ಪಬ್ಲಿಕ್ ಪ್ಲೇಸ್‌ನಲ್ಲಿ ಪಾಂಡ್ಯ ರೊಮ್ಯಾನ್ಸ್ – ಕಿಸ್ ಕೊಟ್ಟು ಕೊಟ್ಟು.. ಹಾರ್ದಿಕ್ ಟ್ರೋಲ್
ನತಾಶಾಗೆ ಉರ್ಸೋಕೆ ಇದೆಲ್ಲಾ ಬೇಕಾ?

ಪಬ್ಲಿಕ್ ಪ್ಲೇಸ್‌ನಲ್ಲಿ ಪಾಂಡ್ಯ ರೊಮ್ಯಾನ್ಸ್  –  ಕಿಸ್ ಕೊಟ್ಟು ಕೊಟ್ಟು.. ಹಾರ್ದಿಕ್ ಟ್ರೋಲ್ನತಾಶಾಗೆ ಉರ್ಸೋಕೆ ಇದೆಲ್ಲಾ ಬೇಕಾ?

ಲವ್ ಮೂಡ್ ಕಂಪ್ಲೀಟ್‌ ಲವ್ ಮೂಡ್‌.. ಹಾರ್ದಿಕ್ ಪಾಂಡ್ಯ ಮಹಿಕಾ ಶರ್ಮಾ ಲವ್‌ನಲ್ಲಿ ಮುಳುಗಿ ತಮ್ಮನ್ನೇ ತಾವು ಮರೆತು ಹೋಗಿದ್ದಾರೆ.   ನತಾಶಾ ಜೊತೆ ಡಿವೋರ್ಸ್‌ ಆದ ಪಾಂಡ್ಯಗೆ ಸಿಕ್ಕಿದ್ದೇ ಮಹಿಕಾ ಶರ್ಮಾ.. ಇವರಿಬ್ಬರ ಲವ್ ಯಾವ ಮಟ್ಟಿಗೆ ಇದೇ ಅಂದ್ರೆ ಹೋದಲ್ಲಿ ಬಂದಲ್ಲಿ ಫುಲ್ ರೋಮ್ಯಾನ್ಸ್ ಮೂಡ್‌ನಲ್ಲೇ ಮುಳುಗಿ ಹೋಗ್ತಿದ್ದಾರೆ.. ನತಾಶಾಗೆ ಉರ್ಸೋಕೆ ಈ ರೇಂಜ್‌ಗೆ ಪಬ್ಲಿಕ್ ಪ್ಲೇಸ್‌ನಲ್ಲಿ ರೋಮ್ಯಾನ್ಸ್ ಮಾಡ್ತಾ ಇದ್ದಾರೋ ಗೊತ್ತಿಲ್ಲ.. ಬಟ್ ಅಣ್ಣ ನೆಕ್ಸ್ಟ್ ಲವೆಲ್‌ನಲ್ಲಿ ಉರ್ಸೋಕೆ ಹೋಗ್ತಾ ಇದ್ದಾನೆ.. ಇದೇ ಈಗ ಟ್ರೋಲ್ ಆಗ್ತಿದೆ.  ನಾಲ್ಕು ಕೋಣೆಯಲ್ಲಿ ಮಾಡೋದೆಲ್ಲಾ ಟಿ20ವಿಶ್ವಕಪ್‌ ನಡೆಯೋ ಸ್ಪೇಡಿಯಂನಲ್ಲಿ ಪಾಂಡ್ಯ ಮಾಡ್ತಿದ್ದಾರೆ.

ಇದನ್ನೂ ಓದಿ: ಸೀಮಂತದ ದಿನ ಹೆಂಡತಿಗೆ ಗಂಡನ ಸರ್‌ಪ್ರೈಸ್‌ – ಹೆಲಿಕಾಪ್ಟರ್‌ನಿಂದ ಹೂವಿನ ಸುರಿಮಳೆ

ಒಂದ್ಕಡೆ ಟಿ20 ವಿಶ್ವಕಪ್‌ ಸೆಮಿಗೆ ಹೋಗೋಕೆ ಟೀಮ್ ಇಂಡಿಯಾ ಸರ್ಕಸ್ ಮಾಡ್ತಾ ಇದ್ರೆ, ಪಾಂಡ್ಯ ಮಾತ್ರ ವಿಶ್ವಕಪ್‌ ನಮ್ಗೆ ಹನಿಮೂನ್ ಇದ್ದಂತೆ ಅಂತ  ಮಹಿಕಾ ಶರ್ಮಾ  ಜೊತೆ ಫುಲ್‌ ಲವ್​ ಮೂಡ್​​​ನಲ್ಲಿದ್ದಾರೆ. ಹೋಟೆಲ್‌ಗೆ ಹೋದ್ರೂ ಬಿಡ್ತಿಲ್ಲ, ಪಿಚ್‌ಗೂ ಹೋದ್ರೂ ಬಿಡ್ತಿಲ್ಲ.. ಲವರ್ ಮಹಿಕಾ ಶರ್ಮಾ ಜೊತೆ ಫುಲ್ ಜಾಲಿ ಜಾಲಿ ಮಾಡುತ್ತಿದ್ದಾರೆ. ಪಬ್ಲಿಕ್ ಪ್ಲೇಸ್‌ನಲ್ಲೇ  ಕಿಸ್ ಮಾಡ್ತಿರೋದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಾರ್ದಿಕ್ ಪಾಂಡ್ಯ ನಡೆಯನ್ನ ನೋಡಿ ಫ್ಯಾನ್ಸ್ ಸಖತ್ ಮಜಾ ತಗೊಳ್ತಾ  ಟ್ರೋಲ್ ಮಾಡ್ತಿದ್ದಾರೆ.   ಪಾಂಡ್ಯರನ್ನ ಹನಿಮೂನ್‌ಗೆ ಕಳುಹಿಸುವ ಬದಲು ತಪ್ಪಾಗಿ ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಲಾಗಿದೆ ಎಂದು ಅಭಿಮಾನಿಗಳು ಟ್ರೋಲ್ ಮಾಡ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ, ಅವರು ವಿಮಾನ ನಿಲ್ದಾಣಕ್ಕೆ ಹೋಗುವಾಗ ತಮ್ಮ ಗೆಳತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಇದನ್ನ ಬಳಸಿಕೊಂಡು  ಸೋಷಿಯಲ್ ಮೀಡಿಯಾದಲ್ಲಿ ಕೆಲವು ಫ್ಯಾನ್ಸ್  ಟ್ರೋಲ್ ಮಾಡುತ್ತಿದ್ದಾರೆ. ಟೂರ್ನಿಯಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಉತ್ತಮ ಪ್ರದರ್ಶನ ತೋರಿ, ಉಳಿದ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರದಿರುವುದಕ್ಕೂ ಲಿಂಕ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ.  ಪಾಂಡ್ಯಾ ಕ್ರಿಕೆಟ್‌ನತ್ತ ಗಮನ ಹರಿಸುವ ಬದಲು, ಅವರು ತಮ್ಮ ಗೆಳತಿಯೊಂದಿಗೆ ಸರಸದಲ್ಲೇ ನಿರಂತರವಾಗುತ್ತಿದ್ದಾರೆಂದು  ಫ್ಯಾನ್ಸ್‌ ಕಿಡಿಕಾರುತ್ತಿದ್ದಾರೆ. ಮುಂದಿನ ಪಂದ್ಯಗಳಲ್ಲಾದರೂ ಗಂಭೀರವಾಗಿ ಆಡಬೇಕು ಎಂದು ಟಿಪ್ಸ್ ಕೊಡುತ್ತಿದ್ದಾರೆ.

ಇನ್ನೂ ಟೀಮ್ ಇಂಡಿಯಾ ಸೆಮಿಸ್ ತಲುಪಬೇಕಾದರೆ, ಭಾರತ ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಲೇಬೇಕು. ಗೆದ್ರೆ ಮಾತ್ರ ಸೆಮಿಫೈನಲ್‌ಗೆ ಭಾರತ ಎಂಟ್ರಿ ಕೊಡುತ್ತೆ..   ಹೀಗಾಗಿ ಪಾಂಡ್ಯ  ಈ ಟೈಂನಲ್ಲಿ ಲವ್‌ನಿಂದ ಸ್ವಲ್ಪ ಹೊರಬಂದು ತಂಡ ಗೆಲ್ಲೋ ಕಡೆ ಗಮನಹರಿಸಬೇಕಿದೆ. ವಿಶ್ವಕಪ್ ಗೆದ್ದ ಮೇಲೆ ಎಷ್ಟು ಬೇಕಾದ್ರೂ ಲವ್ ಮಾಡ್ಲಿ ಅಲ್ವಾ.

ಮೊನ್ನೆ ಮೊನ್ನೆ ಮಹಿತಾ ಶರ್ಮಾ ಬರ್ತ್‌ಡೇಗೆ ಪಾಂಡ್ಯ ಹಾಟ್ ಫೋಟೋವನ್ನೇ ಹಾಕಿ ವಿಶ್ ಮಾಡಿದ್ರು. ಇದ್ದನ್ನ ನೋಡಿದವರು ಇಷ್ಟೊಂದು ಹಾಟ್ ಫೋಟೋ ಹಾಕಿ ವಿಶ್ ಮಾಡಬೇಕಿತ್ತಾ ಅಂತ ಕೇಳಿದ್ರು. ಈಗ ಹೋದಲ್ಲಿ ಬಂದಲ್ಲಿ ಮಹಿಕಾ ಶರ್ಮಾಗೆ ಕಿಸ್‌ ಮಾಡ್ತಾ ಟ್ರೋಲ್ ಆಗ್ತಾ ಇದ್ದು, ಪಾಂಡ್ಯ ಲವ್‌ ನೆಕ್ಟ್‌ ಲೆವೆಲ್‌ನಲ್ಲಿ ತೋರಿಸುತ್ತಿದ್ದಾರೆ.

Kishor KV

Leave a Reply

Your email address will not be published. Required fields are marked *