ಹೋಳಿಯಂದೇ ರಕ್ತ ಚಂದ್ರಗ್ರಹಣ! 3 ರಾಶಿಗೆ ನಷ್ಟ.. ಯಾರಿಗೆಲ್ಲಾ ಗ್ರಹಚಾರ
ಹೋಳಿಯಂದೇ ರಕ್ತ ಚಂದ್ರಗ್ರಹಣ! 3 ರಾಶಿಗೆ ನಷ್ಟ.. ಯಾರಿಗೆಲ್ಲಾ ಗ್ರಹಚಾರ

ಈ ಸಲ ಹೋಳಿ ಹಬ್ಬದಂದೇ 2026ರ ಮೊದಲ ಚಂದ್ರಗ್ರಹಣ ಸಂಭವಿಸುತ್ತಿದೆ. ಸಾಕಷ್ಟು ಜನಕ್ಕೆ ಹೋಳಿ ಹಬ್ಬಂದಂದು ಚಂದ್ರಗ್ರಹಣ ಬಂದಿದೆ.. ಹೋಳಿ ಆಚರಿಸಬಹುದಾ? ಹೋಳಿ ಹಬ್ಬ ಮಾಡಬಹುದಾ ಅನ್ನೋ ಡೌಟ್ ಇದೆ. ಹಾಗೇ ಗ್ರಹಣ ಗ್ರಹಚಾರ ಇರುತ್ತಾ? ಯಾವ ರಾಶಿಯವರಿಗೆ ಗ್ರಹಣ ಎಫೆಕ್ಟ್ ಬೀಳುತ್ತೆ? ಯಾರಿಗೆ ಲಾಭ? ಯಾರಿಗೆ ನಷ್ಯ? ಅನ್ನೋದ್ದನ್ನ ನೋಡೋಣ ಬನ್ನಿ.
ಮಾರ್ಚ್ 3, 2026 ರಂದು ಹೋಳಿ ಹಬ್ಬದ ದಿನವೇ ಚಂದ್ರಗ್ರಹಣ ಸಂಭವಿಸುತ್ತಿದೆ. ಫಾಲ್ಗುಣ ಮಾಸದ ಪೂರ್ಣಿಮೆಯಂದು 20ರಿಂದ 25 ನಿಮಿಷಗಳ ಕಾಲ ಮಾತ್ರ ಭಾರತದಲ್ಲಿ ಗೋಚರಿಸಲಿದೆ. ರಾಜ್ಯದ್ಯಂತ ಚಂದ್ರೋದಯ ಸಮಯದಲ್ಲಿ ವ್ಯತ್ಯಾಸ ಇರುವುದರಿಂದ, ಗೋಚರಿಸುವ ಅವಧಿಯಲ್ಲೂ ಸ್ವಲ್ಪ ಬದಲಾವಣೆ ಸಾಧ್ಯತೆಯಿದೆ. ಶೇಷವಾಗಿ ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುವ ಸಾಧ್ಯತೆಯಿದೆ.ಇದು ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಇತರ ರಾಜ್ಯಗಳಲ್ಲಿಯೂ ಸ್ವಲ್ಪ ಮಟ್ಟಿಗೆ ಗೋಚರಿಸಬಹುದು. ಇನ್ನೂ ಭಾರತದ ಹೊರಗೆ, ಈ ಗ್ರಹಣವು ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾಕ್ ಮತ್ತು ಇರಾನ್‌ನಂತಹ ದೇಶಗಳಲ್ಲಿಯೂ ಗೋಚರಿಸಲಿದೆ.
ಹೋಳಿ ಆಚರಿಸಬಹುದಾ?
ಇನ್ನೂ ಸಾಕಷ್ಟು ಜನಕ್ಕೆ ಇರೋವ ದೊಡ್ಡ ಡೌಟ್ ಅಂದ್ರೆ ಹೋಳಿ ಆಚರಿಸಬುಹುದಾ ಅನ್ನೋದು. ಹಿಂದೂ ಕ್ಯಾಲೆಂಡರ್ ಪ್ರಕಾರ, ಚಂದ್ರಗ್ರಹಣ ಮಾರ್ಚ್ 3 ರಂದು ಮಧ್ಯಾಹ್ನದಿಂದ ಸಂಜೆಯವರೆಗೆ ಇರುತ್ತದೆ. ಹಾಗಾಗಿ ಬೆಳಿಗ್ಗೆ 11 ಗಂಟೆಯ ಮೊದಲು ಹೋಳಿ ಆಚರಿಸಬಹುದು ಅಂತ ಜ್ಯೋತಿಷ್ಯರು ಹೇಳಿದ್ದಾರೆ. ಇನ್ನೂ . ಚಂದ್ರಗ್ರಹಣದ ದಿನ ದೇವಾಲಯಗಳನ್ನು ಬೆಳಿಗ್ಗೆ 9 ಗಂಟೆಯೊಳಗೆ ಮುಚ್ಚಬೇಕು. ಸೂತಕ ಅವಧಿಯಲ್ಲಿ, ಪೂಜೆಗಳನ್ನು ಮಾಡುವುದು, ಪೂಜಿಸುವುದು, ವಿಗ್ರಹಗಳನ್ನು ಮುಟ್ಟುವುದು, ಹೊಸ ಕೆಲಸಗಳನ್ನು ಪ್ರಾರಂಭಿಸುವುದು ಮತ್ತು ಶುಭ ಕಾರ್ಯಗಳನ್ನು ಮಾಡಬಾರದು. ಅಷ್ಟೇ ಅಲ್ಲದೆ ಊಟ ಮಾಡಬಾರದು, ಪ್ರಯಾಣಿಸಬಾರದು ಅಥವಾ ದೇವಾಲಯಗಳಿಗೆ ಹೋಗಬಾರದು ಎಂದು ಸಹ ಹೇಳಲಾಗುತ್ತದೆ. ಗರ್ಭಿಣಿಯರು, ಚಿಕ್ಕ ಮಕ್ಕಳು ಮತ್ತು ರೋಗಿಗಳು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇದು ಜೋತಿಷ್ಯ ಶಾಸ್ತ್ರದ ಅಭಿಪ್ರಾಯವಾಗಿದ್ದು, ಅವರವರ ನಂಬಿಕೆಗೆ ಬಿಟ್ಟಿದ್ದು. ಇನ್ನೂ ಯಾವೆಲ್ಲಾ ರಾಶಿಗಳಿಗೆ ಎಫೆಕ್ಟ್ ಇದೆ ಅನ್ನೋದ್ದನ್ನ ನೋಡೋಣ.
ಕರ್ಕಾಟಕ
ಕಟಕ ರಾಶಿಯ ಅಧಿಪತಿ ಚಂದ್ರನಾಗಿರುವುದರಿಂದ, ಗ್ರಹಣದ ನೇರ ಪ್ರಭಾವ ಅವರ ಮೇಲಿರುತ್ತದೆ. ಗ್ರಹಣವು ನಿಮ್ಮ ಧನ ಭಾವದಲ್ಲಿ ಸಂಭವಿಸುತ್ತಿರುವುದರಿಂದ ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಅನಗತ್ಯ ಹೂಡಿಕೆ ಅಥವಾ ಹಣದ ವ್ಯವಹಾರ ಮಾಡಬೇಡಿ. ನೀವು ತೆಗೆದುಕೊಳ್ಳುವ ಸಡನ್ ನಿರ್ಧಾರಗಳು ನಷ್ಟ ತರಬಹುದು. ಮಾತಿನ ಮೇಲೆ ಹತೋಟಿ ಇರಲಿ. ಮಾನಸಿಕ ಶಾಂತಿಗಾಗಿ ದೀಪಾರಾಧನೆ ಅಥವಾ ಮಂತ್ರ ಪಠಣ ಉತ್ತಮ.
ಕನ್ಯಾ
ಕನ್ಯಾ ರಾಶಿಯವರಿಗೆ ಈ ಗ್ರಹಣವು ದ್ವಾದಶ ಭಾವದಲ್ಲಿ ಪ್ರಭಾವ ಬೀರಲಿದೆ. ಇದು ಖರ್ಚು ಮತ್ತು ನಷ್ಟದ ಸ್ಥಾನ. ಅನಿರೀಕ್ಷಿತ ಅಪಘಾತ ಅಥವಾ ಆರೋಗ್ಯ ಸಮಸ್ಯೆಗಳು ಕಾಡಬಹುದು. ಕೆಲಸದ ಸ್ಥಳದಲ್ಲಿ ರಾಜಕೀಯದಿಂದ ದೂರವಿದ್ದು, ಕಚೇರಿ ರಹಸ್ಯ ಹಂಚಿಕೊಳ್ಳಬೇಡಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಶಿವನ ಆರಾಧನೆ ಪ್ರಯೋಜನಕಾರಿ.
ಮೀನಾ
ಮೀನಾ ರಾಶಿಗೆ ಚಂದ್ರಗ್ರಹಣವು ಆರನೇ ಭಾವದಲ್ಲಿ ಸಂಭವಿಸುತ್ತಿದೆ. ಇದು ಶತ್ರು, ರೋಗ ಮತ್ತು ಸಂಘರ್ಷದ ಸ್ಥಾನ. ನಿಮ್ಮ ವಿರೋಧಿಗಳು ಸಕ್ರಿಯರಾಗಿ ಕೆಲಸಗಳಿಗೆ ಅಡ್ಡಿಪಡಿಸಬಹುದು. ಯಾರನ್ನೂ ಕಣ್ಣು ಮುಚ್ಚಿ ನಂಬಬೇಡಿ. ಆರ್ಥಿಕ ವಂಚನೆ ನಡೆಯುವ ಸಾಧ್ಯತೆಯಿರುವುದರಿಂದ, ದಾಖಲೆಗಳಿಗೆ ಸಹಿ ಮಾಡುವ ಮುನ್ನ ಸರಿಯಾಗಿ ಓದಿ. ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ.
ಕುಂಭ
ಕುಂಭ ರಾಶಿಯವರು ಈ ಅವಧಿಯಲ್ಲಿ ವಿಶೇಷವಾಗಿ ಜಾಗರೂಕರಾಗಿರಬೇಕು. ವ್ಯವಹಾರ ಅಥವಾ ಉದ್ಯೋಗದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಈ ಅವಧಿಯಲ್ಲಿ ದಾಖಲೆಗಳು ಮತ್ತು ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಸ್ವಲ್ಪ ಅಜಾಗರೂಕತೆ ಕೂಡ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು, ಆದ್ದರಿಂದ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇರಿಸಿ.
ಗ್ರಹಣದ ಋಣಾತ್ಮಕ ಪರಿಣಾಮ ಕಡಿಮೆ ಮಾಡಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪರಿಹಾರ ಸೂಚಿಸಲಾಗಿದೆ. ಗ್ರಹಣ ಕಾಲದಲ್ಲಿ ‘ಓಂ ನಮಃ ಶಿವಾಯ’ ಅಥವಾ ನಿಮ್ಮ ಇಷ್ಟ ದೇವತೆಯ ಮಂತ್ರ ಜಪಿಸುವುದರಿಂದ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದು ಮಾನಸಿಕ ಶಾಂತಿಗೂ ಸಹಕಾರಿ. ಗ್ರಹಣ ಮುಗಿದ ನಂತರ ಅಕ್ಕಿ, ಹಾಲು ಅಥವಾ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡುವುದು ಮಂಗಳಕರ.

ನೋಡಿರಿ

