ಬಾಯ್‌ಫ್ರೆಂಡ್‌ ಮಾತು ಬಿಟ್ಟಿದ್ದಕ್ಕೆ ಚಾಕು ಚುಚ್ಚಿದ್ಲು! –  ಪ್ರೀತಿ ಬಲೆಯಲ್ಲಿ ಯುವಕ ವಿಲವಿಲ!

ಬಾಯ್‌ಫ್ರೆಂಡ್‌ ಮಾತು ಬಿಟ್ಟಿದ್ದಕ್ಕೆ ಚಾಕು ಚುಚ್ಚಿದ್ಲು! –  ಪ್ರೀತಿ ಬಲೆಯಲ್ಲಿ ಯುವಕ ವಿಲವಿಲ!

ಪ್ರೀತಿ ಕುರುಡು.. ಪ್ರೇಮಕ್ಕೆ ಕಣ್ಣಿಲ್ಲ ಎಂಬ ಮಾತಿದೆ. ಕೆಲವರು ಪ್ರೀತಿಸಿದವರ ಮೇಲೆ ತುಂಬಾ ಪೊಸೆಸ್ಸಿವ್‌ ಆಗಿರ್ತಾರೆ. ಪ್ರೀತಿಸಿದವರು ಎಲ್ಲಿ ದೂರ ಆಗ್ತಾರೆ ಅನ್ನೋ ಭಯ ಕಾಡುತ್ತೆ. ಇದೀಗ ಇಲ್ಲೊಬ್ಬಳು ಬಾಯ್‌ಫ್ರೆಂಡ್‌ ಮಾತು ಬಿಟ್ಟಿದ್ದಕ್ಕೆ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ.

ಇದನ್ನೂ ಓದಿ: ಬಂಗಾರದಲ್ಲಿ ಮಿಂಚಿದ ವಿಜಯ್, ರಶ್ಮಿಕಾ- ವಿರೋಶ್ ಧರಿಸಿರುವ ಆಭರಣಗಳ ವೈಶಿಷ್ಟ್ಯತೆಯೇನು?

ಪ್ರೇಯಸಿಯೊಬ್ಬಳು ತನ್ನ ಪ್ರೇಮಿ ಜಿಮ್ ಟ್ರೈನರ್‌ಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಿಯಕರ ತಮ್ಮಿಂದ ದೂರ ಆಗ್ತಿದ್ದಾನೆ ಎಂದು ಕೋಪಗೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. 27 ವರ್ಷದ ಜಿಮ್ ಟ್ರೈನರ್ ವೇಣುಗೋಪಾಲ್ ಚಾಕು ಇರಿತಕ್ಕೆ ಒಳಗಾಗಿರುವ ಪ್ರೇಮಿಯಾಗಿದ್ದಾರೆ.

ಏನಿದು ಘಟನೆ?

ಬಿಡದಿಯ ಸಿಲ್ಕ್ ಫಾರ್ಮ್‌ ಕ್ವಾಟ್ರಸ್ ಬಳಿ ನಿನ್ನೆ ರಾತ್ರಿ ಈ ದುರ್ಘಟನೆ ನಡೆದಿದೆ. ಕಳೆದ ಐದಾರು ವರ್ಷಗಳಿಂದ ಸುಧಾ ಹಾಗೂ ವೇಣುಗೋಪಾಲ್ ಪ್ರೀತಿಸುತ್ತಿದ್ದರು. ಆದ್ರೆ ಇತ್ತೀಚೆಗೆ ಈ ಜೋಡಿ ನಡುವೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಕಳೆದ ಕೆಲ ದಿನಗಳಿಂದ ವೇಣುಗೋಪಾಲ್, ಸುಧಾಳಿಂದ ಅಂತರ ಕಾಯ್ದುಕೊಂಡಿದ್ದ. ಈತ ನನ್ನಿಂದ ದೂರ ಸರಿಯುತ್ತಿದ್ದಾನೆ ಎಂದು ಕೋಪಗೊಂಡ ಸುಧಾ, ವೇಣುಗೋಪಾಲ್ ಅವರನ್ನು ಮನೆಗೆ ಕರೆದಿದ್ದಾಳೆ. ಮನೆಗೆ ಕರೆದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಾತುಕತೆ ವಿಕೋಪಕ್ಕೆ ತಿರುಗಿದ್ದು, ಸುಧಾ ವೇಣುಗೋಪಾಲ್ ಮೇಲೆ ಚಾಕುವಿನಿಂದ ಚುಚ್ಚಿದ್ದಾರೆ.

ಇನ್ನು ಲವರ್ ಬಾಯ್‌ ವೇಣುಗೋಪಾಲ್‌ಗೆ ಚಾಕು ಇರಿತ ನಡೆದ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಸುಧಾ ಶರಣಾಗಿದ್ದಾಳೆ. ಇನ್ನು ಮಾರಣಾಂತಿಕ ಹಲ್ಲೆಗೊಳಗಾಗಿರುವ ಯುವಕನಿಗೆ ಬಿಡದಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ವೇಣುಗೋಪಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shwetha M

Leave a Reply

Your email address will not be published. Required fields are marked *