಟ್‌ನಲ್ಲಿ ವಿಜಯ್ ಅವರನ್ನು ಭೇಟಿಯಾಗಿ ತನ್ನನ್ನು ಅಭಿಮಾನಿ ಎಂದು ಪರಿಚಯಿಸಿಕೊಂಡರು.

Shwetha M