ಸೀಮಂತದ ದಿನ ಹೆಂಡತಿಗೆ ಗಂಡನ ಸರ್‌ಪ್ರೈಸ್‌ – ಹೆಲಿಕಾಪ್ಟರ್‌ನಿಂದ ಹೂವಿನ ಸುರಿಮಳೆ

ಸೀಮಂತದ ದಿನ ಹೆಂಡತಿಗೆ ಗಂಡನ ಸರ್‌ಪ್ರೈಸ್‌ – ಹೆಲಿಕಾಪ್ಟರ್‌ನಿಂದ ಹೂವಿನ ಸುರಿಮಳೆ

 ಮಂಗಳೂರಿನ ವ್ಯಕ್ತಿಯೊಬ್ಬರು ತನ್ನ ಮಡದಿಗಾಗಿ ಹೆಲಿಕಾಪ್ಟರ್‌ನಿಂದ ಹೂವಿನ ಸುರಿಮಳೆ ಸುರಿಸಿ ಅಚ್ಚರಿ ಮೂಡಿಸಿದ್ದಾರೆ. ತನ್ನ ಪತ್ನಿಗೆ ಸೀಮಂತದ ದಿನ ಪತಿ ಸರ್‌ಪ್ರೈಸ್‌ ನೀಡಲು ಈ ಪ್ಲ್ಯಾನ್‌ ಮಾಡಿದ್ದು ಆಕಾಶದಿಂದಲೇ ಹೂವಿನ ಸುರಿಮಳೆಗೈದಿದ್ದಾರೆ. ಈ ದೃಶ್ಯ ಭಾರಿ ವೈರಲ್  ಆಗಿದ್ದು ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ: ಬಾಯ್‌ಫ್ರೆಂಡ್‌ ಮಾತು ಬಿಟ್ಟಿದ್ದಕ್ಕೆ ಚಾಕು ಚುಚ್ಚಿದ್ಲು! –  ಪ್ರೀತಿ ಬಲೆಯಲ್ಲಿ ಯುವಕ ವಿಲವಿಲ!

ತನ್ನ ಮಡದಿಯ ಹುಟ್ಟಿದ ದಿನ ದುಬಾರಿ ಗಿಫ್ಟ್ ನೀಡುವುದು, ಆಕೆಯ ಇಷ್ಟದ ಸ್ಥಳಕ್ಕೆ ಪ್ರವಾಸ ಹೋಗುವುದು ಹೀಗೆ ನಾನಾ ವಿಡಿಯೊಗಳು ವೈರಲ್ ಆಗಿರುವುದನ್ನು ನೀವು ಕಂಡಿರಬಹುದು. ಆದರೆ ಮಂಗಳೂರಿನಲ್ಲಿ ನಡೆದ ಈ ಹೃದಯಸ್ಪರ್ಶಿ ದೃಶ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಪತಿ ಪತ್ನಿ ಮೇಲಿಟ್ಟಿರುವ ಪ್ರೀತಿ ಕಂಡು ಇಂತಹ ಗಂಡ ಪ್ರತಿಯೊಬ್ಬ ಹೆಣ್ಣುಮಗಳಿಗೂ ಸಿಗಬೇಕು ಎಂದು ಹೆಚ್ಚಿನವರು ಪ್ರತಿಕ್ರಿಯಿಸಿದ್ದಾರೆ.

https://x.com/i/status/2027061371624734823

ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಈ ವಿಶೇಷ ಸೀಮಂತ ಸಮಾರಂಭ ನಡೆದಿದ್ದು ಉದ್ಯಮಿ ಪ್ರಕಾಶ್ ತನ್ನ ಪತ್ನಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಪತ್ನಿಗೆ ಸರ್‌ಪ್ರೈಸ್‌ ನೀಡುವ ಸಲುವಾಗಿ ಹೆಲಿಕಾಪ್ಟರ್ ಮೂಲಕ ಹೂವಿನ ದಳಗಳನ್ನು ಸುರಿಸುವಂತೆ ವ್ಯವಸ್ಥೆ ಮಾಡಿದ್ದಾರೆ.ಸೀಮಂತದ ಸಂಭ್ರಮದಲ್ಲಿದ್ದ ಅತಿಥಿಗಳು ಹಾಗೂ ದಂಪತಿ ಗಾರ್ಡನ್‌ನಲ್ಲಿ ಸೇರಿದ್ದರು‌. ಆಗ ಅದೇ ಸಂದರ್ಭದಲ್ಲಿ ಆಕಾಶದಲ್ಲಿ ಹೆಲಿಕಾಪ್ಟರ್ ಆಗಮನವಾಗಿದೆ.‌ ವೇದಿಕೆಯ ಮೇಲಿದ್ದ ದಂಪತಿಯ ಮೇಲೆ ಹೆಲಿಕಾಪ್ಟರ್‌ನಿಂದ ವಿವಿಧ ಬಣ್ಣಗಳ ಹೂವಿನ ಪಕಳೆಗಳನ್ನು ಸುರಿಸಲಾಗಿದೆ. ಪತಿಯ ಈ ಪ್ಲ್ಯಾನ್‌ ನೋಡಿ ಗರ್ಭಿಣಿ ಪತ್ನಿ ಭಾವುಕರಾಗಿದ್ದಾರೆ. ಅಲ್ಲಿ ಸೇರಿದ್ದ ಜನರು ಈ ದೃಶ್ಯ ನೋಡಿ ವಿಡಿಯೊ ಮಾಡಿದ್ದು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಈ ದೃಶ್ಯ ಭಾರಿ ವೈರಲ್ ಆಗಿದ್ದು ಪತಿಯ ಪ್ರೀತಿಯನ್ನು ಬಹಳಷ್ಟು ಮಂದಿ ಹೊಗಳಿದ್ದಾರೆ.

Kishor KV