293 ರನ್‌ಗೆ ಪಡಿಕ್ಕಲ್ ಪಡೆ ಆಲೌಟ್ – ಫೈನಲ್ ಗೆಲ್ಲೋ ಕರ್ನಾಟಕದ ಕನಸು ಭಗ್ನ

293 ರನ್‌ಗೆ  ಪಡಿಕ್ಕಲ್ ಪಡೆ ಆಲೌಟ್ –  ಫೈನಲ್ ಗೆಲ್ಲೋ  ಕರ್ನಾಟಕದ  ಕನಸು ಭಗ್ನ

ರಣಜಿ ಟ್ರೋಫಿ 2026ರ ಫೈನಲ್‌ ಗೆಲ್ಲೋ ಕರ್ನಾಟಕದ ಕನಸು ಭಗ್ನವಾಗಿದೆ. ಇನ್ನೂ ಜಮ್ಮು ಕಾಶ್ಮೀರ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿದ ಹಿನ್ನೆಲೆ, ಕರ್ನಾಟಕದ ತಂಡ ಈ ಸ್ಕೋರ್ ಕಲೆ ಹಾಕೋಕೆ ಒದ್ದಾಡಿತು. ಜಮ್ಮು ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್‌ಗಳಿಸಿತ್ತು. ಈ ರನ್ ಬೆನ್ನಟ್ಟಿದ ಕರ್ನಾಟಕ 293 ರನ್‌ಗೆ ಅಲೌಟ್ ಆಗಿದೆ.

ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ ಕಳಪೆ ಪ್ರದರ್ಶನ ತೋರಿಸಿತು. ಕೆ.ಎಲ್​ ರಾಹುಲ್, ದೇವದತ್​​ ಪಡಿಕ್ಕಲ್​, ಕರುಣ್​ ನಾಯರ್​, ಸ್ಮರಣ್​ ರವಿಚಂದ್ರನ್​ ಪೆವಿಲಿಯನ್ ಪರೇಡ್​ ನಡೆಸಿದ್ರು. ಏಕಾಂಗಿ ಹೋರಾಟ ನಡೆಸಿದ ಮಯಾಂಕ್ ಅಗರ್​ವಾಲ್​ ಶತಕ ಸಿಡಿಸಿ ತಂಡಕ್ಕೆ ಆಸರೆಯಾದ್ರೂ ಕೂಡ ಪ್ರಯೋಜನವಾಗಿಲ್ಲ.. ಮಯಾಂಕ್ ಅಗರ್​ವಾಲ್ 266 ಬಾಲ್ ಎದುರಿಸಿ 160 ರನ್‌ಗಳಿಸಿದ್ರು. ನಂತ್ರ ಯಾರೂ ಕೂಡ ಕರ್ನಾಟಕದ ಪರ ಆಡಿಲ್ಲ.. ಹೀಗಾಗಿ ಕರ್ನಾಟಕ 293 ರನ್‌ಗೆ ಆಲೌಟ್ ಆಯ್ತು.

ಇದನ್ನೂ ಓದಿ: ಇತ್ತ ಪಂದ್ಯ ಗೆದ್ದ ಸಂಭ್ರಮ ಅತ್ತ ತಂದೆಯ ಸಾವಿನ ಶೋಕ – ರಿಂಕು ಸಿಂಗ್ ತಂದೆ ವಿಧಿವಶ

ಇವತ್ತು ಮತ್ತು ನಾಳೆ ಎರಡೇ ದಿನ ಪಂದ್ಯ ಇರೋದ್ರಿಂದ ಈ ಪಂದ್ಯ ಡ್ರಾ ಆಗಲಿದೆ. ಸೆಕೆಂಡ್ ಇನ್ನಿಂಗ್ಸ್ ಕಂಪ್ಲೀಟ್ ಆಗಲ್ಲ.. ಹೀಗಾಗಿ ಪೈನಲ್ ಡ್ರಾ ಆಗೋದ್ರಿಂದ ಮೊದಲ ಇನ್ನಿಂಗ್ಸ್ ನಲ್ಲಿ ಯಾರು ಮುನ್ನಡೆ ಕಾಯ್ದುಕೊಂಡಿರುತ್ತಾರೋ ಆ ತಂಡವನ್ನು ವಿನ್ನರ್ ಎಂದು ಘೋಷಿಸಲಾಗುತ್ತೆ. ಮೊದಲ ಇನ್ನಿಂಗ್ಸ್ನಲ್ಲಿ ಜಮ್ಮು ಕಾಶ್ಮೀರ 584 ರನ್ಗಳಿಸಿದ್ರೆ, ಕರ್ನಾಟಕ 293ರನ್ಗೆ ಆಲ್ಟ್ ಆಗಿದೆ. ಹೀಗಾಗಿ ಮೊದಲ ಇನ್ನಿಂಗ್ಸ್ನಲ್ಲಿ ಹೆಚ್ಚು ರನ್ಗಳಿಸಿರೋ ಜಮ್ಮು ಕಾಶ್ಮೀರವನ್ನೇ ರಣಜಿ ವಿನ್ನರ್ ಎಂದು ಘೋಷಿಸಲಾಗುತ್ತೆ.

Kishor KV

Leave a Reply

Your email address will not be published. Required fields are marked *