ಬಂಗಾರದಲ್ಲಿ ಮಿಂಚಿದ ವಿಜಯ್, ರಶ್ಮಿಕಾ- ವಿರೋಶ್ ಧರಿಸಿರುವ ಆಭರಣಗಳ ವೈಶಿಷ್ಟ್ಯತೆಯೇನು?
ಮಹಾರಾಜನಂತೆ ಕಂಡ ವಿಜಯ್, ರಾಣಿಯಂತೆ ಕಂಡ ರಶ್ಮಿಕಾಗೆ ಶುಭಾಶಯಗಳ ಸುರಿಮಳೆ

ಬಂಗಾರದಲ್ಲಿ ಮಿಂಚಿದ ವಿಜಯ್, ರಶ್ಮಿಕಾ- ವಿರೋಶ್ ಧರಿಸಿರುವ ಆಭರಣಗಳ ವೈಶಿಷ್ಟ್ಯತೆಯೇನು?ಮಹಾರಾಜನಂತೆ ಕಂಡ ವಿಜಯ್, ರಾಣಿಯಂತೆ ಕಂಡ ರಶ್ಮಿಕಾಗೆ ಶುಭಾಶಯಗಳ ಸುರಿಮಳೆ

ವಿರೋಶ್ ಮದುವೆ ವೈಭವ ಮುಗಿದಿದೆ. ಇನ್ನೇನಿದ್ದರೂ ರಿಸೆಪ್ಷನ್ ಸಂಭ್ರಮ. ಇದರ ಮಧ್ಯೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಧರಿಸಿದ ಆಭರಣಗಳ ಬಗ್ಗೆ ಕುತೂಹಲ ಮೂಡಿಸಿದೆ. ವಿಶೇಷವೆಂದರೆ ಇಬ್ಬರೂ ಸಹ ಪುರಾತನ ಶೈಲಿಯ ಆಭರಣಗಳನ್ನು ಧರಿಸಿದ್ದರು.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ, ವಿಜಯ್‌ ದೇವರಕೊಂಡ ಕಲ್ಯಾಣ! – ಉದಯಪುರದಲ್ಲಿ ಶ್ರೀವಲ್ಲಿ ವಿವಾಹ!

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಅದ್ಧೂರಿಯಾಗಿ ನಡೆದಿದೆ. ಇಬ್ಬರ ಮದುವೆ ಫೋಟೋಗಳು ಸಖತ್ತಾಗಿದ್ದು, ವೈರಲ್ ಆಗಿದೆ. ಈ ಫೋಟೋಗಳಲ್ಲಿ ಹೈಲೆಟ್ ಆಗಿರುವುದು ಸೆಲೆಬ್ರಿಟಿ ಜೋಡಿ ವಿರೋಶ್ ಧರಿಸಿರುವ ಆಭರಣಗಳು ಮತ್ತು ಬಟ್ಟೆ. ಇಬ್ಬರೂ ಧರಿಸಿದ್ದ ಚಿನ್ನದ ಆಭರಣಗಳು ವಿಶೇಷವಾಗಿದ್ದವು. ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಸಾಕಷ್ಟು ಆಭರಣಗಳನ್ನು ಧರಿಸಿದ್ದರು. ಅದು ಕೂಡಾ ಪುರಾತನ ಶೈಲಿಯ ಆಭರಗಳನ್ನಷ್ಟೆ ಧರಿಸಿದ್ದರು. ಅದರಲ್ಲೂ ವಿಜಯ್ ದೇವರಕೊಂಡ ಅಂತೂ ಮಹಾರಾಜನ ರೀತಿಯ ಪೋಷಾಕು ಧರಿಸಿದ್ದರು. ರಶ್ಮಿಕಾಗಿಂತಲೂ ಜಾಸ್ತಿ ಆಭರಣಗಳನ್ನು ವಿಜಯ್ ದೇವರಕೊಂಡ ಧರಿಸಿದ್ದರು.

ವಿಜಯ್ ದೇವರಕೊಂಡ ಕೊರಳಲ್ಲಿ ಕಂಠಿಹಾರವಿತ್ತು. ಆ ಚಿನ್ನದ ಹಾರ ಪುರಾತನ ಕಾಲದ ರಾಜರ ಹಾರವನ್ನು ನೆನಪಿಸುವಂತಿತ್ತು. ಅದರ ಜೊತೆಗೆ ಎರಡು ಚಿನ್ನದ ಸರವೂ ಇತ್ತು. ಅದನ್ನು ಗುಡಿ ಹಾರ ಅಥವಾ ದೇವಾಲಯದ ಹಾರ ಎನ್ನುತ್ತಾರಂತೆ. ಇನ್ನು ವಿಜಯ್ ದೇವರಕೊಂಡ ಎರಡೂ ಮಣಿಕಟ್ಟಿಗೆ ಧರಿಸಿದ್ದ ಆಭರಣವಂತೂ ಅದ್ಭುತವಾಗಿತ್ತು. ಹಳೆಯ, ಧಾರಾವಾಹಿ, ಸಿನಿಮಾಗಳಲ್ಲಿ ದೇವರುಗಳು ಧರಿಸುತ್ತಿದ್ದ ಆಭರಣದಂಥಹದ್ದನ್ನೇ ವಿಜಯ್ ದೇವರಕೊಂಡ ಧರಿಸಿದ್ದರು. ಮಣಿಕಟ್ಟಿಗೆ ಧರಿಸಿದ್ದ ಆಭರಣ ದೊಡ್ಡದಾಗಿಯೂ, ಕಸೂರಿ ಕೆಲಸದಿಂದಲೂ ತುಂಬಿದ್ದು ಸಖತ್ ಗಮನ ಸೆಳೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಆಭರಣವನ್ನು ‘ಥ್ಯಾನೋಸ್ ಜ್ಯುವೆಲರಿ’ ಎಂದು ಸಹ ಕರೆದಿದ್ದಾರೆ. ಇನ್ನು ತೋಳಿಗೆ ತೋಳು ಬಂಧಿ ಅಥವಾ ವಂಕಿಯನ್ನು ಸಹ ಬಲಗೈ ತೋಳಿಗೆ ಧರಿಸಿದ್ದರು. ಎರಡೂ ಕಿವಿಗಳಿಗೆ ಸುಂದರವಾದ ದುಂಡನೆಯ ಓಲೆಗಳನ್ನು ವಿಜಯ್ ಧರಿಸಿದ್ದರು. ಹಣೆಗೆ ಚಿನ್ನದ ಬಾಸಿಂಗ ಧರಿಸಿದ್ದರು. ಬೆರಳುಗಳಿಗೆ ಒಂದು ನಿಶ್ಚಿತಾರ್ಥದ ಉಂಗುರ ಮತ್ತೊಂದು ಮದುವೆಯ ಉಂಗುರ ಧರಿಸಿದ್ದರು. ಎರಡೂ ಕಾಲಿಗೆ ಚಿನ್ನದ ಕಡಗ, ಸೊಂಟಕ್ಕೆ ಒಡ್ಯಾಣವನ್ನು ಸಹ ವಿಜಯ್ ದೇವರಕೊಂಡ ಧರಿಸಿದ್ದರು. ಈ ಎಲ್ಲ ಆಭರಣಗಳು ಪುರಾತನ ಡಿಸೈನ್​​ಗಳನ್ನು ಒಳಗೊಂಡಿದ್ದು ವಿಶೇಷ.

ವಿಜಯ್ ಧರಿಸಿದ್ದ ಚಿನ್ನ ಹಲವರ ಕಣ್ಣು ಕುಕ್ಕಿದೆ. ಇನ್ನು ರಶ್ಮಿಕಾ ಮಂದಣ್ಣ ಕೂಡಾ ಬಂಗಾರ ಧರಿಸಿ ಮಿರ ಮಿರ ಮಿಂಚುತ್ತಿದ್ದರು. ಇವರ ಸೀರೆ, ಸೀರೆಯ ಬ್ಲೌಸ್ ಕೂಡಾ ಬಂಗಾರದ್ದೇ. ಜೊತೆಗೆ ತಲೆಮೇಲೆ ಇರುವ ಬಾಸಿಂಗ ಕೂಡಾ ಚಿನ್ನದ್ದೇ. ಕೊರಳಲ್ಲಿ, ಕೈಯಲ್ಲಿ, ಕಾಲಲ್ಲಿ, ಸೊಂಟದಲ್ಲಿ ಬರೀ ಚಿನ್ನವನ್ನೇ ಧರಿಸಿದ್ದರು.

Sulekha

Leave a Reply

Your email address will not be published. Required fields are marked *